ರಾಹುಲ್ ಎಂಬ ಕೃತಕ ಮಿಂಚು


ರಾಹುಲ್ ಮಿಂಚು ಮತ್ತೊಮ್ಮೆ ರಾಜ್ಯದಲ್ಲಿ ಮಿಂಚಿದೆ. ಕಾಂಗ್ರೆಸ್ನ ಯುವರಾಜ ಮತ್ತು ಭಾವಿ ಪ್ರಧಾನಿ ಎಂದೇ ಬಿಂಬಿತರಾಗುತ್ತಿರುವ  ರಾಹುಲ್ ಗಾಂಧಿಯವರು ಸಂವಾದ ಎಂಬ ತಮ್ಮ ನೆಚ್ಚಿನ ಕಾರ್ಯಕ್ರಮದೊಂದಿಗೆ ಸಾಂಸ್ಕೃತಿಕ ನಗರಿಗೆ ಭೇಟಿ ನೀಡಿದ್ದು ನಿಜಕ್ಕೂ  ಮೆಚ್ಚುವಂತದ್ದು. ಪ್ರಶ್ನೆಯೇನೆಂದರೆ ಮೈಸೂರಿನಲ್ಲಿ ಅವರು ನಡೆಸಿಕೊಟ್ಟ ಸಂವಾದದಲ್ಲಿ ಈ ಕೆಳಗಿನ ಪ್ರಚಲಿತ ಪ್ರಶ್ನೆಗಳಿಗೆ ಉತ್ತರಿಸಿದ್ದರೆ ಚೆನ್ನ  ಇರುತ್ತಿತ್ತು ಎಂಬುದು.
1.1984 ರ ಭೂಪಾಲ್ ಅನಿಲ ದುರಂತದ ಪ್ರಮುಖ ಆರೋಪಿ ಆಂಡರ್ಸನ್ ದೇಶದಿಂದ ಪರಾರಿಯಾಗಲು ಸಹಾಯ ಮಾಡಿದ್ದು ಯಾರು?
2.ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ದೆಹಲಿಯ ಅವರ ಪಕ್ಷದ ಸಕರ್ಾರ ದಲಿತರ ಕಲ್ಯಾಣಕ್ಕೆ ಮೀಸಲಿಟ್ಟಿದ್ದ ಹಣ ಬಳಸಿಕೊಂಡ ಆರೋಪ ಕೇಳಿ ಬಂದಿದೆ. ಈ ಬಗ್ಗೆ ರಾಹುಲ್ಜೀಯವರ ಅಭಿಪ್ರಾಯವೇನು?
3.ಮಾಧ್ಯಮಗಳು ರಾಹುಲ್ಗಾಂಧಿಯವರನ್ನು ಮುಂದಿನ ಪ್ರಧಾನಿಯೆಂದು ಬಿಂಬಿಸುತ್ತಿವೆ . ಯಾಕೆ ಅವರ ಕುಟುಂಬದ ಮೂವರು ಪ್ರಧಾನಿಗಳಗಿದ್ದು ಸಾಕಾಗಲಿಲ್ಲವೇ? 120 ಕೋಟಿಗೂ ಮಿಕ್ಕಿ ಜನಸಂಖ್ಯೆ ಇರುವ ಒಂದು ಬೃಹತ್ ದೇಶವನ್ನು ಒಂದೇ ಕುಟುಂಬಕ್ಕೆ ಜಹಗೀರು ಬರೆದುಕೊಡುವುದು ಎಷ್ಟು ಸರಿ?                                                                                                                                                                 4.  4..ಮಾತೆತ್ತಿದರೆ ರಾಹುಲ್ ಗಾಂಧಿಯವರು ಉತ್ತರ ಪ್ರದೇಶಕ್ಕೆ ಭೇಟಿನೀಡುವುದು, ಆ ರಾಜ್ಯದಲ್ಲಿ ಪದೇ ಪದೇ ಗೊಂದಲವನ್ನುಂಟುಮಾಡುವುದು. ಯಾಕೆ ದಲಿತ ಮುಖ್ಯಮಂತ್ರಿ (ಮಾಯಾವತಿ) ಯೊಬ್ಬರು ನೆಮ್ಮದಿಯಿಂದ ರಾಜ್ಯವಾಳುವುದು ರಾಹುಲ್ಗಾಂಧಿಯವರಿಗೆ ಇಷ್ಟವಿಲ್ಲವೇ?
5. ಜಾತಿ ಆಧಾರಿತ ಜನಗಣತಿ ಮತ್ತು ಅಲ್ಪಸಂಖ್ಯಾತರಿಗೆ ಮೀಸಲಾತಿ ಒದಗಿಸಿಕೊಡುವ  ರಂಗನಾಥ ಮಿಶ್ರ ವರದಿ ಜಾರಿ ಬಗ್ಗೆ ಮೀನಾಮೇಷ ಎಣಿಸುತ್ತಿರುವುದೇಕೆ?
ಈ ಎಲ್ಲಾ ಪ್ರಶ್ನೆಗಳಿಗೆ, ಅನುಮಾನಗಳಿಗೆ ರಾಹುಲ್ಜೀಯವರು ಉತ್ತರಿಸಿದ್ದರೆ ಸೂಕ್ತವಿರುತ್ತಿತ್ತು.
ಅಂದಹಾಗೆ ಉತ್ತರಪ್ರದೇಶ ರಾಜ್ಯದಲ್ಲಿ ಪದೇ ಪದೇ ದಲಿತರ  ಮನೆಗಳಲ್ಲಿ  ವಾಸ್ತವ್ಯ ಹೂಡುವ  ರಾಹುಲ್ಜೀಯವರು  ಮೈಸೂರಿಗೆ ಬಂದಾಗ ದಲಿತರ ಮನೆಯಲ್ಲಿ ಏಕೆ ವಾಸ್ತವ್ಯ ಹೂಡಲಿಲ್ಲ? (ಹಾಗೇನಾದರು ಹೂಡಿದ್ದರೆ ಮೈಸೂರಿನ ಅಶೋಕಪುರಂ, ಕೈಲಾಸಪುರಂ ಮತ್ತು ಗಾಂಧಿನಗರಗಳಿಗೆ ಅಂತಹ ಅದೃಷ್ಟ ದೊರಕುತ್ತಿತ್ತು!) ಯಾಕೆ ಕನರ್ಾಟಕದ ದಲಿತರ ಮತಗಳು ರಾಹುಲ್ಗಾಂಧಿಯವರಿಗೆ ಬೇಡವೇ? ಅಥವಾ ಈಗಾಗಲೇ ರಾಜ್ಯದ ದಲಿತರು  ಕಾಂಗ್ರೆಸ್ ತೆಕ್ಕೆಯಲ್ಲಿದ್ದಾರೆ ಆದ್ದರಿಂದ ಕನರ್ಾಟಕದಲ್ಲಿ ಅವರ ಮನೆಗಳಲ್ಲಿ ವಾಸ್ತವ್ಯ ಹೂಡುವ ಅಗತ್ಯವಿಲ್ಲ ಎಂದು ರಾಹುಲ್ಜೀಯವರು ಭಾವಿಸಿದರೆ?
ಕಡೆಯದಾಗಿ ಹೇಳುವುದದರೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನೈಜ ಸಂವಾದ ನೆಡೆಯಬೇಕಾದ್ದು ಪಾಲರ್ಿಮೆಂಟ್ ನಲ್ಲಿ. ಬೀದಿಯಲ್ಲಲ್ಲ. ಆದರೂ  ಸಾರ್ವಜನಿಕವಾಗಿ ತಮ್ಮ ಇಮೇಜ್ ಬೆಳೆಸಿಕೊಳ್ಳಲು ರಾಹುಲ್ಗಾಂಧಿಯವರು ಹೀಗೆ ಬಂದು ಸುಮ್ಮನೆ ಮುಖ ತೋರಿಸಿ   ಪೂರ್ವ ನಿರ್ಧರಿತವಾಗಿ ಇಂತಿಂತಹವರಿಗೆ ಇಂತಿಂತಹದೆ ಪ್ರಶ್ನೆಗಳನ್ನು ಕೇಳಿ ಎಂದು ಸಂವಾದ ನಡೆಸಿ ಹಾಗೆ ಹೋಗುವುದು,  ಕೃತಕ ಮಳೆಯಂತೆ ಕೃತಕ ಮಿಂಚಾಗುತ್ತದೆ ಅಷ್ಟೆ. ನಿಸರ್ಗದತ್ತ ಸಹಜ ಮಿಂಚಾಗುವುದಿಲ್ಲ!
ರಘೋತ್ತಮ ಹೊ. ಬ
ಚಾಮರಜನಗರ- 571313
ಮೊ; 9481189116

Leave a comment