Posts Tagged ‘ಬೌದ್ದಧರ್ಮ’

ಖೈರ್ಲಂಜಿ: ದಲಿತರಿಗೆ ಮರೀಚಿಕೆಯಾಗುತ್ತಿರುವ ನ್ಯಾಯ


ಅದು ಸೆಪ್ಟೆಂಬರ್ 29 2006. ಆ ದಿನ ಸಂಜೆ ಐದು ಗಂಟೆಯ ಸಮಯ . ಮಹಾರಾಷ್ಟ್ರದ ಬಂಡಾರ ಜಿಲ್ಲೆಯ ಮೊಹಾಲಿ ತಾಲ್ಲೂಕಿನ ಖೈಲರ್ಾಂಜಿ ಗ್ರಾಮದ ಏಕೈಕ  ದಲಿತ ಕುಟುಂಬ ತನ್ನ ಪಾಡಿಗೆ ತಾನು  ನಿತ್ಯದ ಕಾಯಕದಲ್ಲಿ ತೊಡಗಿತ್ತು. ಶ್ರೀ ಭಯ್ಯಾಲಾಲ್ ಭೂತ್ ಮಾಂಗೆ, ಅವರ ಶ್ರೀಮತಿ ಸುರೆಖ ಭೂತ್ ಮಾಂಗೆ  ಮಕ್ಕಳಾದ ಪ್ರಿಯಾಂಕ, ರೋಶನ್, ಸುಧೀರ್  ಆ ಕುಟುಂಬದ ಸದಸ್ಯರು.  ಭಯ್ಯಾಲಾಲ್ ಭೂತ್ ಮಾಂಗೆ ಹೊರಗೆ ಹೋಗಿದ್ದ ಆ ಸಮಯದಲದ್ಲಿ ಶ್ರೀಮತಿ ಸುರೇಖ ಅಡುಗೆ ಮಾಡುತ್ತಿದ್ದರು. ಮೂವರು ಮಕ್ಕಳಾದ ಪ್ರಿಯಾಂಕ, ರೋಹನ್, ಸುಧೀರ್ ಓದುತ್ತಾ ಕುಳಿತ್ತಿದ್ದರು. ಬಹುಶಃ ಅವರುಗಳಿಗೆ ಗೊತ್ತಿರಲಿಲ್ಲ ,ತಾವು ಓದುತ್ತಿರುವುದು ತಮ್ಮ ಜೀವನದ ಕಡೆಯ  ಅಧ್ಯಾಯವನ್ನು ಎಂದು! ಏಕೆಂದರೆ  ಆ ಸಮಯದಲ್ಲಿ ಸುಮಾರು 50 ರಿಂದ 60 ರಷ್ಟಿದ್ದ ಕ್ರೂರ ಮನಸ್ಸಿನ ಜಾತೀಯ ಹಿಂದುಗಳ ಗುಂಪೊಂದು ಅವರುಗಳ ಮೇಲೆ ಮುಗಿಬಿದ್ದಿತ್ತು ರಣಹದ್ದುಗಳಂತೆ. ಆ ಹದ್ದುಗಳಲ್ಲಿ ಜಾತೀಯತೆಯ ವಿಷಜ್ವಾಲೆ ತುಂಬಿತ್ತು, ದೌರ್ಜನ್ಯದ ಅಟ್ಟಹಾಸ ಕೇಕೆ ಹಾಕುತಿತ್ತು. ಅಂತಹ ಅಟ್ಟಹಾಸದ ಜ್ವಾಲೆಗೆ ಖೈಲರ್ಾಂಜಿಯ ಆ ಬಡ ಕುಟುಂಬ ಧಗಧಗನೆ ಉರಿದು ಹೋಯಿತು.

ಆದರೆ ಅದು ಉರಿದ ಪರಿ? ಬಹುಶಃ ಅದನ್ನು ಹೇಳಿಕೊಳ್ಳಲು ಮನಸ್ಸು ಒಂದರೆಘಳಿಗೆ  ಬೆಚ್ಚಿಬೀಳುತ್ತದೆ. ಬರೆಯಲು ಕೈ ಗಡಗಡ ನಡುಗುತ್ತದೆ. ಭಯದಿಂದಲ್ಲ! ರೋಷದಿಂದ. ಏಕೆಂದರೆ  ಅಲ್ಲಿ ನಡೆದ ದೌರ್ಜನ್ಯ ತನ್ನ ಮಿತಿಯನ್ನು ಮೀರಿತ್ತು. ದಾಳಿ ನಡೆದ ಆ ಪರಿ ಎಂತಹವರನ್ನು ಬೆಚ್ಚಿಬೀಳಿಸುವಂತ್ತಿತ್ತು.

ಸತ್ಯ ಶೋಧನಾಸಮಿತಿಯ ವರದಿಯ ಪ್ರಕಾರವೇ ಹೇಳುವುದಾದರೆ, ಆ ಗುಂಪು ಭೂತ್ಮಾಂಗೆಯ  ಕುಟುಂಬದ ಅ ನಾಲ್ವರನ್ನು ಹೊಡೆಯಲು ಪ್ರಾರಂಭಿಸಿತು. ದರದರನೆ ಎಲ್ಲರನ್ನು ಗುಡಿಸಲಿನಿಂದ ಹೊರಗೆ ಎಳೆದು ತಂದ ಗುಂಪು, ಎಲ್ಲರ ಬಟ್ಟೆಗಳನ್ನು ಕಿತ್ತೆಸೆದು ನಗ್ನರನ್ನಾಗಿಸಿತು.  ಅಲ್ಲದೆ ರೋಷನ್ನನ್ನು ತನ್ನ ಅಕ್ಕ  ಪ್ರಿಯಾಂಕಳ ಜೊತೆ ಬಹಿರಂಗವಾಗಿ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸಿತು! ರೋಷನ್ ಅದಕ್ಕೆ ನಿರಾಕರಿಸಿದ್ದಕ್ಕೆ ಅವನ ಮಮರ್ಾಂಗಕ್ಕೆ ತೀವ್ರವದ ಏಟುಗಳು ಬಿದ್ದವು. ಅಲ್ಲದೆ ಪ್ರಿಯಾಂಕಳನ್ನು ಬೆತ್ತಲೆಗೊಳಿಸಿದ ಗುಂಪು,  ಅವಳ ವಕ್ಷ ಸ್ಥಳಕ್ಕೆ ಮಚ್ಚಿನಿಂದ ಹೊಡೆಯಿತು. ಅವಳ ಮಮರ್ಾಂಗಕ್ಕೆ ಚೂಪಾದ ದೊಣ್ಣೆಯಿಂದ ಚುಚ್ಚಿತು. ಅದಕ್ಕೂ ಮೊದಲು 19 ವರ್ಷದ ಅವಳನ್ನು ಗುಂಪು ಬಹಿರಂಗವಾಗಿಯೇ ಸಾಮೂಹಿಕವಾಗಿ ಅತ್ಯಾಚಾರ ಮಾಡಿತು. ದುರಂತವೆಂದರೆ ಇದನ್ನು ಅಲ್ಲಿ ನೆರೆದಿದ್ದ ,ಮೇಲ್ಜಾತಿ ಹೆಂಗಸರು ಬೆಂಬಲಿಸಿದರು! ಅಲ್ಲದೆ ಗಂಡಸರನ್ನು ಹಾಗೆ ಮಾಡುವಂತೆ ಜೋರಾಗಿ ಕೂಗುತ್ತಾ ಮತ್ತಷ್ಟು ಹಿರಿದುಂಬಿದಸಿದರು! ಅಂತಿಮವಾಗಿ ಶ್ರೀಮತಿ ಸುರೇಖಾರನ್ನು ಅವರ ಮೂವರು ಮಕ್ಕಳ ಎದುರಿನಲ್ಲಿಯೇ ಸಾಮೂಹಿಕವಾಗಿ ಅತ್ಯಾಚಾರ ಮಾಡಿದ ಗುಂಪು ತಾಯಿ, ಮಗಳು ಮತ್ತು ತಮ್ಮಂದಿರಿಬ್ಬರನ್ನು ಒಳಗೊಂಡಂತೆ ನಾಲ್ವರನ್ನು ಗ್ರಾಮದ ತುಂಬೆಲ್ಲಾ ಅಟ್ಟಾಡಿಸಿತು. ದೌರ್ಜನ್ಯದ ಮದ ಏರಿದ ಆ ಗುಂಪು ಆ ನಾಲ್ವರನ್ನು ಕೊಂದು ಹೆಣಗಳನ್ನು ಸಮೀಪದ ನಾಲೆಗೆ ಎಸೆಯಿತು. ತನ್ಮೂಲಕ ದಲಿತರ ಮೇ;ಲಿನ ದೌರ್ಜನ್ಯದ ಮತ್ತೊಂದು ರಕ್ತಸಿಕ್ತ ಪುಟ ಇತಿಹಾಸವನ್ನು ಸೇರಿತು.

ಹಾಗಿದ್ದರೆ ಈ ಭೀಕರ ಹತ್ಯೆ ನಡೆದದ್ದು ಏತಕ್ಕೆ? ಪ್ರಕರಣವೊಂದರಲ್ಲಿ ಸವಣರ್ೀಯ ವ್ಯಕ್ತಿಯೊಬ್ಬನ ವಿರುದ್ಧ ಭೂತ್ಮಾಂಗೆಯ ಕುಟುಂಬ ಸಾಕ್ಷಿ ಹೇಳಿದ್ದಕ್ಕೆ ನಡೆದ ಸೇಡಿನ ಹತ್ಯೆ ಇದು ಎಂದು ಪೋಲೀಸ್ ಮತ್ತು ಕೋಟರ್ು ಹೇಳುತ್ತವೆಯಾದರೂ ಇದರ ಹಿಂದೆ ಒಂದು ಭಯಾನಕ ಪಿತೂರಿ ಇರುವುದನ್ನು ಅವು ಗಮನಿಸಲು ಹೋಗಿಲ್ಲ . ಮಂಡಲ್ ವರದಿಯ ವಿರುದ್ಧ “ಕಮಂಡಲ ಚಳುವಳಿ”ಯನ್ನು  ಸಂಘಟಿಸಿ ಮಂಡಲ್ ವರದಿಯನ್ನು ದಿಕ್ಕು ತಪ್ಪಿಸಿದ್ದಂತದ್ದೆ ಮಾದರಿಯ ಪಿತೂರಿ ಇದು. ನಿಜ, ಮಂಡಲ್ ವರದಿಯ ವಿರುದ್ಧ ನಡೆದ  ಆ ಪಿತೂರಿಯ ಹಿಂದೆ ಇದ್ದದ್ದು ಸಂಘ ಪರಿವಾರ. ಖೈಲರ್ಾಂಜಿ ಹತ್ಯೆಯ  ಹಿಂದೆ ಇದ್ದದ್ದು ಕೂಡ ಅದೇ ಸಂಘ ಪರಿವಾರದ ಪಿತೂರಿ ಎನ್ನುತ್ತವೆ ಬಲ್ಲಮೂಲಗಳು! ಹಾಗಿದ್ದರೆ ಆ ಪಿತೂರಿಯಾದರೂ ಎಂತಹದ್ದು?

ಅದು ಘಟನೆ ನಡೆದ ಆ ವರ್ಷಕ್ಕೆ ಸಂಬಂದಿಸಿದ್ದು. 2006 ಬಾಬಾಸಾಹೇಬ್ ಅಂಬೇಡ್ಕರ್ರವರು ತಮ್ಮ ಲಕ್ಷ್ಷಾಂತರ ಅನುಯಾಯಿಗಳೊಂದಿಗೆ ನಾಗಪುರದ ದೀಕ್ಷಾ ಭೂಮಿಯಲ್ಲಿ 1956 ಅಕ್ಟೋಬರ್ 14 ರಂದು   ಬೌದ್ಧ ಧರ್ಮ ಸ್ವೀಕರಿಸಿದ ಘಟನೆಯ ಐವತ್ತನೆಯ ವರ್ಷ.  ಅಂಬೇಡ್ಕರರು ಬೌದ್ದಧರ್ಮ ಸ್ವೀಕರಿಸಿದ  ಸಂಭ್ರಮದ ಆ ಸುವರ್ಣ ಮಹೋತ್ಸವವನ್ನಾಚರಿಸಲು  ಆ ವರ್ಷ ಸೆಪ್ಟೆಂಬರ್ ಅಕ್ಟೋಬರ್ನ ಆ ಸಮಯದಲ್ಲಿ ದೆಶಾದ್ಯಂತ ಸಂಭ್ರಮದ ಸಿದ್ಧತೆ ನಡೆದಿತ್ತು.  ಸುವರ್ಣ ಮಹೋತ್ಸವದ ಈ ಸಂಧರ್ಬದಲ್ಲಿ ಮತ್ತೆ ಹತ್ತು ಲಕ್ಷ ಮಂದಿ ನಾಗಪುರದ ದೀಕ್ಷಾಭೂಮಿಯಲ್ಲಿ ಬೌದ್ಧಧರ್ಮ ಸ್ವೀಕರಿಸುವ ಸಿದ್ಧತೆ ಕೂಡ ಭರದಿಂದ ಸಾಗಿತ್ತು. ಕ್ರೂರತನದ ಪರಮಾವಧಿಯೆಂದರೆ, ದಲಿತರು ಇತ್ತ ಸಿದ್ಧತೆಯಲ್ಲಿ ತೊಡಗಿದ್ದರೆ  ಸಂಘಪರಿವಾರ ಇವರನ್ನು ಡಿಸ್ಟಬರ್್  ಮಾಡುವುದು ಹೇಗೆ ಎಂದು ಸಂಚು ರೂಪಿಸತೊಡಗಿತ್ತು! ಅಂತಹ ವ್ಯವಸ್ಥಿತ ಸಂಚಿನ, ಪಿತೂರಿಯ ಭಾಗವಾಗಿ ನಡೆದ ಘಟನೆಯೇ ಖೈಲರ್ಾಂಜಿಯ ಭೀಕರ ಹತ್ಯೆ. ಯಾಕೆಂದರೆ ಆ ಘಟನೆಯಲಿ ್ಲಮುಖ್ಯ ಪಾತ್ರ ವಹಿಸಿದ ಆರೋಪಿ ಭಾಸ್ಕರ್ ಕಾವಡೆ ಸ್ಥಳೀಯ ಬಿಜೆಪಿ ಮುಖಂಡ. ಇನ್ನು ಆತ ಸಂಘಪರಿವಾರದ ಸದಸ್ಯ ಎಂದು ಬೇರೆ ಹೇಳಬೇಕಾಗಿಲ್ಲ!

ಹತ್ಯೆ ನಡೆಯುತ್ತಿದ್ದಂತೆ ದೇಶದಾದ್ಯಂತ ದಲಿತ ಸಂಘಟನೆಗಳು ಪ್ರತಿಭಟನೆಗಿಳಿದವು. ತಪ್ಪಿತಸ್ಥರ ವಿರುದ್ಧ ಉಗ್ರ ಕ್ರಮ ಕೈಗೊಳ್ಳುವಂತೆ ಧರಣಿ ಹೋರಾಟ ನಡೆಸಿದವು. ಒಂದರ್ಥದಲಿ ಸಂಘಪರಿವಾರದ ಸಂಚು ಫಲಿಸಿತ್ತು. ಖೈಲರ್ಾಂಜಿ ಹತ್ಯೆಯ ಸೂತಕದ ಹಿಂದೆ ಬಾಬಾಸಹೇಬರು ಬೌದ್ದಧರ್ಮ ಸ್ವೀಕರಿಸಿದ ಸುವರ್ಣ ಮಹೋತ್ಸವದ ಸಂಭ್ರಮ ಕರಗಿಹೋಯಿತು.

ನಾಗಪುರದಲ್ಲಿ  ಸಂಘಪರಿವಾರದ ಈ ಸಂಚು ಇನ್ನೂ ನಿಂತಿಲ್ಲ. ಅದಕ್ಕೋಸ್ಕರ ಪ್ರತ್ಯಕ್ಷವಾಗಿ ಕಂಡ ಘಟನೆ ಯೊಂದನ್ನು ಇಲ್ಲಿ ಹೇಳಲೇಬೇಕಾಗಿದೆ.

ನಾಗಪುರದ ದೀಕ್ಷಾಭೂಮಿ ದಲಿತರಿಗೆ ಪುಣ್ಯ ಭೂಮಿ. ಮುಸಲ್ಮಾನರಿಗೆ ಮೆಕ್ಕಾ ಹೇಗೋ, ಕ್ರೈಸ್ತರು ಮತ್ತು ಯಹೂದ್ಯರಿಗೆ ಜೆರೂಸಲೆಂ ಹೇಗೋ, ಹಿಂದೂಗಳಿಗೆ ಕಾಶಿ ಮತ್ತಿತರ ಸ್ಥಳಗಳು ಹೇಗೋ ಹಾಗೆ ದಲಿತರಿಗೆ ನಾಗಪುರದ ದೀಕ್ಷಾಭೂಮಿ. ಪ್ರತಿವರ್ಷ ಅಕ್ಟೋಬರ್ ತಿಂಗಳಲ್ಲಿ ಇಲ್ಲಿಗೆ 50 ಲಕ್ಷಕ್ಕೂ ಅಧಿಕ ಮಂದಿ ಭೇಟಿ ನೀಡುತ್ತಾರೆ. ಬಾಬಾಸಾಹೇಬರ ಚಿಂತನೆಗಳನ್ನು ಹಂಚಿಕೊಳ್ಳುತ್ತಾರೆ. ಶುಭ್ರ ಬಿಳಿ ವಸ್ತ್ರ ಧರಿಸಿ ದೇಶದ  ಮೂಲೆಮೂಲೆಗಳಿಂದ ಒಂದೆಡೆ ಬಂದು ಸೇರುವ ದಲಿತರು ಬೌದ್ಧ ಧರ್ಮದ ದೀಕ್ಷೆ ಪಡೆಯುತ್ತಾರೆ. ಬುದ್ಧನ ಚಿಂತನೆಗಳೊಂದಿಗೆ ಮತ್ತೆ ತಮ್ಮ ಊರು ಸೇರುತ್ತಾರೆ.

ಇಂತಹದ್ದೆ ಒಂದು ಸಂಧರ್ಭ, ಅಂದರೆ 2008 ಅಕ್ಟೋಬರ್ 14 ರಂದು ನಾನು ಮತ್ತು ನನ್ನ ಐವರು ಸ್ನೇಹಿತರು ದೀಕ್ಷಾಭೂಮಿಗೆ ತೆರಳಿದ್ದೆವು. ಅಲ್ಲಿ ಕಳೆದ ಮೂರು ದಿನಗಳು ಬಹುಶಃ ನಮ್ಮ ಜೀವನದ ಪವಿತ್ರ ಕ್ಷಣಗಳು. ಅಲ್ಲಿ ಬಾಬಾಸಾಹೇಬ್ ಅಂಬೇಡ್ಕರರ ಪವಿತ್ರ ಉಸಿರು ಮತ್ತು ಚಿಂತನೆ ತುಂಬಿರುತ್ತದೆ. . ಗೌತಮ ಬುದ್ಧರ ತನ್ನ ನೈಜ ದರುಶನ ನೀಡುತ್ತದೆ ಎಂದರೂ ತಪ್ಪಾಗಲಾರದು. ಇಂತಹ ಖುಷಿಯಲ್ಲಿ ನಾವಿರಬೇಕಾದರೆ ಸಂಘಪರಿವಾರದ ಪಿತೂರಿಯ ಸಣ್ಣ ಝಲಕ್ ಒಂದು ನಮ್ಮ ಕಣ್ಣೆದುರೇ ನಡೆಯಿತು. ಆ ಪಿತೂರಿ ಇಂತಿದೆ. ಇತ್ತ ಲಕ್ಷಾಂತರ ಜನ ದಲಿತರ ಗುಂಪು ಬುದ್ಧ ಅಂಬೇಡ್ಕರ್ ಎಂದು ದೀಕ್ಷೆ ಸ್ವೀಕರಿಸುವುದು , ವಸ್ತು ಪ್ರದರ್ಸನ ವೀಕ್ಷಿಒಸುವುದು, ಬುದ್ಧರ ತತ್ವಗಳನ್ನು ಕೇಳುವ ಬಿಜಿಯಲ್ಲಿದ್ದರೆ ಅತ್ತ ಎಲ್ಲಿಂದಲೋ ಕೇಸರಿ ವಸ್ತ್ರ ಧರಿಸಿದ ಕೈಯಲ್ಲಿ ತ್ರಿಶೂಲ ಹಿಡಿದ ವ್ಯಕ್ತಿಯೊಬ್ಬ ದಿಢೀರನೆ ನುಗ್ಗಿದ ! “ಜೈ ಶ್ರೀರಾಮ್” ಎಂಬ ಅವನ ಕೂಗು ಮೌನವಾಗಿ ಸಾಗುತ್ತಿದ್ದ ಆ ಜನರನ್ನು ಅವನೆಡೆ ತಿರುಗುವಂತೆ ಮಾಡಿತ್ತು. ತಕ್ಷಣ ಜಾಗೃತರಾದ ಅಲ್ಲೆ ಇದ್ದ ಸಮಾವೇಶದ ಸ್ವಯಂಸೇವಕರು ಆ ಕಾವಿಧಾರಿಯನ್ನು ಹಿಡಿದು ಪೋಲೀಸರಿಗೆ ಒಪ್ಪಿಸಿದರು. ಅಚ್ಚರಿಯ ವಿಷಯವೆನೆಂದರೆ ಒಬ್ಬನೇ ಒಬ್ಬ ದಲಿತನೂ ಕಿಂಚಿತ್ತು ಕದಲಿಲ್ಲ. ಯಾಕೆಂದರೆ ಅಲ್ಲೇನಾದರು ಗಲಿಬಿಲಿಯಾಗಿದ್ದರೆ ಕೇವಲ ಕಾಲ್ತುಳಿತದಿಂದಲೇ ಸಾವಿರಾರು ಜನ ಬಲಿಯಾಗುವ ಸಾಧ್ಯತೆಯಿತ್ತು.  ಶಾಂತಚಿತ್ತದ ಸಮಭಾವದ ದಲಿತರು ಗಾಂಭೀರ್ಯತೆಯನ್ನು ಪ್ರದಶರ್ಿಸಿ ತಮ್ಮತನ ಮೆರೆದರು! ಆದರೆ ಆ ಸಂಧರ್ಭದಲ್ಲಿ ನಿಜಕ್ಕು ಆಕ್ರೋಶಕ್ಕೊಳಗಾದದ್ದು ನಾನು. ಆ ಕಾವಿಧಾರಿಯನ್ನು ಏನೂ ಮಾಡದೇ ಸುಮ್ಮನೆ ಪೋಲಿಸರಿಗೊಪ್ಪಿಸಿದರಲ್ಲಾ ಎಂದು ಕುಪಿತನಾದೆ. ಆದರೆ ನಂತರವೇ ತಿಳಿದದ್ದು ಸಂಘಪರಿವಾರದ ಇಂತಹ ಪಿತೂರಿಗಳು ಆಗಾಗ್ಗೆ ನಡೆಯುತ್ತಿರುತ್ತದೆ ಮತ್ತು ಖೈರ್ಲಂಜಿಯ ಹತ್ಯಾಕಾಂಡ ಅಂತಹ ಪಿತೂರಿಯ ಭೀಭತ್ಸ ಪ್ರದರ್ಶನ ಎಂದು.

ಖೈಲರ್ಾಂಜಿಯ ಈ ಭೀಕರ ಹತ್ಯಾಕಾಂಡದ  ಬಗ್ಗೆ ಈಗ ಯಾಕೆ ಹೇಳಬೇಕಾಯಿತೆಂದರೆ ಮೊನ್ನೆ ಜುಲೈ 12 ರಂದು ಬಾಂಬೆ ಹೈಕೊಟರ್್ನ ನಾಗಪುರ ಪೀಠವು ಖೈಲರ್ಾಂಜಿಯ ಆರೋಪಿಗಳಿಗೆ ಸ್ಥಳೀಯ ವಿಚಾರಣಾ ನ್ಯಾಯಾಲಯವೊಂದು ವಿಧಿಸಿದ್ದ ಮರಣದಂಡನೆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಿದೆ. ತನ್ಮೂಲಕ ಸ್ವತಂತ್ರ ಭಾರತದಲ್ಲಿ ದಲಿತರ ಭೀಕರ ಹತ್ಯಾಕಾಂಡದ ಆರೋಪಿಗಳಿಗೆ ಕೆಳಹಂತದ ನ್ಯಾಯಾಲಯವೊಂದು ಪ್ರಥಮ ಬಾರಿಗೆ ಮರಣದಂಡನೆ ವಿಧಿಸಿದ್ದನ್ನು ಹೈಕೋಟರ್್ ರದ್ದು ಪಡಿಸಿದೆ. ಹೈಕೋಟರ್್ನ ಈ ತೀಪರ್ು ನಿಜಕ್ಕು ಆಘಾತಕಾರಿಯಾದದ್ದು. ಪ್ರಕರಣದ ಭೀಕರತೆಯು ಅಪರೂಪದಲ್ಲೆ ಅಪರೂಪ ಎನ್ನುವಂತಹದ್ದು. ಈ ಹಿನ್ನೆಲೆಯಲ್ಲಿ ವಿಚಾರಣಾ ನ್ಯಾಯಲಯ ನೀಡಿದ್ದ ಮರಣದಂಡನೆಯ ತೀಪರ್ು ಸರಿಯಾಗೆ ಇತ್ತು. ಆದರೆ ಹೈಕೋಟ್ರ್  ಈಗ ಇದಕ್ಕೆ ವ್ಯತಿರಿಕ್ತ ತೀಪರ್ು ನೀಡಿದೆ!

ಹೈಕೋಟರ್್ನ ಈ ತೀಪರ್ಿನ ವಿರುದ್ಧ ಸುಪ್ರೀಂ ಕೊಟರ್್ನಲ್ಲಿ ಮೇಲ್ಮನವಿ ಸಲ್ಲಿಸುವುದೊಂದೆ ಈಗ ಉಳೀದಿರುವ ದಾರಿ. ಈ ನಿಟ್ಟಿನಲಿ ಮಹಾರಾಷ್ಟ್ರ ಸಕರ್ಾರ ಕ್ರಮ ಕೈಗೊಳ್ಳಬೇಕಿದೆ.  ಸಿಬಿಐ ಈ ಪ್ರಕರಣದಲ್ಲಿ ಉದ್ದೇಶಪೂರ್ವಕವಾಗಿಯೇ ದುರ್ಬಲ ವಾದ ಮಂಡಿಸಿರುವ ಆರೋಪ ಕೇಳೀ ಬಂದಿದೆ. ಈ ನಿಟ್ಟಿನಲಿ ಕೇಂದ್ರ ಸಕಾರ ಕೂಡ ಮಧ್ಯೆ ಪ್ರವೇಶಿಸಬೇಕಾಗಿದೆ. ದೌರ್ಜನ್ಯಕೋರರು ಮುಂದೆ ದೌರ್ಜನ್ಯ  ಮಾಡಲು ಹೆದರಬೇಕಾದರೆ ಖೈರ್ಲಂಜಿಯ ಆರೋಪಿಗಳಿಗೆ ಮರಣದಂಡನೆಯೇ ಸೂಕ್ತ ಶಿಕ್ಷೆ. ಈ ನಿಟ್ಟಿನಲಿ ನ್ಯಾಯಲಯದ ಈ ತೀಪರ್ಿನ ವಿರುದ್ಧ ಶೋಷಿತ ಸಮುದಾಯ ದನಿಯೆತ್ತಬೇಕಿದೆ.

ಖೈಲರ್ಾಂಜಿಯಂತಹ ಪ್ರಕರಣಗಳು ಈಗ ನಿಂತಿದೆ ಎಂದಲ್ಲ . ಮೊನ್ನೆ ತುಮಕೂರಿನ ಗೋಪಾಲಪುರ ಗ್ರಾಮದಲ್ಲಿ ದಲಿತ ಮಹಿಳೆ ಹೊನ್ನಮ್ಮ ಳನ್ನು ಕಲ್ಲಿನಿಂದ ಜಜ್ಜಿ ಕೊಂದದ್ದು ಖೈಲರ್ಾಂಜಿಯ ಪುನರಾವರ್ತನೆಯಲ್ಲದೆ  ಬೇರೇೆನಲ್ಲ. ಚರಂಡಿಯಲ್ಲಿ ಅರೆಜೀವದಿಂದ ಬಿದ್ದಿದ್ದ ಹೊನ್ನಮ್ಮ ‘ನೀರು, ನಿರು’ ಎಂದು ಅಂಗಲಾಚಿದಾಗ ದೌರ್ಜನ್ಯಕೊರ ಮನಸ್ಸುಗಳು ಮತ್ತೊಂದು ಕಲ್ಲು ಎತ್ತಿಹಾಕಿದ್ದು, ಖೈಲರ್ಾಂಜಿಯಲ್ಲಿ ಪ್ರಿಯಾಂಕಳ ಮಮರ್ಾಂಗಕ್ಕೆ  ಚೂಪಾದ ದೊಣ್ಣೆಯಿಂದ ಚುಚ್ಚಿದ್ದು, ಬಹುಶಃ ಇಂತಹ ಭೀಬತ್ಸ ನೆನಪುಗಳಷ್ಟೆ ದಲಿತರಿಗೆ ಉಳಿಯುವುದು. ನ್ಯಾಯ? ಶುದ್ಧ ಮರೀಚಿಕೆಯಷ್ಟೆ.

ರಘೋತ್ತಮ ಹೊ. ಬ

ಚಾಮರಾಜನಗರ-571313

ಮೊಬೈಲ್ – 9481189116