Archive for the ‘Ho.Ba. Raghothama ರಘೋತ್ತಮ’ Category

ಪೂನಾ ಒಪ್ಪಂದ- ಸತ್ಯ ಎಲ್ಲೆಡೆಗೆ


ರಾಮ ಕೃಷ್ಣ ಗಾಂಧಿ ಬುದ್ಧ ಹುಟ್ಟಿದಂತ ದೇಶವೇಂದು ಸಂತೋಷದಿ ಹೇಳುವೆ_ಇದು ಜನಪ್ರಿಯ ಚಿತ್ರವೊಂದರ ಜನಪ್ರಿಯ ಹಾಡು.  ರಾಮಕೃಷ್ಣ ಪುರಾಣದ ಪಾತ್ರಗಳಾದ್ದರಿಂದ ಅವರ ಅಗತ್ಯತೆಯನ್ನು ಇಲ್ಲಿ ಪ್ರಸ್ತಾಪಿಸಲು ಹೋಗುತ್ತಿಲ್ಲ. ಅದೇ ಗಾಂಧಿ ಬುದ್ಧ? ಎಲ್ಲಿಯ ಗಾಂಧಿ? ಎಲ್ಲಿಯ ಬುದ್ಧ?  ಏಕೆಂದರೆ ಬಹುಜನ ಹಿತಾಯ, ಬಹುಜನ ಸುಖಾಯಎಂದ ಬುದ್ಧ ಎಲ್ಲಿ? ಅಸ್ಪೃಶ್ಯರ ಹಕ್ಕುಗಳನ್ನು ಪ್ರಾಣವನ್ನೇ ಪಣವಾಗಿಟ್ಟು ವಿರೋಧಿಸಿದ ಗಾಂಧಿ ಎಲ್ಲಿ?
1932 ಸೆಪ್ಟೆಂಬರ್ 24ರ ಪೂನಾ ಒಪ್ಪಂದ, ಮತ್ತದರ ಸಂಬಧಿತ ಘಟನಾವಳಿಗಳು  ಗಾಂಧೀಜಿಯವರನ್ನು ಅಕ್ಷರಶಃ ಬೆತ್ತಲುಗೊಳಿಸುತ್ತವೆ! ತಮ್ಮ ಹೀನ ತಂತ್ರಗಳ ಮೂಲಕ ಶೋಷಿತ ಜನಸಮುದಾಯದ ಹಕ್ಕುಗಳಿಗೆ ಬೆಂಕಿಯಿಡಲು ಯತ್ನಿಸಿದ ಆವರ ನಯವಂಚಕತನವನ್ನು ಬಟಾಬಯಲುಗೊಳಿಸುತ್ತವೆ.
ನಿಜ, ಇಡೀ ದೇಶವೆ ಮಹಾತ್ಮರೆಂದು ಕರೆಯುವ ರಾಷ್ಟ್ರಪಿತ ಎಂದು ಗೌರವಿಸುವ ವ್ಯಕ್ತಿಯೊಬ್ಬರ ಬಗ್ಗೆ ಕೇವಲವಾಗಿ ಬರೆಯುವುದು ಅಷ್ಟು ಸುಲಭದ ಮಾತಲ್ಲ. ಆದರೆ ಸತ್ಯ ಎಲ್ಲೆಡೆಗೆ ಹಂಚಬೇಕೆಂದಾಗ , ಆ ಸತ್ಯಕ್ಕೆ ಸೂಕ್ತ ಸಾಕ್ಷಿ ಇರುವಾಗ ಭಯವೇಕೆ? ಅಂಜಿಕೆಏಕೆ? ಅಳುಕೇಕೆ? ಅದರಲ್ಲೂ ಸಕರ್ಾರಿ ಮುದ್ರಿತ ಸಾಕ್ಷಿ ಇರುವಾಗ? ಕನರ್ಾಟಕ ಸಕರ್ಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಕಟಿಸಿರುವ ಬಾಬಾಸಾಹೇಬ್ ಡಾ.ಅಂಬೇಡ್ಕರ್ ಬರಹಗಳು ಮತ್ತು ಭಾಷಣಗಳು  ಕೃತಿ ಸರಣಿಯ  9ನೇ ಸಂಪುಟದ  ಕಾಂಗ್ರೆಸ್ ಮತ್ತು ಗಾಂಧಿ ಅಸ್ಪೃಶ್ಯರಿಗಾಗಿ ಮಾಡಿರುವುದೇನು? ಕೃತಿ ಅಂತಹ ಗಟ್ಟಿಸಾಕ್ಷಿಯಾಗಿ ಮಹಾತ್ಮಗಾಂಧಿಯವರ ಇಬ್ಬಗೆಯ ನೀತಿಯನ್ನು ಅಕ್ಷರಶಃ ಬಯಲಿಗೆಳೆಯುತ್ತದೆ. ಮಹಾತ್ಮ ಗಾಂಧಿಯವರನ್ನು ಹೀಗೆ ಬಯಲಿಗೆಳೆಯುವುದರ ಹಿಂದೆ  ಪೂವರ್ಾಗ್ರಹ ಪೀಡಿತ ಮನಸ್ಸಾಗಲೀ   ಯಾವುದೋ ದುರುದ್ದೇಶವಾಗಲೀ ಇಲ್ಲ. ಬದಲಿಗೆ ಸತ್ಯವನ್ನು ತಿಳಿಸುವ ಆ ಮೂಲಕ  ಶೋಷಿತರ ಏಳಿಗೆಗ ಐತಿಹಾಸಿಕವಾಗಿ ಅಡ್ಡಿಯಾದ ಕಹಿ ಘಟನೆಯನ್ನು ದಾಖಲಿಸುವುದಷ್ಟೆ ಇಲ್ಲಿಯ ಉದ್ದೇಶ.
ಇರಲಿ, ಪೂನಾ ಒಪ್ಪಂದ ಹಾಗೆಂದರೇನು ಎಂದು ತಿಳಿಯುವುದಕ್ಕೆ ಮೊದಲು  ಆ ಒಪ್ಪಂದಕ್ಕೆ ಕಾರಣವಾದ ಕೆಲವು ಘಟನೆಗಳತ್ತ  ಕಣ್ಣಾಯಿಸುವುದು ಸೂಕ್ತ. ಏಕೆಂದರೆ  ಅಂತಹ ಘಟನೆಗಳು ಮತ್ತು ಆ ಘಟನೆಗಳ ಉಪಕ್ರಮವಾಗಿ ರೂಪುಗೊಂಡದ್ದೆ ಈ ಒಪ್ಪಂದ.
1930 ರ ನವೆಂಬರ್ ತಿಂಗಳಲ್ಲಿ ಬ್ರಿಟಿಷ್ ಭಾರತದಲ್ಲಿ ಸಾಂವಿಧಾನಿಕ ಬೆಳವಣಿಗೆಗಳನ್ನು ಪರಿಷ್ಕರಿಸಲು ಲಂಡನ್ನಿನಲ್ಲಿ ಪ್ರಧಾನಿ ರ್ಯಾಮ್ಸೆ ಮ್ಯಾಕ್ ದೊನಾಲ್ಡ್ರ ಅಧ್ಯಕ್ಷತೆಯಲ್ಲಿ  ಮೊದಲನೆಯ ದುಂಡುಮೇಜಿನ ಸಭೆ ನಡೆಯಿತು. ಸಭೆಯಲ್ಲಿ ಅಸ್ಪೃಶ್ಯರ ಪ್ರತಿನಿಧಿಗಳಾಗಿದ್ದ ಡಾ. ಅಂಬೇಡ್ಕರ್ರವರು ಸಮಾನ ಪೌರತ್ವ, ಸಮಾನತೆಯ ಹಕ್ಕು, ಶಾಸಕಾಂಗಗಳಲ್ಲಿ ಪ್ರಾತಿನಿಧ್ಯ, ಉದ್ಯೋಗದಲ್ಲಿ ಮೀಸಲಾತಿ ಇತ್ಯಾದಿ ಬೇಡಿಕೆಗಳನ್ನೊಳಗೊಂಡ ಜ್ಞಾಪನ ಪತ್ರವೊಂದನ್ನು ದುಂಡುಮೇಜಿನ ಸಭೆಯ ಬಹುಮುಖ್ಯ ಸಮಿತಿಯಾದ ಅಲ್ಪಸಂಖ್ಯಾತರ ಸಮಿತಿಗೆ  ಸಲ್ಲಿಸಿದರು. ಸಭೆಯು ಮುಕ್ತಾಯವಾಗುವ ಮುನ್ನ ಅಂಬೇಡ್ಕರರ ಬೇಡಿಕೆಗಳ ಬಗ್ಗೆ  ಸಹಮತ ವ್ಯಕ್ತಪಡಿಸಿತು. ಒಂದರ್ಥದಲ್ಲಿ ಪ್ರಥಮ ದುಂಡುಮೇಜಿನ ಸಭೆ ಅಸ್ಪೃಶ್ಯರಿಗೆ  ಒಂದು ರೀತಿಯ ನೈತಿಕ ಜಯವನ್ನು ತಂದುಕೊಟ್ಟತು. ಏಕೆಂದರೆ ಈ ಸಭೆಯಲ್ಲಿ ಪ್ರಪ್ರಥಮವಾಗಿ ಅಸ್ಪೃಶ್ಯರು ಬೇರೆ ಅಲ್ಪಸಂಖ್ಯಾತರ ರೀತಿಯಲ್ಲಿ  ಪ್ರತ್ಯೇಕ ರಾಜಕೀಯ ಮತ್ತು ಸಾಂವಿಧಾನಿಕ ಹಕ್ಕು ಪಡೆಯಲು ಅರ್ಹರಾಗಿದ್ದಾರೆ ಎಂಬ ತೀಮರ್ಾನ ವ್ಯಕ್ತವಾಯಿತು. ಹಾಗೆಯೇ ಇದು ಅಂಬೇಡ್ಕರರಿಗೆ ಸಿಕ್ಕ ಪ್ರಥಮ ರಾಜಕೀಯ ಯಶಸ್ಸು ಕೂಡ ಆಗಿತ್ತು.
ದುರಂತವೆಂದರೆ ಅಂಬೇಡ್ಕರರ ಈ ಯಶಸ್ಸು ಕಾಂಗ್ರೆಸ್ಸಿಗರ ಕೆಂಗಣ್ಣಿಗೆ ಗುರಿಯಾಯಿತು. ಹೀಗಾಗಿ ಎಲ್ಲಿ ಅಂಬೇಡ್ಕರರ ಬೇಡಿಕೆಗಳು ಕಾನೂನಾಗಿ ರೂಪಿತವಾಗುತ್ತದೋ ಎಂದು ಆತಂಕಗೊಂಡ, ಮೊದಲ ದುಂಡು ಮೇಜಿನ ಸಭೆಗೆ ಕಾರಣಾಂತರಗಳಿಂದ ಗೈರಾಗಿದ್ದ ಕಾಂಗ್ರೆಸ್ಸಿಗರು ಎರಡನೇ ದುಂಡುಮೇಜಿನ ಸಭೆಯಲ್ಲಿ ಪಾಲ್ಗೊಳ್ಳಲು ನಿರ್ಧರಿಸಿ ಮಹಾತ್ಮಗಾಂದಿಯವರನ್ನು ತನ್ನ ಪ್ರತಿನಿಧಿಯಾಗಿ ಕಳುಹಿಸಿತು.
ಅಚ್ಚರಿಯೆಂದರೆ ಯಾವ ಗಾಂಧೀಜಿಯವರನ್ನು ಅಸ್ಪೃಶ್ಯರ ಪರ ಎಂದು ಬಿಂಬಿಸಲಾಗಿತ್ತೊ ಅದೇ ಗಾಂಧೀಜಿಯವರು ಎರಡನೇ ದುಂಡುಮೇಜಿನ  ಸಭೆಯಲ್ಲಿ ಅದೇ ಅಸ್ಪೃಶ್ಯರ ವಿರುದ್ಧ ನಿಂತರು! ಇದು ಯಾವ ಪರಿ ಎಂದರೆ ಸ್ವತಃ ಅಂಬೇಡ್ಕರ್ರವರೇ ಇದು ಶ್ರೀ ಗಾಂಧಿ ಮತ್ತು ಕಾಂಗ್ರೆಸ್ಸು ಅಸ್ಪೃಶ್ಯರ ವಿರುದ್ಧ ಸಾರಿದ  ಸಮರವಾಗಿತ್ತು ಎನ್ನುತ್ತಾರೆ! ಪ್ರಶ್ನೆಯೇನೆಂದರೆ ಗಾಂಧಿ ಮತ್ತು ಕಾಂಗ್ರೆಸ್ಸಿಗರು  ಹಾಗೇಕೆ ಮಾಡಿದರು?  ಅಸ್ಪೃಶ್ಯರ ವಿರುದ್ಧ ಸಮರ ಸಾರುವ ಅಗತ್ಯವಾದರೂ ಏನಿತ್ತು? ಇದು ಸವಣರ್ೀಯ ಹಿಂದುಗಳು ಒಟ್ಟಾಗಿ  ಅಸ್ಪೃಶ್ಯರ ಹಕ್ಕುಗಳನ್ನು ತುಳಿಯುವ ಹೀನ ಕೃತ್ಯವಾಗಿತ್ತೇ? ಮತ್ತು ಅಂತಹ ಕೃತ್ಯದ ನೇತೃತ್ವವನ್ನು ಸ್ವತಃ ಮಹಾತ್ಮಗಾಂಧಿಯವರೇ  ವಹಿಸಿಕೊಂಡಿದ್ದರೆ? ಮುಂದಿನ ಮಾತುಗಳು ಅದಕ್ಕೆ ಸಾಕ್ಷಿ ಒದಗಿಸುತ್ತವೆ. ನವೆಂಬರ್ 13 1931 ರಂದು ದುಂಡುಮೇಜಿನ ಸಭೆಯಲ್ಲಿ ಮಾತನಾಡಿದ ಮಹಾತ್ಮಗಾಂಧಿಯವರ  ಆ ಮಾತುಗಳು ಒಂದರ್ಥದಲಿ ಅಸ್ಪೃಶ್ಯರ ಹೆಣದ ಮೇಲೆ ಹೊಡೆದ ಕೊನೆಯ ಮೊಳೆಗಳಂತೆ  ಕಂಡರೂ ಅಚ್ಚರಿ ಇಲ್ಲ! ಗಾಂಧಿಯವರ ಅಂದಿನ ಮನಸ್ಥಿತಿಯನ್ನು ಅಂಬೇಡ್ಕರರ ಮಾತುಗಳಲ್ಲೇ ಹೇಳುವುದಾದರೆ ಶ್ರೀ ಗಾಂಧಿಯವರು ಆವೇಶ ಭರಿತರಾಗಿದ್ದರು. ಈ ಅಲ್ಪಸಂಖ್ಯಾತರ (ಅಸ್ಪೃಶ್ಯರು, ಮುಸಲ್ಮಾನರು, ಕ್ರೈಸ್ತರು, ಸಿಖ್ಖರು, ಆಂಗ್ಲೋಇಂಡಿಯನ್ನರು) ಒಡಂಬಡಿಕೆಯನ್ನು  ಸಿದ್ದ ಪಡಿಸುವುದರಲ್ಲಿ ಭಾಗವಹಿಸಿದ ಪ್ರತಿಯೊಬ್ಬರ ಮೇಲೂ ಅವರು ಹರಿ ಹಾಯ್ದರು. ಅದರಲ್ಲಿಯೂ ಅವರು ಅಸ್ಪೃಶ್ಯರಿಗೆ ಪ್ರತ್ಯೇಕ ರಾಜಕೀಯ ಹಕ್ಕನ್ನು  ನೀಡುವುದನ್ನು ಉಗ್ರವಾಗಿ ಪ್ರತಿಭಟಿಸಿದರು! ಎನ್ನುತ್ತಾರೆ.
ಅಂದಹಾಗೆ ಸಭೆಯಲ್ಲಿ ಆಕ್ರೋಶಗೊಂಡ  ಗಾಂಧಿಯವರು ಮಾತನಾಡುತ್ತಾ ಅಸ್ಪೃಶ್ಯರ ಪರವಾಗಿ ಮುಂದಿಡಲಾದ  ಈ ಬೇಡಿಕೆ (ಪ್ರತ್ಯೇಕ ರಾಜಕೀಯ ಹಕ್ಕು) ನನ್ನನ್ನು ನಿರ್ದಯವಾಗಿ ಇರಿದಂತಿದೆ!  ಬೇಕಾದರೆ ಅಸ್ಪೃಶ್ಯರು ಇಸ್ಲಾಂ ಧರ್ಮಕ್ಕೆ ಹೋಗಲಿ, ಕ್ರೈಸ್ತ ಧರ್ಮವನ್ನಾದರೂ ಸೇರಲಿ, ನನ್ನದೇನು ಅಭ್ಯಂತರವಿಲ್ಲ. ಆದರೆ ಅವರಿಗೆ  ಪ್ರತ್ಯೇಕ ಮತದಾನ ಪದ್ಧತಿ ನೀಡುವುದನ್ನು ಖಂಡತುಂಡವಾಗಿ ವಿರೋಧಿಸುತ್ತೇನೆ ಎನ್ನುತ್ತಾರೆ. ಇದು ಯಾವ ಪರಿ ಎಂದರೆ ಭಾರತಕ್ಕೆ ಸ್ವಾತಂತ್ರ್ಯ ಕೊಡದಿದ್ದರೂ ಪರವಾಗಿಲ್ಲ  ಅಸ್ಫೃಶ್ಯರಿಗೆ ಪ್ರತ್ಯೇಕ ಮತದಾನ ಪದ್ಧತಿ ಕೊಡುವುದು ಮಾತ್ರ ಬೇಡ. ಹಾಗೇನಾದರೂ  ಅಸ್ಪೃಶ್ಯರಿಗೆ ಪ್ರತ್ಯೇಕ ಮತದಾನ ಪದ್ಧತಿ ಮತು ಮೀಸಲಾತಿ ಕೊಟ್ಟಿದ್ದೇ ಆದರೆ ಅದನ್ನು ನನ್ನ ಪ್ರಾಣವನ್ನೇ ಪಣವಾಗಿಟ್ಟು ವಿರೋಧಿಸುವೆ ಎನ್ನುತ್ತಾರೆ. ತಮ್ಮ ಈ ವಿರೋಧಕ್ಕೆ  ಗಾಂಧೀಜಿಯವರು  ಕೊಡುವ ಕಾರಣವಾದರೂ ಎನು? ಇದರಿಂದ ಹಿಂದೂ ಧರ್ಮದ ವಿಭಜನೆ ಯಾಗುತ್ತದೆ ಎಂದು!
ಯಾರನ್ನು ಮಹಾತ್ಮ ಎನ್ನಲಾಗುತ್ತಿತ್ತೋ, ಯಾರನ್ನು ಅಸ್ಪೃಶ್ಯರ ಉದ್ಧಾರಕ ಎನ್ನಲಾಗುತ್ತಿತ್ತೋ ಅಂತಹವರಿಂದ ಹೊರಟ ಅಸ್ಪೃಶ್ಯೋದ್ಧಾರದ ಮಾತುಗಳಿವು! ಹಾಗೇನಾದರೂ ಗಾಂಧೀಜಿಯವರ ಮಾತೇ ಅಂತಿಮ ತೀಪರ್ು ಎನ್ನುವ ಹಾಗಿದ್ದರೆ ಆವತ್ತೆ  ಅಸ್ಪೃಶ್ಯರ ಹಣೆಬರಹ ಏನೆಂದು ತೀಮರ್ಾನವಾಗಿರುತ್ತಿತ್ತು! ಆದರೆ ಗಾಂಧೀಜಿಯವರ ಆ ರೋಷದ  ಮಾತುಗಳ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳದ ಸಭೆ ಅಸ್ಪೃಶ್ಯರಿಗೆ ಅವರ ನ್ಯಾಯಬದ್ಧ ಹಕ್ಕುಗಳನ್ನು ನೀಡುವುದರ ಪರ ಇದ್ದಂತ್ತಿತು.್ತ ಅಲ್ಲದೇ ಅಸ್ಪೃಶ್ಯರ ಮೊದಲನೇ ಶತೃ ಸಾಕ್ಷಾತ್ ಗಾಂಧಿಜಿಯವರೇ ಎಂದು ಇಡೀ ಸಭೆಗೆ ಚೆನ್ನಾಗಿತಿಳಿದು ಹೋಯಿತು. ತಾನು ನೀಡುವ  ತೀಪರ್ಿಗೆ ಎಲ್ಲರೂ ಬದ್ಧ ರಾಗಿರಬೇಕೆಂದು ಒಪ್ಪಿಗೆ ಪಡೆದು ಎಲ್ಲರಿಂದಲೂ ಸಹಿ ಹಾಕಿಸಿಕೊಂಡ ಬ್ರಿಟಿಷ್ ಪ್ರಧಾನಿಯವರು ಎಲ್ಲರನ್ನು ಭಾರತಕ್ಕೆ ವಾಪಸ್ ಕಳುಹಿಸಿದರು.
ಇತ್ತ ಭಾರತಕ್ಕೆ ವಾಪಸ್ ಬಂದ ಗಾಂಧೀಜಿಯವರು ಸುಮ್ಮನೆ ಕೂರಲಿಲ್ಲ್ಲ. ಅಸ್ಪೃಶ್ಯರ ಬೇಡಿಕೆಗಳ ಪರ ನಿಂತಿದ್ದ ಮುಸಲ್ಮಾನರನ್ನು ಅಸ್ಪೃಶ್ಯರ ವಿರುದ್ಧ ಎತ್ತಿಕಟ್ಟಲು ಯತ್ನಿಸಿದರು. ಆದರೆ ಪ್ರತಿಫಲ ಶೂನ್ಯವಾಗಿತ್ತು. ಇದನ್ನು ಸ್ವತಃ ಅಂಬೇಡ್ಕರ್ರವರೇ ಮುಸಲ್ಮಾನರು ಈ ಐತಿಹಾಸಿಕ ಪಿತೂರಿಯಲ್ಲಿ ಭಾಗಿಗಳಾಗಲು ನಿರಾಕರಸಿದ್ದರಿಂದ  ಈ ಯೋಜನೆ ವಿಫಲಗೊಂಡಿತು ಎನ್ನುತ್ತಾರೆ.
ಒಟ್ಟಾರೆ ಗಾಂಧೀಜಿಯವರಿಂದ ಸೃಷ್ಟಿಯಾದ ಈ ಎಲ್ಲಾ ಗೊಂದಲಗಳ ನಡುವೆ ಆಗಸ್ಟ್ 17 1932 ರಂದು ಬ್ರಿಟಿಷ್ ಪ್ರಧಾನಿ ರ್ಯಾಮ್ಸೆ ಮ್ಯಾಕ್  ಡೊನಾಲ್ಡ್ ಐತಿಹಾಸಿಕ ಕೋಮುವಾರು ತೀಪರ್ು ಪ್ರಕಟಿಸಿದರು. ಅದರಲ್ಲಿ ಅಂಬೇಡ್ಕರ್ರವರು ಕೇಳಿದ್ದ ಎಲ್ಲಾ ನ್ಯಾಯಬದ್ಧ ಬೇಡಿಕೆಗಳನ್ನು( ಪ್ರತ್ಯೇಕ ಮತದಾನ ಪದ್ಧತಿ, ಉದ್ಯೋಗದಲ್ಲಿ ಮೀಸಲಾತಿ, ಸಮಾನ ನಾಗರೀಕ ಹಕ್ಕು ಇತ್ಯಾದಿ ) ಈಡೇರಿಸಲಾಗಿತ್ತು. ಹಾಗೇಯೇ ಹಿಂದೂ ಧರ್ಮ  ವಿಭಜನೆಯಾಗುತ್ತದೆಎಂಬ ಗಾಂಧೀಜಿಯವರ ಆತಂಕವನ್ನು ದೂರಗೊಳಿಸಲು ಅಸ್ಪೃಶ್ಯರಿಗೆ ಎರಡು ಓಟು ಹಾಕುವ ಹಕ್ಕು ನೀಡಲಾಯಿತು! ಒಂದು ಓಟನ್ನು ತಮ್ಮವರು ಮಾತ್ರ ಸ್ಪಧರ್ಿಸುವ ಹಾಗೇ ತಾವೊಬ್ಬರೇ ಮಾತ್ರ ಮತ ಚಲಾಯಿಸುವ ಪ್ರತ್ಯೇಕ ಮತಕ್ಷೇತ್ರದಲ್ಲಿ ಚಲಾಯಿಸಲು, ಮತ್ತೊಂದನ್ನು ಸಾಮಾನ್ಯ ಕ್ಷೇತ್ರದ ಅಭ್ಯಥರ್ಿಗಳ ಪರ ಸಾಮಾನ್ಯ ಮತ ಕ್ಷೇತ್ರದಲ್ಲಿ ಚಲಾಯಿಸಲು ಅವಕಾಶ ನೀಡಲಾಯಿತು.  ಒಂದರ್ಥದಲಿ ಅಸ್ಪೃ ಶ್ಯರಿಗೆ ನೀಡಲಾದ  ಈ ಎರಡು ಓಟು ಹಾಕುವ ಹಕ್ಕು ಶತಮಾನಗಳಿಂದ ನೊಂದವರಿಗೆ ಅಮೃತ ಸಿಕ್ಕ ಹಾಗೆ ಆಗಿತ್ತು.
ಒಟ್ಟಿನಲಿ ಅಂಬೇಡ್ಕರರ ನ್ಯಾಯಬದ್ಧವಾದ, ತರ್ಕಬದ್ಧವಾದ ಬೇಡಿಕೆ ಮತ್ತು ಆ ಬೇಡಿಕೆಗೆ ಪೂರಕವಾಗಿ ಬ್ರಿಟಿಷ್ ಪ್ರಧಾನಿಯವರ ಬುದ್ಧಿವಂತಿಕೆಯ ತೀಮರ್ಾನ ಅಸ್ಪೃಶ್ಯತೆಯ ಸಮಸ್ಯೆಯನ್ನು ಒಮ್ಮೆಲೆ ಕೊನೆಗಾಣಿಸುವ ಸದಾಶಯವನ್ನು ಇಡೀ ಭಾರತದಾದ್ಯಂತ ಬಿತ್ತಿತು.
ಆದರೆ? ಯಾವ ಅಸ್ಪೃಶ್ಯರನ್ನು ತಾವು  ಶತಮಾನಗಳಿಂದ ಶೋಷಿಸಿದ್ದೇವೆಯೋ ಅಂತಹ ಅಸ್ಪೃಶ್ಯರಿಗೆ ಒಮ್ಮೆಲೇ ಅಮೃತ ಸಿಗುವುದನ್ನು ಯಾರು ತಾನೆ ಸಹಿಸಿಕೊಳ್ಳುತ್ತಾರೆ? ಅದೂ ಸಾಕ್ಷಾತ್ ಮಹಾತ್ಮ ಗಾಂಧೀಜೀಯವರೆ ಆ ಗುಂಪಿನ ನಾಯಕರಾಗಿರುವಾಗ? ಅಲ್ಲದೆ ಅಸ್ಪೃಶ್ಯರಿಗೆ ನೀಡಲಾಗುವ ಅಂತಹ ಯಾವುದೇ ಸೌಲಭ್ಯವನ್ನು ನನ್ನ ಪ್ರಾಣವನ್ನೇ ಪಣವಾಗಿಟ್ಟು ವಿರೋಧಿಸುವೆ ಎಂದು ಅವರು ಮೊದಲೇ ತಿಳಿಸಿರುವಾಗ? ಅಕ್ಷರಶಃ ನಿಜ. ಗಾಂಧೀಜಿಯುವರು  ತಮ್ಮ ಆ ತೀಮರ್ಾನಕ್ಕ ಬದ್ಧ ರಾದರು. ಅಂತಹ ಬದ್ಧತೆಯ (ಅಸ್ಪೃಶ್ಯರನ್ನು ತುಳಿಯುವ)  ಕಾರಣದಿಂದಲೇ ಸೆಪ್ಟೆಂಬರ್ 20 1932 ರಂದು  ಪೂನಾದ ಯರವಾಡ ಜೈಲಿನಲ್ಲಿ ಅಮರಣಾಂತ ಉಪವಾಸ  ಸತ್ಯಾಗ್ರಹ ಕುಳಿತರು. ಇದುವರೆಗೂ ತಾವು ಕೈಗೊಂಡಿದ್ದ 21 ಉಪವಾಸಗಳಲ್ಲಿ ಒಮ್ಮೆಯೂ ಅಸ್ಪೃಶ್ಯರ ಪರ ಉಪವಾಸ ಕೈಗೊಳ್ಳದ ಗಾಂಧೀಜಿಯವರು ಪ್ರಪ್ರಥಮವಾಗಿ ಅಸ್ಪೃಶ್ಯರ ವಿರುದ್ಧವೇ ಉಪವಾಸ ಪ್ರಾರಂಭಿಸಿದ್ದರು!
ಗಾಂಧೀಜಿಯವರ ಈ ಹೇಯ ಉಪವಾಸವನ್ನು ಅವರ ಶಿಷ್ಯನೊಬ್ಬ ಐತಿಹಾಸಿಕ ಮಹಾನ್ ಉಪವಾಸ ವೆಂದು ಬಣ್ಣಿಸಿದ! ಇಂತಹ ಈ ಬಣ್ಣನೆಗೆ ಅಂಬೇಡ್ಕರ್ ರವರ ಪ್ರತಿಕ್ರಿಯೆ ಹೀಗಿತ್ತು ಅದರಲ್ಲಿ ಐತಿಹಾಸಿಕ ಮಹತ್ತು ಏನಿದೆಯೋ ನಾನರಿಯೆ. ಈ ಕ್ರಿಯೆಯಲ್ಲಿ ಶೌರ್ಯವೇನು ಇರಲಿಲ್ಲ. ನಿಜವಾದ ಅರ್ಥದಲ್ಲಿ ಅದು ಹೇಡಿಯ ಕೃತ್ಯವಾಗಿತ್ತು,. ಅದು ಕೇವಲ ದುಸ್ಸಾಹಸವೇ ಆಗಿತ್ತು. ತನ್ನ ಅಮರಣಾಂತ ಉಪವಾಸಕ್ಕೆ  ಬ್ರಿಟಿಷ್ ಸರಕಾರವೂ ಅಸ್ಪೃಶ್ಯರೂ ಗಢಗಢ ನಡುಗಿ ನೆಲಕಚ್ಚುವರೆಂದೂ, ತಮಗೆ ಅವರೆಲ್ಲ ಶರಣಾಗಿ ಬರುವರೆಂದೂ ಶ್ರೀಮಾನ್ ಗಾಂಧಿಯವರು ನಂಬಿದ್ದರು. ಆದರೆ ಅವರು (ಅಸ್ಪೃಶ್ಯರು ಮತ್ತು ಬ್ರಿಟಿಷರು) ಧೃಡವಾಗಿಯೇ ಉಳಿದು  ಗಾಂಧಿಯವರನ್ನು ಪರೀಕ್ಷಿಸಬಯಸಿದರು. ಒಂದರ್ಥದಲಿ ಗಾಂಧಿಯವರ ಪರೀಕ್ಷೆಯೂ ಆಯಿತು!  ತಾನು ಹೊಂಚಿದ ಉಪಾಯ ಅತಿಯಾಯಿತೆಂದು ಗಾಂಧಿಯವರಿಗೆ ಮನವರಿಕೆಯಾದಾಗ  ಅವರ ಶೂರತನವು ಸೋರಿಹೋಗಿತ್ತು. ಅಸ್ಪಶ್ಯರಿಗೆ ನೀಡಿರುವ  ಸೌಲಭ್ಯವನ್ನು ಹಿಂತೆಗೆಸಿ  ಅವರನ್ನು ಯಾವುದೇ ಸಹಾಯವಿಲ್ಲದ, ಯಾವುದೇ ಹಕ್ಕುಗಳಿಲ್ಲದ ನಿಕೃಷ್ಟರನ್ನಾಗಿ ಮಾಡುವವರೆಗೂ ನನ್ನ ಉಪವಾಸ ಮುಂದುವರೆಯುತ್ತದೆ ಎಂದು  ಪ್ರಾರಂಭವಾದ ಅವರ ಸತ್ಯಾಗ್ರಹ  ಕಡೆಗೆ ನನ್ನ ಜೀವ ನಿಮ್ಮ ಕೈಯಲ್ಲಿದೆ. ನನ್ನನ್ನು ಬದುಕಿಸಿ ಎಂದು ನನ್ನನ್ನು ಬೇಡಿಕೊಳ್ಳುವವರೆಗೆ ತಲುಪಿತು!  ಒಪ್ಪಂದಕ್ಕೆ ಸಹಿಹಾಕಿಸಿಕೊಳ್ಳಲು ಅವರು ತುಂಬಾ ಹಪಹಪಿಸತೊಡಗಿದರು.  ಪೂನಾ ಒಪ್ಪಂದಕ್ಕೆ ಸಹಿಯಾಗದೆ ಬ್ರಿಟಿಷ್ ಪ್ರಧಾನಿಯವರ ಕೋಮುವಾರು ತೀಪರ್ು ರದ್ಧಾಗುತ್ತಿರಲಿಲ್ಲ.  ಪ್ರಾರಂಭದಲ್ಲಿ  ಶ್ರೀಮಾನ್ ಗಾಂಧಿಯವರು ಒತ್ತಾಯಿಸಿದ್ದು ಇದನ್ನೆ. ಹಾಗೆಯೇ ಕೋಮುವಾರು ತೀಪರ್ಿಗೆ ಪರ್ಯಾಯವಾಗಿ ಒಪ್ಪಂದದಲ್ಲಿ ಸೂಕ್ತ ಸಾಂವಿಧಾನಿಕ ರಕ್ಷಣೆಯನ್ನು ಸೇರಿಸಲಾಗಿತ್ತು. ಹೀಗಿದ್ದರೂ ಒಪ್ಪಂದಕ್ಕೆ ಸಹಿಮಾಡಲು ಗಾಂಧೀಜಿಯವರು ತೋರಿಸಿದ ಅವಸರ ಒಬ್ಬ ಧೈರ್ಯಗುಂದಿದ  ನಾಯಕ ತಮ್ಮ ಮಯರ್ಾದೆಯನ್ನು ಎಲ್ಲಕಿಂತ ಹೆಚ್ಚಾಗಿ ತಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ಪರದಾಡಿದ ರೀತಿಯಂತಿತ್ತು!
ಅಂದಹಾಗೆ ಶ್ರೀಮಾನ್ ಗಾಂಧಿಯವರ ಉಪವಾಸ ಕ್ರಿಯೆಯಲ್ಲಿ ಶ್ರೇಷ್ಟವಾದುದು ಏನೂ ಇರಲಿಲ್ಲ. ಅದೊಂದು ಕೀಳು ಹೊಲಸು ಕ್ರಿಯೆಯಾಗಿತ್ತು. ಅದು ಅಸ್ಪೃಶ್ಯರ ಒಳಿತಾಗಿರದೆ ಅವರ ಅವನತಿಯ ಉದ್ದೇಶ ಹೊಂದಿತ್ತು.  ಅಸಾಹಯಕ ಜನರ ಮೇಲೆ ನಡೆಸಿದ ಅಧಮ್ಯ ದೌರ್ಜನ್ಯ ಅದಾಗಿತ್ತು.   ಬ್ರಿಟಿಷ್ ಪ್ರಧಾನಮಂತ್ರಿ ಅಸ್ಪಶ್ಯರಿಗೆ  ನೀಡಲು ಉದ್ದೇಶಿಸಿದ್ದ ಸಾಂವಿಧಾನಿಕ ಸೌಲಭ್ಯಗಳನ್ನು ಕಿತ್ತುಕೊಂಡು, ಸವಣರ್ೀಯರ ಆಳ್ವಿಕೆಯಲ್ಲಿ  ಅಸ್ಪಶ್ಯರನ್ನು ಗುಲಾಮರನ್ನಾಗಿಸುವ ಉದ್ದೇಶಹೊಂದಿದ್ದ ಅಮರಣಾಂತ ಉಪವಾಸ ಅದಾಗಿತ್ತು. ಅದು ನೀಚ ಹಾಗು ದುಷ್ಟ ಕ್ರಿಯೆಯಾಗಿತ್ತು. ಇಂತಹ ವ್ಯಕ್ತಿಗಳನ್ನು ಪ್ರಾಮಾಣಿಕರೆಂದೂ, ನಂಬಲರ್ಹ ವ್ಯಕ್ತಿಗಳೆಂದೂ ಅಸ್ಪೃಶ್ಯರು ಹೇಗೆ ಹೇಳಲು ಸಾಧ್ಯ?
ಒಟ್ಟಿನಲಿ ಗಾಂಧೀಜಿಯವರು ನಬಂಬಲನರ್ಹ ಎಂಬುದು ಇಡೀ ಜಗತ್ತಿಗೇ ಗೊತ್ತಾಗಿತ್ತು. ಅವರ ಡಬಲ್ ಗೇಮ್ನ ಹಿಂದಿರುವ ಸತ್ಯ ಇಡೀ ಜಗತ್ತಿಗೇ ಪರಿಚಯವಾಗಿತ್ತು. ಅಂದಹಾಗೆ ಹೇಗಾದರೂ ಮಾಡಿ ಜೀವ ಉಳಿಸಿಕೊಳ್ಳ ಬೇಕೆಂಬ ಧಾವಂತದಲ್ಲಿ ಗಾಂಧಿಯವರಿದ್ದರೆ ಈ ಸಂಧರ್ಭದಲ್ಲಿ ಅಂಬೇಡ್ಕರ್ ರವರ ಮನಸ್ಥಿತಿ ಹೇಗಿತ್ತು? ಅವರ ಮಾತುಗಳಲ್ಲೇ ಹೇಳುವುದಾದರೆ ನನ್ನ ಮಟ್ಟಿಗೆ ಹೇಳುವುದಾದರೆ ಅಂದು ನಾನು ಎದುರಿಸಿದ ಅತ್ಯಂತ ಗಂಭೀರ ಮತ್ತು ಅತೀವ ಉಭಯಸಂಕಟವನ್ನು ಬಹುಶಃ ಯಾರೂ ಎದುರಿಸಿರಲಿಕ್ಕಿಲ್ಲ. ಅದು ದಿಗ್ಭ್ರಮೆಗೊಳಿಸುವಂತಹ ಪ್ರಸಂಗವಾಗಿತ್ತು. ನನಗೆ ಎರಡು ಪರ್ಯಾಯ ಮಾರ್ಗಗಳಿದ್ದು ಅವುಗಳಲ್ಲಿ ನಾನು ಒಂದನ್ನು ಅನುಸರಿಸಬೇಕಾಗಿತ್ತು. ಮಾನವೀಯತೆಯ ದೃಷ್ಟಿಯಿಂದ ಗಾಂಧೀಜಿಯವರನ್ನು ಸಾವಿನ ದವಡೆಯಿಂದ ಪಾರುಮಾಡಬೇಕಾದ ಕರ್ತವ್ಯ ನನ್ನೆದುರಿಗಿತ್ತು, ಅಲ್ಲದೆ ಬ್ರಿಟಿಷ್ ಪ್ರಧಾನಿಯವರು ಅಸ್ಪೃಶ್ಯರಿಗೆ ಕೊಡಮಾಡಿದ ರಾಜಕೀಯ ಹಕ್ಕುಗಳನ್ನು ರಕ್ಷಿಸುವ ಹೊಣೆಯೂ ನನ್ನ ಮೇಲಿತ್ತು. ಕಡೆಗೆ ನಾನು ಮಾನವೀಯತೆಯ ಕರೆಗೆ ಓಗೊಟ್ಟೆ! ಶ್ರೀಮಾನ್ ಗಾಂಧಿಯವರಿಗೆ ಒಪ್ಪಿಗೆಯಾಗುವಂತೆ ಕೋಮುವಾರು ತೀಪರ್ಿನಲ್ಲಿ ಮಾಪರ್ಾಡುಮಾಡಲು ಒಪ್ಪಿಕೊಂಡೆ. ಈ ಒಪ್ಪಂದವನ್ನೆ ಪೂನಾ ಒಪ್ಪಂದ ಎಂದು ಕರೆಯಲಾಗಿದೆ.
ಹೀಗೆ ಗಾಂಧಿಜಿಯವರ ಪ್ರಾಣವನ್ನು ಉಳಿಸಲು ತನ್ನ ಜನರ ಹಿತವನ್ನೇ ಬಲಿಕೊಟ್ಟು  ಡಾ. ಅಂಬೇಡ್ಕರ್ರವರು 1932 ಸೆಪ್ಟೆಂಬರ್  24 ರಂದು ಪೂನಾ ಒಪ್ಪಂದಕ್ಕೆ  ಸಹಿಹಾಕಿದರು.
ನೆನಪಿರಲಿ, ಗಾಂಧೀಜಿ ಮತ್ತು ಅಂಬೇಡ್ಕರ್ರವರ ನಡುವೆ ನಡೆದ  ಈ ಒಪ್ಪಂದ ಕೂಡ ಅಂತರಾಷ್ಟೀಯ ಒಪ್ಪಂದವಾಗಿತ್ತು! ಖ್ಯಾತ ಚಿಂತಕ ವಿ.ಟಿ. ರಾಜಶೇಖರ್ ಜಾತಿಯನ್ನು ರಾಷ್ಟ್ರದೊಳಗಿನ ರಾಷ್ಟ್ರ ಎನ್ನುತ್ತಾರೆ ಈ ಪ್ರಕಾರ ಗಾಂಧೀಜಿಯವರು ಸವರ್ಣ ಹಿಂದೂ ರಾಷ್ಟ್ರದ ಪ್ರತಿನಿಧಿಯಾದರೆ ಅಂಬೇಡ್ಕರ್ರವರು ಅಸ್ಪೃಶ್ಯ ರಾಷ್ಟ್ರದ ಪ್ರತಿನಿಧಿಯಾಗಿದ್ದರು!
ಗಾಂಧೀಜಿಯವರೇನೋ ರಾಜಕೀಯ ಹೋರಾಟದ ಕಾರಣಕ್ಕಾಗಿ ಅದಾಗಲೇ ಮಹಾತ್ಮ ಎನಿಸಿಕೊಂಡಿದ್ದರು. ಆದರೆ ಅಂಬೇಡ್ಕರ್? ನಿಸ್ಸಂಶಯವಾಗಿ ಈ ಒಪ್ಪಂದದ ನಂತರ ಅವರು ಅಸ್ಪೃಶ್ಯರ ಪ್ರಶ್ನಾತೀತ ನಾಯಕನಾಗಿ ಹೊರಹೊಮ್ಮಿದರು.  ಮಹಾತ್ಮ ಗಾಧಿಜಿಯವರೇ ತಮ್ಮ ನೈಜ ವ್ಯಕ್ತಿತ್ವವನ್ನು ಪ್ರದರ್ಶನಕಿಟ್ಟು ಅಸ್ಪೃಶ್ಯರ ವಿರುದ್ಧವೇ ಉಪವಾಸ ಕೂರಬೇಕಾದ ಸಂಧಿಗ್ಧ ಸಂಧರ್ಭ ಸೃಷ್ಟಿಸಿದ ಅಂಬೇಡ್ಕರರ ತಂತ್ರ ಜಗತ್ತಿನಾದ್ತದ್ಯಂತ ಪ್ರಸಂಶೆಗೆ ಒಳಗಾಯಿತು.
ಇರಲಿ, ಈ ಒಪ್ಪಂದದಿಂದ ಅಸ್ಪೃಶ್ಯರಿಗೆ ದಕ್ಕಿದ್ದಾದ್ದರೂ ಎನು? ಕೋಮುವಾರು ತೀಪರ್ಿನಲ್ಲಿ ಪ್ರಸ್ತಾಪಿಸಿದ್ದ ಅಸ್ಪೃಶ್ಯರಿಗೆ ಸಮಾನ ನಾಗರೀಕ  ಹಕ್ಕುಗಳನ್ನು ನೀಡುವ , ಸಕರ್ಾರಿ ಉದ್ಯೋಗಗಳಲ್ಲಿ  ಮೀಸಲಾತಿ ನೀಡುವ ತೀಮರ್ಾನಗಳನ್ನು  ಈ ಒಪ್ಪಂದ ಉಳಿಸಿಕೊಂಡಿತ್ತು. ಹಾಗೆಯೇ  ಮೀಸಲು ಕ್ಷೇತ್ರಗಳು ಕೂಡ ದೊರಕಿತ್ತು. ಕೊರತೆ ಏನೆಂದರೆ ಅಸ್ಫೃಶ್ಯರಿಗೆ ನೀಡಲಾಗಿದ್ದ ಆ ಪವಿತ್ರ ಎರಡು ಓಟು ಹಾಕುವ ಹಾಗು ಪ್ರತ್ಯೇಕ ಮತದಾನ ಪದ್ಧತಿಯನ್ನು ಕಿತ್ತುಕೊಳ್ಳಲಾಗಿತ್ತು. ಅಮೃತ ಸಮಾನವಾಗಿದ್ದ ಇವು ಅಸ್ಪೃಶ್ಯರಿಗೆ ಧಕ್ಕದಂತೆ ತಡೆಯುವಲ್ಲಿ ಗಾಂಧಿಯವರು ನಡೆಸಿದ ಆ ಉಪವಾಸ ಸತ್ಯಾಗ್ರಹ ಯಶಸ್ವಿಯಾಗಿತ್ತು.
ಒಂದಂತು ನಿಜ, ಬಾಯಲ್ಲಿ ಅಸ್ಪೃಶ್ಯೋದ್ಧಾರದ ಮಂತ್ರ, ಬಗಲಲ್ಲಿ ಅವರನ್ನು ಸದೆಬಡಿಯಲು ದೊಣ್ಣೆ ಹಿಡಿಯುವ ಗಾಂಧೀಜಿಯವರ ತಂತ್ರ ಪೂನಾ ಒಪ್ಪಂದದ ಮೂಲಕ ಬೀದಿಗೆ ಬಂದಿತ್ತು. ಅವರ ಈ ತಂತ್ರವನ್ನು ನೋಡಿಯೇ ಅಂಬೇಡ್ಕರ್ರವರು ಅವರನ್ನು ಯಶಸ್ವಿ ನಯವಂಚಕ ಎಂದಿರುವುದು. ಹೀಗಿರುವಾಗ ಅವರು ಅಂದರೆ ಗಾಂಧೀಜಿಯವರು ಅಸ್ಪೃಶ್ಯರಿಗೆ ಮಹಾತ್ಮ ಹೇಗಾಗುತ್ತಾರೆ? ಬೇಕಿದ್ದರೆ ಅವರು ಸವರ್ಣ ಹಿಂದೂಗಳ ಲೋಕದ ಮಹಾತ್ಮರಾಗಬಹುದು . ಅಸ್ಪೃಶ್ಯ ಲೋಕಕ್ಕಂತೂ ಖಂಡಿತ ಅಲ್ಲ!
ರಘೋತ್ತಮ ಹೊ. ಬ.
ಚಾಮರಾಜನಗರ

ರಾಹುಲ್ ಗಾಂಧಿಯವರು ಸಂವಾದಗಳಿಂದ ಸಾಧಿಸುವುದೇನು?


ಶ್ರೀಮಂತರಿಗೆ, ಅದು ಹೆಚ್ಚು ಓದಿಕೊಂಡ ಬಡತನದ ಗಂಧವೇ ಇಲ್ಲದ, ಶೋಷಿತರ ಕಷ್ಟಗಳ ಅರಿವೆ ಇಲ್ಲದ  ಶ್ರೀಮಂತರಿಗೆ ಒಂದು ಖಯಾಲಿ ಇದೆ. ಅದೇನಪ್ಪಾ ಅಂದರೆ ಬಡವರ ಮನೆಗಳಿಗೆ ಭೇಟಿ ನೀಡುವುದು, ಅವರ ಬಡತನವನ್ನು ಹೀನ ಪರಿಸ್ಥಿತಿಯನ್ನು ಕಂಡು ಮರುಗುವುದು , ಅಚ್ಚರಿವ್ಯಕ್ತಪಡಿಸುವುದು, ಸಾಧ್ಯ ವಾದರೆ ಅವರಿಗೆ ನೂರಿನ್ನೂರು ರೂಪಾಯಿ ಕೊಟ್ಟು ತಾವೇ ತರುವ ಕ್ಯಾಮೆರಾಗಳಿಗೆ ಅವರ ಜೊತೆ ಫೋಸು ಕೊಡುವುದು!                                     ಅಂದಹಾಗೆ ಇವೆಲ್ಲವನ್ನು ಅವರು ಸಾಮಾಜಿಕ ಕಳಕಳಿಯ ದೃಷ್ಟಿಯಿಂದ , ಸಹಾಯ ಮಾಡಬೇಕೆಂಬ ಹಂಬಲದಿಂದ ಮಾಡುತ್ತಾರೆಂದರೆ ಅದು ತಮಾಷೆಯಾಗುತ್ತದೆ! ಅದು ಮಾಡುವುದು ಕೂಡ ಅವರ ವಯಕ್ತಿಕ ಲಾಭಕ್ಕೆ. ಆ ಬಡವರ ಬಡತನದ ಬಗ್ಗೆ  ಅವರ ಸ್ಥಿತಿಗತಿಯ ಬಗ್ಗೆ ಲೇಖನ ಬರೆಯುವುದು,  ಕತೆ ಕಾದಂಬರಿಗಳನ್ನು ಬರೆಯುವುದು , ಅದನ್ನು ರಾಷ್ಟ್ರೀಯ ಅಂತರಾಷ್ಟ್ರೀಯ ಪತ್ರಿಕೆಗಳಲ್ಲಿ ಪ್ರಕಟಿಸುವುದು , ಡಾಕ್ಯೂಮೆಂಟರಿಗಳನ್ನು ತೆಗೆಯುವುದು, ಪ್ರಗತಿಪರ ಚಿಂತಕ ಎನಿಸಿಕೊಳ್ಳುವುದು, ಪ್ರಶಸ್ತಿಗಳನ್ನು ಬಾಚಿಕೊಳ್ಳುವುದು. ಸಾಧ್ಯವಾದರೆ ಆ ಬಡವರ ಸಮಸ್ಯೇಗಳ ಬಗ್ಗೆ ಸಂಶೋಧನೆಗಳನ್ನು  ಮಾಡಿ ಪಿ,ಹೆಚ್.ಡಿ. ಪದವಿ ಪಡೆಯುವುದು. ಒಟ್ಟಿನಲಿ ಬಡವರ ಬಡತನ ,ಶೋಷಿತರ ಕಷ್ಟಸುಖ ಇವರಿಗೆ ಬಂಡವಾಳ!
ಪ್ರಸ್ತುತ ಕಾಂಗ್ರೆಸ್ನ ಯುವರಾಜ ರಾಹುಲ್ ಗಾಂಧಿಯವರು ದೇಶದಾಂದ್ಯಂತ ನಡೆಸುತ್ತಿರುವ ಸಂವಾದ , ವಾಸ್ತವ್ಯ ಇತ್ಯಾದಿ ಕಾರ್ಯಕ್ರಮಗಳು ಕೂಡ ಇಂತಹದ್ದೆ ಮಾದರಿಯವು! ಇದರಿಂದ ರಾಹುಲ್ ಗಾಂಧಿಯವರಿಗೆ ಆಗುವ ಲಾಭ ? ಉತ್ತರ  ಸೂರ್ಯಸ್ಪಷ್ಟ. ರಾಜಕೀಯದ್ದು!
ಸಣ್ಣ ಪುಟ್ಟ ಶ್ರೀಮಂತರು ಒಂದೆರಡು ಪ್ರಶಸ್ತಿ ಪದವಿ, ಖ್ಯಾತಿಗಳಿಗೆ ತೃಪ್ತಿ ಪಟ್ಟರೆ  ರಾಹುಲ್ ಏನಿದ್ದರು ದೊಡ್ಡ ಮಿಕಕ್ಕೇ ಬಲೆ ಬೀಸುತ್ತಿದ್ದಾರೆ. ಆ ಮಿಕ ಈ ದೇಶದ ಪ್ರಧಾನಿ ಪಟ್ಟ. (ಅದು ಅವರಿಗೆ ಅನಾಯಾಸವಾಗಿ ದೊರಕುತ್ತದೆ ಎಬುಂದು ಬೇರೆ ಮಾತು ,ಆದರೂ ಒಂದಷ್ಟು ಇಮೇಜ್ ಬೇಕಲ್ಲ!)
ಹಾಗಿದ್ದರೆ ಇಂತಹ ಸ್ವಾರ್ಥ ಉದ್ದೇಶಿತ ಸಂವಾದಗಳಿಂದ  ರಾಹುಲ್ರವರು ಸಾಧಿಸುವುದು, ಈ ದೇಶದ ಜನತೆಗೆ ದೊರಕುವ ಲಾಭ? ಅಕ್ಷರಶಃ ಸೊನ್ನೆ! ಏಕೆಂದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿಜವಾದ ಚಚರ್ೆ, ಸಂವಾದ ನಡೆಯಬೇಕಾದ್ದು ಪಾಲರ್ಿಮೆಂಟ್ನಲ್ಲಿ. ಬೀದಿಯಲ್ಲಲ್ಲ.  ಪಾಲರ್ಿಮೆಂಟ್ನಲ್ಲಿ ನಡೆದ ಆ ಸಂವಾದಗಳು ಕಾನೂನುಗಳಾಗುತ್ತವೆ . ಅಂತಹ ಕಾನೂನುಗಳು ಈ ದೇಶದ ಬಡವರಿಗೆ ಸಾಮಾಜಿಕ ನ್ಯಾಯ, ಸಮಾನತೆಯನ್ನು ದೊರಕಿಸಿಕೊಡುತ್ತವೆ . ಬೀದಿ ಚಚರ್ೆಗಳು , ಸಂವಾದಗಳು ಬತರೀ ಸುದ್ದಿಗಳಾಗಿಯೇ ಉಳಿಯುತ್ತವೆ. ಆ ಸುದ್ದಿಗಳಿಂದ ಸುದ್ದಿಮಾಡಿದವ ನಾಯಕನಾಗಿಯೋ, ಮತ್ತೊಂದಾಗಿಯೋ ಹೊರಹೊಮ್ಮುತ್ತಾನೆ. ಆದರೆ ಆ ಸುದ್ದಿಯ ಮೂಲವಾಗಿರುವ ಬಡವ, ಮತ್ತಾತನ ಸಮಸ್ಯೆಗಳು? ಸಮಸ್ಯೆಗಳಾಗಿಯೇ ಉಳೀಯುತ್ತವೆ! ನಿಜಕ್ಕೂ ರಾಹುಲ್ರ ಈ ತಂತ್ರ ಮೆಚ್ಚಬೇಕಾದ್ದೆ.
ಉದಾಹರಣೆಗೆ ಕಳೆದ ಸಾರ್ವತ್ರಿಕ ಚುನಾವಣೆಯ ಸಂಧರ್ಭದಲ್ಲಿ ಚಾಮರಾಜನಗರದ ಬಿಳಿಗಿರಿರಂಗನ ಬೆಟ್ಟಕ್ಕೆ ಗಿರಿಜನರ ಜೊತೆ ಸಂವಾದಕ್ಕೆ ಬಂದಿದ್ದ ರಾಹುಲ್ ಗಾಂಧಿಯವರು ಮತ್ತೆ ಸಂಸದರಾಗಿ ಆಯ್ಕೆಯಾದರು. ಅವರ ಪಕ್ಷ ಮತ್ತೆ ಅಧಿಕಾರಕ್ಕೆ ಬಂದಿತು. ಸಂವಾದದಲ್ಲಿ ಭಾಗವಹಿಸಿದ್ದ ಗಿರಿಜನರಿಗೇನು ಸಿಕ್ಕಿತು? ಅವರಿನ್ನು ಗಿರಿಜನರಾಗಿಯೇ ಉಳಿದಿದ್ದಾರೆ. ಅವರ ಮುರುಕಲು ಮನೆಗಳು ಹರುಕಲು ಬಟ್ಟೆಗಳು ಹಾಗೆಯೇ ಇವೆ. ಅವರ ಉತ್ಪನ್ನಗಳಿಗೆ ಮಾರುಕಟ್ಟೆಯೂ ಇಲ್ಲ , ಸಾಲದ್ದಕ್ಕೆ ಅರಣ್ಯಕ್ಕೆ ಸಂಬಂಧಿಸಿದ ಕಾನೂನುಗಳು ಅವರನ್ನು ಕಿತ್ತು ತಿನ್ನುತ್ತಿವೆ ಅಧಿಕಾರಿಗಳ ರೂಪದಲ್ಲಿ! ಈ ಭಾರತಕ್ಕೆ ರಾಹುಲ್ ದೆಹಲಿಯಿಂದ ಬಿಳಿಗಿರಿರಂಗನ ಬೆಟ್ಟಕ್ಕೆ ಯಾಕೆ ಬರಬೇಕಿತ್ತು? ದೂರದ ದೆಹಲಿಯಲ್ಲೇ ಕುಳಿತು ಗಿರಿಜನರ ಪರ ಅಂದರೆ ಅವರ ಅರಣ್ಯ ಉತ್ಪನ್ನಗಳಿಗೆ ಅಂತರಾಷ್ಟೀಯ ಮಾರುಕಟ್ಟೆ ನಿಮರ್ಿಸುವಂತಹ , ಅರಣ್ಯಗಳಿಂದ ಅವರನ್ನು ಒಕ್ಕಲೆಬ್ಬಿಸದಿರುವಂತಹ ಕಾನೂನುಗಳನ್ನು ಮಾಡ ಬಹುದಿತ್ತಲ್ಲ! ರಾಹುಲ್ಜೀಯವರಿಗೆ ಇದು ಗೊತ್ತಿರಲಿಲ್ಲವೆ? ಗೊತ್ತು. ಆದರೆ ಅಂತಹ ಕಾನೂನು ಕ್ರಮಗಳು  ಓಟ್ ಬ್ಯಾಂಕ್ ಸೃಷ್ಟಿಸುವ ಸಾಧ್ಯತೆ ಕಡಿಮೆ ಇರುತ್ತದಲ್ಲ! ಸಾಲದಕ್ಕೆ ಅದು ಕಠಿಣತಮ ಪ್ರಕ್ರಿಯೆ ಬೇರೆ. ಅದೇ ಬೀದಿಯಲಿ ನಿಂತು( ಇಂತಿಂತಹವರಿಗೆ ಇಂತಿಂತಹದೆ ಪ್ರಶ್ನೆಗಳನ್ನು ಕೇಳಿ ಎಂದು ಪೂರ್ವ ನಿರ್ಧರಿತವಾಗಿ!) ಸಂವಾದ ನಡೆಸುವುದು? ಸುಲಭ. ಜೊತೆಗೆ ಪ್ರಚಾರಾನೂ ಸಿಗುತ್ತೆ! ಓಟ್ ಬ್ಯಾಂಕೂ ಹೆಚ್ಚುತ್ತೆ. ಪ್ರಧಾನಿ ಪಟ್ಟಕ್ಕೆ ಬೇಕಾದ ಅರ್ಹತೆಗಳಂತೂ ಅನಾಯಾಸವಾಗಿ ಒದಗಿ ಬಂದೇಬರುತ್ತೆ!
ನಿಜ, ಕಾಂಗ್ರೆಸ್ಸಿನ ಯುವರಾಜನಾಗಿ, ಪ್ರಭಾವಿ ಸಂಸದನಾಗಿ ಇಂದು ರಾಹುಲ್ ಏನನ್ನು ಬೇಕಾದರೂ ಸಾಧಿಸಬಹುದು. ರಾಷ್ಟ್ರದ ಗತಿಯನ್ನೇ ಬದಲಿಸ ಬಹುದು . ಅಂತಹದ್ಯಾವುದ್ದಕ್ಕೂ ಇವರಿಗೆ ಮನಸ್ಸಿದ್ದಂತಿಲ್ಲ. ಏಕೆಂದರೆ ಈ ದೇಶದ ಗತಿಯನ್ನು ಬದಲಿಸುವುದೆಂದರೆ, ಈ ದೇಶದ ಬಡವರ ಸ್ಥಿತಿಗತಿ ಬದಲಿಸುವುದೆಂದರ್ಥ. ಶೋಷಿತರ ಸಮಸ್ಯೆಗಳನ್ನು ನಿವಾರಿಸುವುದೆಂದರ್ಥ.ರಾಹುಲ್ ಗಾಂಧಿಯವರಿಗೆ ಇದ್ಯಾವುದು ಬೇಕಿಲ್ಲ ಎಂದೆನಿಸುತ್ತದೆ. ಅದಕ್ಕೆ ಅವರು ಬೀದಿ ಸಂವಾದಗಳಿಗೆ ಜೋತು ಬಿದ್ದಿದ್ದಾರೆ, ಪಾಲರ್ಿಮೆಂಟಿನಲ್ಲಿ ನಡೆಸಬೇಕಾದ ಸಂವಾದಗಳನ್ನು ಬಿಟ್ಟು.
ನಿಜವಾಗಿ ಹೇಳಬೇಕೆಂದರೆ ಸಾಮಾಜಿಕ ನ್ಯಾಯದ ದೃಷ್ಟಿಯಲ್ಲಿ ಗಂಭೀರ ಸಮಸ್ಯೆಗಳು ಇಂದು ದೇಶವನ್ನು ಕಿತ್ತು ತಿನ್ನುತ್ತಿವೆ . ಜಾತಿ ಆಧರಿತ ಜನಗಣತಿಯ ಬಗ್ಗೆ ಕೇಂದ್ರ ಸಕರ್ಾರ ಮೀನಾಮೇಷ ಎಣಿಸುತ್ತಿದೆ,. ಅಲ್ಪಸಂಖ್ಯಾತರಿಗೆ ಮೀಸಲಾತಿ ಒದಗಿಸಿಕೊಡುವಂತಹ  ರಂಗನಾಥ ಮಿಶ್ರ  ವರದಿ ಹಾಗೆ ಕೊಳೆಯುತ್ತಿದೆ. ದಿಲ್ಲಿಯ ಅವರ ಪಕ್ಷದ ನೇತೃತ್ವದ ಸಕರ್ಾರ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ದಲಿತರ ಹಣ ಬಳಸಿಕೊಂಡ ಆರೋಪ ಬೇರೆ ಕೇಳಿ ಬರುತ್ತಿದೆ. ನೈಜವಾದ ಕಳಕಳಿಯಿದ್ದರೆ ರಾಹುಲ್ ಗಾಂಧಿಯವರು ಈ ಸಮಸ್ಯೆಗಳ ಬಗ್ಗೆ ಸಂಸತ್ತಿನಲ್ಲಿ ಗಟ್ಟಿಯಾಗಿ ದನಿ ಎತ್ತ ಬೇಕಿತ್ತು , ಬಡವರ ಪರ ಶೋಷಿತರ ಪರ ಜಾರಿಯಾಗಬೇಕಾದ ಯೋಜನೆಗಳ ಬಗ್ಗೆ, ವೀರಾವೇಶದಿಂದ ಹೋರಾಡಬೇಕಿತ್ತು. ಆಗ ಇವರು ನಿಜವಾದ ಜನಪರ ನಾಯಕ, ಕಾಳಜಿಯುಳ್ಳ ರಾಜಕಾರಣಿ ಎಂದೆನಿಸಿಕೊಳ್ಳುತ್ತಿದ್ದರು   ಮತ್ತು ಬೀದಿಯಲಿ ಅವರು ನಡೆಸುವ ಸಂವಾದಗಳಿಗೂ ಆಗ ಬೆಲೆ ಇರುತ್ತಿತ್ತು. ಅದು ಬಿಟ್ಟು ಯುವಜನರ ಜೊತೆ ಸಂವಾದ, ವಿಧ್ಯಾಥರ್ಿಗಳ ಜೊತೆ ಬೆರೆಯಯುವುದು , ಕ್ಯಾಂಟೀನ್ಗಳಲ್ಲಿ ಕಾಫಿ ತಿಂಡಿ ತಿನ್ನುವುದು, ದಲಿತರ ಮನೆಗಳಲ್ಲಿ ವಾಸ್ತವ್ಯ ಹೂಡುವುದು ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಢೋಂಗಿತನದ ಪ್ರದರ್ಶನವಲ್ಲದೆ ಮತ್ತೇನು?
ವಯಕ್ತಿಕ ಘಟನೆಯೊಂದನ್ನು ಇಲ್ಲಿ ಹೇಳಲೇಬೇಕು . ಅದು 1986 ರ ಒಂದು ದಿನ. ದಿವಂಗತ ರಾಜೀವ್ ಗಾಂಧಿಯವರು ಪ್ರಧಾನಿಯಾಗಿದ್ದ ಕಾಲವದು.  ಆ ಸಂಧರ್ಭ ರಾಜೀವ್ಗಾಂಧಿಯವರು ನಮ್ಮೂರಿಗೆ ಭೇಟಿ ನೀಡಿದ್ದರು. ಹೆಲಿಕಾಪ್ಟರ್ ಮೂಲಕ ಬಂದ  ಅವರು ಸ್ಟೇಜ್ ಮೇಲೆ ಏರುತ್ತಿದ್ದಂತೆ ಅವರನ್ನು ನೋಡಲು ಕಷ್ಟಪಡುತ್ತಿದ್ದ ನನ್ನನ್ನು ನಮ್ಮಪ್ಪ ಹೆಗಲ ಮೇಲೆ ಎತ್ತಿಕೊಂಡು ತೋರಿಸಿ  ಎಷ್ಟು ಕೆಂಪಗವರೆ ಅಲ್ವಾ ಎಂದಿದ್ದರು. ನಾನು ಹ್ಞೂ, ಅಪ್ಪೈ ಎಂದಿದ್ದೆ. ಅದಾದ ನಂತರ ನನಗೆ ಬುದ್ಧಿ ಬಂದ ಕಾಲದಿಂದಲೂ ರಾಜೀವ್ ಶೋಷಿತರ ಪರ ಕೆಲಸ ಮಾಡಿದ ಒಂದೂ ಸುದ್ದಿಯನ್ನೂ ಓದಲಿಲ್ಲ. ಆದರೆ ಅದೇ ಶತಮಾನಗಳಿಂದ ಗಿಡಗಂಟಿಗಳು ಬೆಳೆದಿದ್ದ ಅಯೋಧ್ಯೆಯ ಬಾಬ್ರಿ ಮಸೀದಿಯ ಬೀಗವನ್ನು ರಾಜೀವ್ ತೆಗೆಸಿದ ಸುದ್ಧಿಯನ್ನು ಓದಿದೆ! ಮುಂದೆ ಅದರಿಂದಾಶದ ಅನಾಹುತ ಇಡೀ ಜಗತ್ತಿಗೇ ತಿಳಿದಿದೆ.
ರಾಹುಲ್ ಕೂಡ ತಮ್ಮ ತಂದೆಯ ಹಾಶಗೆ ಕೆಂಪಗೆ ಇದ್ದಾರೆ. ಮುಂದೆ ಅವರೂ ಕೂಡ ಪ್ರಧಾನಿಯಾಗಲಿದ್ದಾರೆ. ಆದರೆ ಆಶಯವೆಂದರೆ ರಾಹುಲ್ ಗಾಂಧಿಯವರು ತಮ್ಮ ತಂದೆಯವರು ಮಾಡಿದ ತಪ್ಪುಗಳನ್ನು ಪುನರಾವತರ್ಿಸುವುದು ಬೇಡ. ಅದಕ್ಕಾಗಿ ರಾಹುಲ್ಜೀಯವರು ಇಂತಹ ಸಂವಾದಗಳನ್ನು ನಡೆಸುವುದು ಬಿಟ್ಟು ತಮ್ಮ ತಂದೆಯ , ತಮ್ಮ ಅಜ್ಜಿ ಇಂದಿರಾಗಾಂಧಿಯವರ, ಮುತ್ತಾತ ಪಂಡಿತ್ ನೆಹರೂರವರ ಆಡಳಿತಾವಧಿಯನ್ನು  ಕೂಲಂಕುಷವಾಗಿ ಅಧ್ಯಯನಮಾಡಲಿ. ತಪ್ಪುಒಪ್ಪುಗಳನ್ನು ಪರಿಶೀಲಿಸಲಿ .ಅದಕ್ಕೂ ಮೊದಲು ಸಂಸತ್ತಿನಲ್ಲಿ ಬಡವರ ಪರ, ಶೋಷಿತರ ಪರ ದನಿ ಎತ್ತಲಿ.
ರಘೋತ್ತಮ ಹೊ. ಬ
ಚಾನಮರಾಜನಗರ –
ಮೊ; 9481189116


ರಾಹುಲ್ ಗಾಂಧಿಯವರು ಸಂವಾದಗಳಿಂದ ಸಾಧಿಸುವುದೇನು?
ಶ್ರೀಮಂತರಿಗೆ, ಅದು ಹೆಚ್ಚು ಓದಿಕೊಂಡ ಬಡತನದ ಗಂಧವೇ ಇಲ್ಲದ, ಶೋಷಿತರ ಕಷ್ಟಗಳ ಅರಿವೆ ಇಲ್ಲದ  ಶ್ರೀಮಂತರಿಗೆ ಒಂದು ಖಯಾಲಿ ಇದೆ. ಅದೇನಪ್ಪಾ ಅಂದರೆ ಬಡವರ ಮನೆಗಳಿಗೆ ಭೇಟಿ ನೀಡುವುದು, ಅವರ ಬಡತನವನ್ನು ಹೀನ ಪರಿಸ್ಥಿತಿಯನ್ನು ಕಂಡು ಮರುಗುವುದು , ಅಚ್ಚರಿವ್ಯಕ್ತಪಡಿಸುವುದು, ಸಾಧ್ಯ ವಾದರೆ ಅವರಿಗೆ ನೂರಿನ್ನೂರು ರೂಪಾಯಿ ಕೊಟ್ಟು ತಾವೇ ತರುವ ಕ್ಯಾಮೆರಾಗಳಿಗೆ ಅವರ ಜೊತೆ ಫೋಸು ಕೊಡುವುದು!                                     ಅಂದಹಾಗೆ ಇವೆಲ್ಲವನ್ನು ಅವರು ಸಾಮಾಜಿಕ ಕಳಕಳಿಯ ದೃಷ್ಟಿಯಿಂದ , ಸಹಾಯ ಮಾಡಬೇಕೆಂಬ ಹಂಬಲದಿಂದ ಮಾಡುತ್ತಾರೆಂದರೆ ಅದು ತಮಾಷೆಯಾಗುತ್ತದೆ! ಅದು ಮಾಡುವುದು ಕೂಡ ಅವರ ವಯಕ್ತಿಕ ಲಾಭಕ್ಕೆ. ಆ ಬಡವರ ಬಡತನದ ಬಗ್ಗೆ  ಅವರ ಸ್ಥಿತಿಗತಿಯ ಬಗ್ಗೆ ಲೇಖನ ಬರೆಯುವುದು,  ಕತೆ ಕಾದಂಬರಿಗಳನ್ನು ಬರೆಯುವುದು , ಅದನ್ನು ರಾಷ್ಟ್ರೀಯ ಅಂತರಾಷ್ಟ್ರೀಯ ಪತ್ರಿಕೆಗಳಲ್ಲಿ ಪ್ರಕಟಿಸುವುದು , ಡಾಕ್ಯೂಮೆಂಟರಿಗಳನ್ನು ತೆಗೆಯುವುದು, ಪ್ರಗತಿಪರ ಚಿಂತಕ ಎನಿಸಿಕೊಳ್ಳುವುದು, ಪ್ರಶಸ್ತಿಗಳನ್ನು ಬಾಚಿಕೊಳ್ಳುವುದು. ಸಾಧ್ಯವಾದರೆ ಆ ಬಡವರ ಸಮಸ್ಯೇಗಳ ಬಗ್ಗೆ ಸಂಶೋಧನೆಗಳನ್ನು  ಮಾಡಿ ಪಿ,ಹೆಚ್.ಡಿ. ಪದವಿ ಪಡೆಯುವುದು. ಒಟ್ಟಿನಲಿ ಬಡವರ ಬಡತನ ,ಶೋಷಿತರ ಕಷ್ಟಸುಖ ಇವರಿಗೆ ಬಂಡವಾಳ!             ಪ್ರಸ್ತುತ ಕಾಂಗ್ರೆಸ್ನ ಯುವರಾಜ ರಾಹುಲ್ ಗಾಂಧಿಯವರು ದೇಶದಾಂದ್ಯಂತ ನಡೆಸುತ್ತಿರುವ ಸಂವಾದ , ವಾಸ್ತವ್ಯ ಇತ್ಯಾದಿ ಕಾರ್ಯಕ್ರಮಗಳು ಕೂಡ ಇಂತಹದ್ದೆ ಮಾದರಿಯವು! ಇದರಿಂದ ರಾಹುಲ್ ಗಾಂಧಿಯವರಿಗೆ ಆಗುವ ಲಾಭ ? ಉತ್ತರ  ಸೂರ್ಯಸ್ಪಷ್ಟ. ರಾಜಕೀಯದ್ದು!            ಸಣ್ಣ ಪುಟ್ಟ ಶ್ರೀಮಂತರು ಒಂದೆರಡು ಪ್ರಶಸ್ತಿ ಪದವಿ, ಖ್ಯಾತಿಗಳಿಗೆ ತೃಪ್ತಿ ಪಟ್ಟರೆ  ರಾಹುಲ್ ಏನಿದ್ದರು ದೊಡ್ಡ ಮಿಕಕ್ಕೇ ಬಲೆ ಬೀಸುತ್ತಿದ್ದಾರೆ. ಆ ಮಿಕ ಈ ದೇಶದ ಪ್ರಧಾನಿ ಪಟ್ಟ. (ಅದು ಅವರಿಗೆ ಅನಾಯಾಸವಾಗಿ ದೊರಕುತ್ತದೆ ಎಬುಂದು ಬೇರೆ ಮಾತು ,ಆದರೂ ಒಂದಷ್ಟು ಇಮೇಜ್ ಬೇಕಲ್ಲ!)       ಹಾಗಿದ್ದರೆ ಇಂತಹ ಸ್ವಾರ್ಥ ಉದ್ದೇಶಿತ ಸಂವಾದಗಳಿಂದ  ರಾಹುಲ್ರವರು ಸಾಧಿಸುವುದು, ಈ ದೇಶದ ಜನತೆಗೆ ದೊರಕುವ ಲಾಭ? ಅಕ್ಷರಶಃ ಸೊನ್ನೆ! ಏಕೆಂದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿಜವಾದ ಚಚರ್ೆ, ಸಂವಾದ ನಡೆಯಬೇಕಾದ್ದು ಪಾಲರ್ಿಮೆಂಟ್ನಲ್ಲಿ. ಬೀದಿಯಲ್ಲಲ್ಲ.  ಪಾಲರ್ಿಮೆಂಟ್ನಲ್ಲಿ ನಡೆದ ಆ ಸಂವಾದಗಳು ಕಾನೂನುಗಳಾಗುತ್ತವೆ . ಅಂತಹ ಕಾನೂನುಗಳು ಈ ದೇಶದ ಬಡವರಿಗೆ ಸಾಮಾಜಿಕ ನ್ಯಾಯ, ಸಮಾನತೆಯನ್ನು ದೊರಕಿಸಿಕೊಡುತ್ತವೆ . ಬೀದಿ ಚಚರ್ೆಗಳು , ಸಂವಾದಗಳು ಬತರೀ ಸುದ್ದಿಗಳಾಗಿಯೇ ಉಳಿಯುತ್ತವೆ. ಆ ಸುದ್ದಿಗಳಿಂದ ಸುದ್ದಿಮಾಡಿದವ ನಾಯಕನಾಗಿಯೋ, ಮತ್ತೊಂದಾಗಿಯೋ ಹೊರಹೊಮ್ಮುತ್ತಾನೆ. ಆದರೆ ಆ ಸುದ್ದಿಯ ಮೂಲವಾಗಿರುವ ಬಡವ, ಮತ್ತಾತನ ಸಮಸ್ಯೆಗಳು? ಸಮಸ್ಯೆಗಳಾಗಿಯೇ ಉಳೀಯುತ್ತವೆ! ನಿಜಕ್ಕೂ ರಾಹುಲ್ರ ಈ ತಂತ್ರ ಮೆಚ್ಚಬೇಕಾದ್ದೆ.             ಉದಾಹರಣೆಗೆ ಕಳೆದ ಸಾರ್ವತ್ರಿಕ ಚುನಾವಣೆಯ ಸಂಧರ್ಭದಲ್ಲಿ ಚಾಮರಾಜನಗರದ ಬಿಳಿಗಿರಿರಂಗನ ಬೆಟ್ಟಕ್ಕೆ ಗಿರಿಜನರ ಜೊತೆ ಸಂವಾದಕ್ಕೆ ಬಂದಿದ್ದ ರಾಹುಲ್ ಗಾಂಧಿಯವರು ಮತ್ತೆ ಸಂಸದರಾಗಿ ಆಯ್ಕೆಯಾದರು. ಅವರ ಪಕ್ಷ ಮತ್ತೆ ಅಧಿಕಾರಕ್ಕೆ ಬಂದಿತು. ಸಂವಾದದಲ್ಲಿ ಭಾಗವಹಿಸಿದ್ದ ಗಿರಿಜನರಿಗೇನು ಸಿಕ್ಕಿತು? ಅವರಿನ್ನು ಗಿರಿಜನರಾಗಿಯೇ ಉಳಿದಿದ್ದಾರೆ. ಅವರ ಮುರುಕಲು ಮನೆಗಳು ಹರುಕಲು ಬಟ್ಟೆಗಳು ಹಾಗೆಯೇ ಇವೆ. ಅವರ ಉತ್ಪನ್ನಗಳಿಗೆ ಮಾರುಕಟ್ಟೆಯೂ ಇಲ್ಲ , ಸಾಲದ್ದಕ್ಕೆ ಅರಣ್ಯಕ್ಕೆ ಸಂಬಂಧಿಸಿದ ಕಾನೂನುಗಳು ಅವರನ್ನು ಕಿತ್ತು ತಿನ್ನುತ್ತಿವೆ ಅಧಿಕಾರಿಗಳ ರೂಪದಲ್ಲಿ! ಈ ಭಾರತಕ್ಕೆ ರಾಹುಲ್ ದೆಹಲಿಯಿಂದ ಬಿಳಿಗಿರಿರಂಗನ ಬೆಟ್ಟಕ್ಕೆ ಯಾಕೆ ಬರಬೇಕಿತ್ತು? ದೂರದ ದೆಹಲಿಯಲ್ಲೇ ಕುಳಿತು ಗಿರಿಜನರ ಪರ ಅಂದರೆ ಅವರ ಅರಣ್ಯ ಉತ್ಪನ್ನಗಳಿಗೆ ಅಂತರಾಷ್ಟೀಯ ಮಾರುಕಟ್ಟೆ ನಿಮರ್ಿಸುವಂತಹ , ಅರಣ್ಯಗಳಿಂದ ಅವರನ್ನು ಒಕ್ಕಲೆಬ್ಬಿಸದಿರುವಂತಹ ಕಾನೂನುಗಳನ್ನು ಮಾಡ ಬಹುದಿತ್ತಲ್ಲ! ರಾಹುಲ್ಜೀಯವರಿಗೆ ಇದು ಗೊತ್ತಿರಲಿಲ್ಲವೆ? ಗೊತ್ತು. ಆದರೆ ಅಂತಹ ಕಾನೂನು ಕ್ರಮಗಳು  ಓಟ್ ಬ್ಯಾಂಕ್ ಸೃಷ್ಟಿಸುವ ಸಾಧ್ಯತೆ ಕಡಿಮೆ ಇರುತ್ತದಲ್ಲ! ಸಾಲದಕ್ಕೆ ಅದು ಕಠಿಣತಮ ಪ್ರಕ್ರಿಯೆ ಬೇರೆ. ಅದೇ ಬೀದಿಯಲಿ ನಿಂತು( ಇಂತಿಂತಹವರಿಗೆ ಇಂತಿಂತಹದೆ ಪ್ರಶ್ನೆಗಳನ್ನು ಕೇಳಿ ಎಂದು ಪೂರ್ವ ನಿರ್ಧರಿತವಾಗಿ!) ಸಂವಾದ ನಡೆಸುವುದು? ಸುಲಭ. ಜೊತೆಗೆ ಪ್ರಚಾರಾನೂ ಸಿಗುತ್ತೆ! ಓಟ್ ಬ್ಯಾಂಕೂ ಹೆಚ್ಚುತ್ತೆ. ಪ್ರಧಾನಿ ಪಟ್ಟಕ್ಕೆ ಬೇಕಾದ ಅರ್ಹತೆಗಳಂತೂ ಅನಾಯಾಸವಾಗಿ ಒದಗಿ ಬಂದೇಬರುತ್ತೆ!               ನಿಜ, ಕಾಂಗ್ರೆಸ್ಸಿನ ಯುವರಾಜನಾಗಿ, ಪ್ರಭಾವಿ ಸಂಸದನಾಗಿ ಇಂದು ರಾಹುಲ್ ಏನನ್ನು ಬೇಕಾದರೂ ಸಾಧಿಸಬಹುದು. ರಾಷ್ಟ್ರದ ಗತಿಯನ್ನೇ ಬದಲಿಸ ಬಹುದು . ಅಂತಹದ್ಯಾವುದ್ದಕ್ಕೂ ಇವರಿಗೆ ಮನಸ್ಸಿದ್ದಂತಿಲ್ಲ. ಏಕೆಂದರೆ ಈ ದೇಶದ ಗತಿಯನ್ನು ಬದಲಿಸುವುದೆಂದರೆ, ಈ ದೇಶದ ಬಡವರ ಸ್ಥಿತಿಗತಿ ಬದಲಿಸುವುದೆಂದರ್ಥ. ಶೋಷಿತರ ಸಮಸ್ಯೆಗಳನ್ನು ನಿವಾರಿಸುವುದೆಂದರ್ಥ.ರಾಹುಲ್ ಗಾಂಧಿಯವರಿಗೆ ಇದ್ಯಾವುದು ಬೇಕಿಲ್ಲ ಎಂದೆನಿಸುತ್ತದೆ. ಅದಕ್ಕೆ ಅವರು ಬೀದಿ ಸಂವಾದಗಳಿಗೆ ಜೋತು ಬಿದ್ದಿದ್ದಾರೆ, ಪಾಲರ್ಿಮೆಂಟಿನಲ್ಲಿ ನಡೆಸಬೇಕಾದ ಸಂವಾದಗಳನ್ನು ಬಿಟ್ಟು.           ನಿಜವಾಗಿ ಹೇಳಬೇಕೆಂದರೆ ಸಾಮಾಜಿಕ ನ್ಯಾಯದ ದೃಷ್ಟಿಯಲ್ಲಿ ಗಂಭೀರ ಸಮಸ್ಯೆಗಳು ಇಂದು ದೇಶವನ್ನು ಕಿತ್ತು ತಿನ್ನುತ್ತಿವೆ . ಜಾತಿ ಆಧರಿತ ಜನಗಣತಿಯ ಬಗ್ಗೆ ಕೇಂದ್ರ ಸಕರ್ಾರ ಮೀನಾಮೇಷ ಎಣಿಸುತ್ತಿದೆ,. ಅಲ್ಪಸಂಖ್ಯಾತರಿಗೆ ಮೀಸಲಾತಿ ಒದಗಿಸಿಕೊಡುವಂತಹ  ರಂಗನಾಥ ಮಿಶ್ರ  ವರದಿ ಹಾಗೆ ಕೊಳೆಯುತ್ತಿದೆ. ದಿಲ್ಲಿಯ ಅವರ ಪಕ್ಷದ ನೇತೃತ್ವದ ಸಕರ್ಾರ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ದಲಿತರ ಹಣ ಬಳಸಿಕೊಂಡ ಆರೋಪ ಬೇರೆ ಕೇಳಿ ಬರುತ್ತಿದೆ. ನೈಜವಾದ ಕಳಕಳಿಯಿದ್ದರೆ ರಾಹುಲ್ ಗಾಂಧಿಯವರು ಈ ಸಮಸ್ಯೆಗಳ ಬಗ್ಗೆ ಸಂಸತ್ತಿನಲ್ಲಿ ಗಟ್ಟಿಯಾಗಿ ದನಿ ಎತ್ತ ಬೇಕಿತ್ತು , ಬಡವರ ಪರ ಶೋಷಿತರ ಪರ ಜಾರಿಯಾಗಬೇಕಾದ ಯೋಜನೆಗಳ ಬಗ್ಗೆ, ವೀರಾವೇಶದಿಂದ ಹೋರಾಡಬೇಕಿತ್ತು. ಆಗ ಇವರು ನಿಜವಾದ ಜನಪರ ನಾಯಕ, ಕಾಳಜಿಯುಳ್ಳ ರಾಜಕಾರಣಿ ಎಂದೆನಿಸಿಕೊಳ್ಳುತ್ತಿದ್ದರು   ಮತ್ತು ಬೀದಿಯಲಿ ಅವರು ನಡೆಸುವ ಸಂವಾದಗಳಿಗೂ ಆಗ ಬೆಲೆ ಇರುತ್ತಿತ್ತು. ಅದು ಬಿಟ್ಟು ಯುವಜನರ ಜೊತೆ ಸಂವಾದ, ವಿಧ್ಯಾಥರ್ಿಗಳ ಜೊತೆ ಬೆರೆಯಯುವುದು , ಕ್ಯಾಂಟೀನ್ಗಳಲ್ಲಿ ಕಾಫಿ ತಿಂಡಿ ತಿನ್ನುವುದು, ದಲಿತರ ಮನೆಗಳಲ್ಲಿ ವಾಸ್ತವ್ಯ ಹೂಡುವುದು ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಢೋಂಗಿತನದ ಪ್ರದರ್ಶನವಲ್ಲದೆ ಮತ್ತೇನು?                    ವಯಕ್ತಿಕ ಘಟನೆಯೊಂದನ್ನು ಇಲ್ಲಿ ಹೇಳಲೇಬೇಕು . ಅದು 1986 ರ ಒಂದು ದಿನ. ದಿವಂಗತ ರಾಜೀವ್ ಗಾಂಧಿಯವರು ಪ್ರಧಾನಿಯಾಗಿದ್ದ ಕಾಲವದು.  ಆ ಸಂಧರ್ಭ ರಾಜೀವ್ಗಾಂಧಿಯವರು ನಮ್ಮೂರಿಗೆ ಭೇಟಿ ನೀಡಿದ್ದರು. ಹೆಲಿಕಾಪ್ಟರ್ ಮೂಲಕ ಬಂದ  ಅವರು ಸ್ಟೇಜ್ ಮೇಲೆ ಏರುತ್ತಿದ್ದಂತೆ ಅವರನ್ನು ನೋಡಲು ಕಷ್ಟಪಡುತ್ತಿದ್ದ ನನ್ನನ್ನು ನಮ್ಮಪ್ಪ ಹೆಗಲ ಮೇಲೆ ಎತ್ತಿಕೊಂಡು ತೋರಿಸಿ  ಎಷ್ಟು ಕೆಂಪಗವರೆ ಅಲ್ವಾ ಎಂದಿದ್ದರು. ನಾನು ಹ್ಞೂ, ಅಪ್ಪೈ ಎಂದಿದ್ದೆ. ಅದಾದ ನಂತರ ನನಗೆ ಬುದ್ಧಿ ಬಂದ ಕಾಲದಿಂದಲೂ ರಾಜೀವ್ ಶೋಷಿತರ ಪರ ಕೆಲಸ ಮಾಡಿದ ಒಂದೂ ಸುದ್ದಿಯನ್ನೂ ಓದಲಿಲ್ಲ. ಆದರೆ ಅದೇ ಶತಮಾನಗಳಿಂದ ಗಿಡಗಂಟಿಗಳು ಬೆಳೆದಿದ್ದ ಅಯೋಧ್ಯೆಯ ಬಾಬ್ರಿ ಮಸೀದಿಯ ಬೀಗವನ್ನು ರಾಜೀವ್ ತೆಗೆಸಿದ ಸುದ್ಧಿಯನ್ನು ಓದಿದೆ! ಮುಂದೆ ಅದರಿಂದಾಶದ ಅನಾಹುತ ಇಡೀ ಜಗತ್ತಿಗೇ ತಿಳಿದಿದೆ.        ರಾಹುಲ್ ಕೂಡ ತಮ್ಮ ತಂದೆಯ ಹಾಶಗೆ ಕೆಂಪಗೆ ಇದ್ದಾರೆ. ಮುಂದೆ ಅವರೂ ಕೂಡ ಪ್ರಧಾನಿಯಾಗಲಿದ್ದಾರೆ. ಆದರೆ ಆಶಯವೆಂದರೆ ರಾಹುಲ್ ಗಾಂಧಿಯವರು ತಮ್ಮ ತಂದೆಯವರು ಮಾಡಿದ ತಪ್ಪುಗಳನ್ನು ಪುನರಾವತರ್ಿಸುವುದು ಬೇಡ. ಅದಕ್ಕಾಗಿ ರಾಹುಲ್ಜೀಯವರು ಇಂತಹ ಸಂವಾದಗಳನ್ನು ನಡೆಸುವುದು ಬಿಟ್ಟು ತಮ್ಮ ತಂದೆಯ , ತಮ್ಮ ಅಜ್ಜಿ ಇಂದಿರಾಗಾಂಧಿಯವರ, ಮುತ್ತಾತ ಪಂಡಿತ್ ನೆಹರೂರವರ ಆಡಳಿತಾವಧಿಯನ್ನು  ಕೂಲಂಕುಷವಾಗಿ ಅಧ್ಯಯನಮಾಡಲಿ. ತಪ್ಪುಒಪ್ಪುಗಳನ್ನು ಪರಿಶೀಲಿಸಲಿ .ಅದಕ್ಕೂ ಮೊದಲು ಸಂಸತ್ತಿನಲ್ಲಿ ಬಡವರ ಪರ, ಶೋಷಿತರ ಪರ ದನಿ ಎತ್ತಲಿ.                               ರಘೋತ್ತಮ ಹೊ. ಬ                 ಚಾನಮರಾಜನಗರ –               ಮೊ; 9481189116

ಶ್ರೀಮಂತರಿಗೆ, ಅದು ಹೆಚ್ಚು ಓದಿಕೊಂಡ ಬಡತನದ ಗಂಧವೇ ಇಲ್ಲದ, ಶೋಷಿತರ ಕಷ್ಟಗಳ ಅರಿವೆ ಇಲ್ಲದ  ಶ್ರೀಮಂತರಿಗೆ ಒಂದು ಖಯಾಲಿ ಇದೆ. ಅದೇನಪ್ಪಾ ಅಂದರೆ ಬಡವರ ಮನೆಗಳಿಗೆ ಭೇಟಿ ನೀಡುವುದು, ಅವರ ಬಡತನವನ್ನು ಹೀನ ಪರಿಸ್ಥಿತಿಯನ್ನು ಕಂಡು ಮರುಗುವುದು , ಅಚ್ಚರಿವ್ಯಕ್ತಪಡಿಸುವುದು, ಸಾಧ್ಯ ವಾದರೆ ಅವರಿಗೆ ನೂರಿನ್ನೂರು ರೂಪಾಯಿ ಕೊಟ್ಟು ತಾವೇ ತರುವ ಕ್ಯಾಮೆರಾಗಳಿಗೆ ಅವರ ಜೊತೆ ಫೋಸು ಕೊಡುವುದು!                                     ಅಂದಹಾಗೆ ಇವೆಲ್ಲವನ್ನು ಅವರು ಸಾಮಾಜಿಕ ಕಳಕಳಿಯ ದೃಷ್ಟಿಯಿಂದ , ಸಹಾಯ ಮಾಡಬೇಕೆಂಬ ಹಂಬಲದಿಂದ ಮಾಡುತ್ತಾರೆಂದರೆ ಅದು ತಮಾಷೆಯಾಗುತ್ತದೆ! ಅದು ಮಾಡುವುದು ಕೂಡ ಅವರ ವಯಕ್ತಿಕ ಲಾಭಕ್ಕೆ. ಆ ಬಡವರ ಬಡತನದ ಬಗ್ಗೆ  ಅವರ ಸ್ಥಿತಿಗತಿಯ ಬಗ್ಗೆ ಲೇಖನ ಬರೆಯುವುದು,  ಕತೆ ಕಾದಂಬರಿಗಳನ್ನು ಬರೆಯುವುದು , ಅದನ್ನು ರಾಷ್ಟ್ರೀಯ ಅಂತರಾಷ್ಟ್ರೀಯ ಪತ್ರಿಕೆಗಳಲ್ಲಿ ಪ್ರಕಟಿಸುವುದು , ಡಾಕ್ಯೂಮೆಂಟರಿಗಳನ್ನು ತೆಗೆಯುವುದು, ಪ್ರಗತಿಪರ ಚಿಂತಕ ಎನಿಸಿಕೊಳ್ಳುವುದು, ಪ್ರಶಸ್ತಿಗಳನ್ನು ಬಾಚಿಕೊಳ್ಳುವುದು. ಸಾಧ್ಯವಾದರೆ ಆ ಬಡವರ ಸಮಸ್ಯೇಗಳ ಬಗ್ಗೆ ಸಂಶೋಧನೆಗಳನ್ನು  ಮಾಡಿ ಪಿ,ಹೆಚ್.ಡಿ. ಪದವಿ ಪಡೆಯುವುದು. ಒಟ್ಟಿನಲಿ ಬಡವರ ಬಡತನ ,ಶೋಷಿತರ ಕಷ್ಟಸುಖ ಇವರಿಗೆ ಬಂಡವಾಳ!ಪ್ರಸ್ತುತ ಕಾಂಗ್ರೆಸ್ನ ಯುವರಾಜ ರಾಹುಲ್ ಗಾಂಧಿಯವರು ದೇಶದಾಂದ್ಯಂತ ನಡೆಸುತ್ತಿರುವ ಸಂವಾದ , ವಾಸ್ತವ್ಯ ಇತ್ಯಾದಿ ಕಾರ್ಯಕ್ರಮಗಳು ಕೂಡ ಇಂತಹದ್ದೆ ಮಾದರಿಯವು! ಇದರಿಂದ ರಾಹುಲ್ ಗಾಂಧಿಯವರಿಗೆ ಆಗುವ ಲಾಭ ? ಉತ್ತರ  ಸೂರ್ಯಸ್ಪಷ್ಟ. ರಾಜಕೀಯದ್ದು!ಸಣ್ಣ ಪುಟ್ಟ ಶ್ರೀಮಂತರು ಒಂದೆರಡು ಪ್ರಶಸ್ತಿ ಪದವಿ, ಖ್ಯಾತಿಗಳಿಗೆ ತೃಪ್ತಿ ಪಟ್ಟರೆ  ರಾಹುಲ್ ಏನಿದ್ದರು ದೊಡ್ಡ ಮಿಕಕ್ಕೇ ಬಲೆ ಬೀಸುತ್ತಿದ್ದಾರೆ. ಆ ಮಿಕ ಈ ದೇಶದ ಪ್ರಧಾನಿ ಪಟ್ಟ. (ಅದು ಅವರಿಗೆ ಅನಾಯಾಸವಾಗಿ ದೊರಕುತ್ತದೆ ಎಬುಂದು ಬೇರೆ ಮಾತು ,ಆದರೂ ಒಂದಷ್ಟು ಇಮೇಜ್ ಬೇಕಲ್ಲ!)ಹಾಗಿದ್ದರೆ ಇಂತಹ ಸ್ವಾರ್ಥ ಉದ್ದೇಶಿತ ಸಂವಾದಗಳಿಂದ  ರಾಹುಲ್ರವರು ಸಾಧಿಸುವುದು, ಈ ದೇಶದ ಜನತೆಗೆ ದೊರಕುವ ಲಾಭ? ಅಕ್ಷರಶಃ ಸೊನ್ನೆ! ಏಕೆಂದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿಜವಾದ ಚಚರ್ೆ, ಸಂವಾದ ನಡೆಯಬೇಕಾದ್ದು ಪಾಲರ್ಿಮೆಂಟ್ನಲ್ಲಿ. ಬೀದಿಯಲ್ಲಲ್ಲ.  ಪಾಲರ್ಿಮೆಂಟ್ನಲ್ಲಿ ನಡೆದ ಆ ಸಂವಾದಗಳು ಕಾನೂನುಗಳಾಗುತ್ತವೆ . ಅಂತಹ ಕಾನೂನುಗಳು ಈ ದೇಶದ ಬಡವರಿಗೆ ಸಾಮಾಜಿಕ ನ್ಯಾಯ, ಸಮಾನತೆಯನ್ನು ದೊರಕಿಸಿಕೊಡುತ್ತವೆ . ಬೀದಿ ಚಚರ್ೆಗಳು , ಸಂವಾದಗಳು ಬತರೀ ಸುದ್ದಿಗಳಾಗಿಯೇ ಉಳಿಯುತ್ತವೆ. ಆ ಸುದ್ದಿಗಳಿಂದ ಸುದ್ದಿಮಾಡಿದವ ನಾಯಕನಾಗಿಯೋ, ಮತ್ತೊಂದಾಗಿಯೋ ಹೊರಹೊಮ್ಮುತ್ತಾನೆ. ಆದರೆ ಆ ಸುದ್ದಿಯ ಮೂಲವಾಗಿರುವ ಬಡವ, ಮತ್ತಾತನ ಸಮಸ್ಯೆಗಳು? ಸಮಸ್ಯೆಗಳಾಗಿಯೇ ಉಳೀಯುತ್ತವೆ! ನಿಜಕ್ಕೂ ರಾಹುಲ್ರ ಈ ತಂತ್ರ ಮೆಚ್ಚಬೇಕಾದ್ದೆ.ಉದಾಹರಣೆಗೆ ಕಳೆದ ಸಾರ್ವತ್ರಿಕ ಚುನಾವಣೆಯ ಸಂಧರ್ಭದಲ್ಲಿ ಚಾಮರಾಜನಗರದ ಬಿಳಿಗಿರಿರಂಗನ ಬೆಟ್ಟಕ್ಕೆ ಗಿರಿಜನರ ಜೊತೆ ಸಂವಾದಕ್ಕೆ ಬಂದಿದ್ದ ರಾಹುಲ್ ಗಾಂಧಿಯವರು ಮತ್ತೆ ಸಂಸದರಾಗಿ ಆಯ್ಕೆಯಾದರು. ಅವರ ಪಕ್ಷ ಮತ್ತೆ ಅಧಿಕಾರಕ್ಕೆ ಬಂದಿತು. ಸಂವಾದದಲ್ಲಿ ಭಾಗವಹಿಸಿದ್ದ ಗಿರಿಜನರಿಗೇನು ಸಿಕ್ಕಿತು? ಅವರಿನ್ನು ಗಿರಿಜನರಾಗಿಯೇ ಉಳಿದಿದ್ದಾರೆ. ಅವರ ಮುರುಕಲು ಮನೆಗಳು ಹರುಕಲು ಬಟ್ಟೆಗಳು ಹಾಗೆಯೇ ಇವೆ. ಅವರ ಉತ್ಪನ್ನಗಳಿಗೆ ಮಾರುಕಟ್ಟೆಯೂ ಇಲ್ಲ , ಸಾಲದ್ದಕ್ಕೆ ಅರಣ್ಯಕ್ಕೆ ಸಂಬಂಧಿಸಿದ ಕಾನೂನುಗಳು ಅವರನ್ನು ಕಿತ್ತು ತಿನ್ನುತ್ತಿವೆ ಅಧಿಕಾರಿಗಳ ರೂಪದಲ್ಲಿ! ಈ ಭಾರತಕ್ಕೆ ರಾಹುಲ್ ದೆಹಲಿಯಿಂದ ಬಿಳಿಗಿರಿರಂಗನ ಬೆಟ್ಟಕ್ಕೆ ಯಾಕೆ ಬರಬೇಕಿತ್ತು? ದೂರದ ದೆಹಲಿಯಲ್ಲೇ ಕುಳಿತು ಗಿರಿಜನರ ಪರ ಅಂದರೆ ಅವರ ಅರಣ್ಯ ಉತ್ಪನ್ನಗಳಿಗೆ ಅಂತರಾಷ್ಟೀಯ ಮಾರುಕಟ್ಟೆ ನಿಮರ್ಿಸುವಂತಹ , ಅರಣ್ಯಗಳಿಂದ ಅವರನ್ನು ಒಕ್ಕಲೆಬ್ಬಿಸದಿರುವಂತಹ ಕಾನೂನುಗಳನ್ನು ಮಾಡ ಬಹುದಿತ್ತಲ್ಲ! ರಾಹುಲ್ಜೀಯವರಿಗೆ ಇದು ಗೊತ್ತಿರಲಿಲ್ಲವೆ? ಗೊತ್ತು. ಆದರೆ ಅಂತಹ ಕಾನೂನು ಕ್ರಮಗಳು  ಓಟ್ ಬ್ಯಾಂಕ್ ಸೃಷ್ಟಿಸುವ ಸಾಧ್ಯತೆ ಕಡಿಮೆ ಇರುತ್ತದಲ್ಲ! ಸಾಲದಕ್ಕೆ ಅದು ಕಠಿಣತಮ ಪ್ರಕ್ರಿಯೆ ಬೇರೆ. ಅದೇ ಬೀದಿಯಲಿ ನಿಂತು( ಇಂತಿಂತಹವರಿಗೆ ಇಂತಿಂತಹದೆ ಪ್ರಶ್ನೆಗಳನ್ನು ಕೇಳಿ ಎಂದು ಪೂರ್ವ ನಿರ್ಧರಿತವಾಗಿ!) ಸಂವಾದ ನಡೆಸುವುದು? ಸುಲಭ. ಜೊತೆಗೆ ಪ್ರಚಾರಾನೂ ಸಿಗುತ್ತೆ! ಓಟ್ ಬ್ಯಾಂಕೂ ಹೆಚ್ಚುತ್ತೆ. ಪ್ರಧಾನಿ ಪಟ್ಟಕ್ಕೆ ಬೇಕಾದ ಅರ್ಹತೆಗಳಂತೂ ಅನಾಯಾಸವಾಗಿ ಒದಗಿ ಬಂದೇಬರುತ್ತೆ!ನಿಜ, ಕಾಂಗ್ರೆಸ್ಸಿನ ಯುವರಾಜನಾಗಿ, ಪ್ರಭಾವಿ ಸಂಸದನಾಗಿ ಇಂದು ರಾಹುಲ್ ಏನನ್ನು ಬೇಕಾದರೂ ಸಾಧಿಸಬಹುದು. ರಾಷ್ಟ್ರದ ಗತಿಯನ್ನೇ ಬದಲಿಸ ಬಹುದು . ಅಂತಹದ್ಯಾವುದ್ದಕ್ಕೂ ಇವರಿಗೆ ಮನಸ್ಸಿದ್ದಂತಿಲ್ಲ. ಏಕೆಂದರೆ ಈ ದೇಶದ ಗತಿಯನ್ನು ಬದಲಿಸುವುದೆಂದರೆ, ಈ ದೇಶದ ಬಡವರ ಸ್ಥಿತಿಗತಿ ಬದಲಿಸುವುದೆಂದರ್ಥ. ಶೋಷಿತರ ಸಮಸ್ಯೆಗಳನ್ನು ನಿವಾರಿಸುವುದೆಂದರ್ಥ.ರಾಹುಲ್ ಗಾಂಧಿಯವರಿಗೆ ಇದ್ಯಾವುದು ಬೇಕಿಲ್ಲ ಎಂದೆನಿಸುತ್ತದೆ. ಅದಕ್ಕೆ ಅವರು ಬೀದಿ ಸಂವಾದಗಳಿಗೆ ಜೋತು ಬಿದ್ದಿದ್ದಾರೆ, ಪಾಲರ್ಿಮೆಂಟಿನಲ್ಲಿ ನಡೆಸಬೇಕಾದ ಸಂವಾದಗಳನ್ನು ಬಿಟ್ಟು.ನಿಜವಾಗಿ ಹೇಳಬೇಕೆಂದರೆ ಸಾಮಾಜಿಕ ನ್ಯಾಯದ ದೃಷ್ಟಿಯಲ್ಲಿ ಗಂಭೀರ ಸಮಸ್ಯೆಗಳು ಇಂದು ದೇಶವನ್ನು ಕಿತ್ತು ತಿನ್ನುತ್ತಿವೆ . ಜಾತಿ ಆಧರಿತ ಜನಗಣತಿಯ ಬಗ್ಗೆ ಕೇಂದ್ರ ಸಕರ್ಾರ ಮೀನಾಮೇಷ ಎಣಿಸುತ್ತಿದೆ,. ಅಲ್ಪಸಂಖ್ಯಾತರಿಗೆ ಮೀಸಲಾತಿ ಒದಗಿಸಿಕೊಡುವಂತಹ  ರಂಗನಾಥ ಮಿಶ್ರ  ವರದಿ ಹಾಗೆ ಕೊಳೆಯುತ್ತಿದೆ. ದಿಲ್ಲಿಯ ಅವರ ಪಕ್ಷದ ನೇತೃತ್ವದ ಸಕರ್ಾರ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ದಲಿತರ ಹಣ ಬಳಸಿಕೊಂಡ ಆರೋಪ ಬೇರೆ ಕೇಳಿ ಬರುತ್ತಿದೆ. ನೈಜವಾದ ಕಳಕಳಿಯಿದ್ದರೆ ರಾಹುಲ್ ಗಾಂಧಿಯವರು ಈ ಸಮಸ್ಯೆಗಳ ಬಗ್ಗೆ ಸಂಸತ್ತಿನಲ್ಲಿ ಗಟ್ಟಿಯಾಗಿ ದನಿ ಎತ್ತ ಬೇಕಿತ್ತು , ಬಡವರ ಪರ ಶೋಷಿತರ ಪರ ಜಾರಿಯಾಗಬೇಕಾದ ಯೋಜನೆಗಳ ಬಗ್ಗೆ, ವೀರಾವೇಶದಿಂದ ಹೋರಾಡಬೇಕಿತ್ತು. ಆಗ ಇವರು ನಿಜವಾದ ಜನಪರ ನಾಯಕ, ಕಾಳಜಿಯುಳ್ಳ ರಾಜಕಾರಣಿ ಎಂದೆನಿಸಿಕೊಳ್ಳುತ್ತಿದ್ದರು   ಮತ್ತು ಬೀದಿಯಲಿ ಅವರು ನಡೆಸುವ ಸಂವಾದಗಳಿಗೂ ಆಗ ಬೆಲೆ ಇರುತ್ತಿತ್ತು. ಅದು ಬಿಟ್ಟು ಯುವಜನರ ಜೊತೆ ಸಂವಾದ, ವಿಧ್ಯಾಥರ್ಿಗಳ ಜೊತೆ ಬೆರೆಯಯುವುದು , ಕ್ಯಾಂಟೀನ್ಗಳಲ್ಲಿ ಕಾಫಿ ತಿಂಡಿ ತಿನ್ನುವುದು, ದಲಿತರ ಮನೆಗಳಲ್ಲಿ ವಾಸ್ತವ್ಯ ಹೂಡುವುದು ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಢೋಂಗಿತನದ ಪ್ರದರ್ಶನವಲ್ಲದೆ ಮತ್ತೇನು?ವಯಕ್ತಿಕ ಘಟನೆಯೊಂದನ್ನು ಇಲ್ಲಿ ಹೇಳಲೇಬೇಕು . ಅದು 1986 ರ ಒಂದು ದಿನ. ದಿವಂಗತ ರಾಜೀವ್ ಗಾಂಧಿಯವರು ಪ್ರಧಾನಿಯಾಗಿದ್ದ ಕಾಲವದು.  ಆ ಸಂಧರ್ಭ ರಾಜೀವ್ಗಾಂಧಿಯವರು ನಮ್ಮೂರಿಗೆ ಭೇಟಿ ನೀಡಿದ್ದರು. ಹೆಲಿಕಾಪ್ಟರ್ ಮೂಲಕ ಬಂದ  ಅವರು ಸ್ಟೇಜ್ ಮೇಲೆ ಏರುತ್ತಿದ್ದಂತೆ ಅವರನ್ನು ನೋಡಲು ಕಷ್ಟಪಡುತ್ತಿದ್ದ ನನ್ನನ್ನು ನಮ್ಮಪ್ಪ ಹೆಗಲ ಮೇಲೆ ಎತ್ತಿಕೊಂಡು ತೋರಿಸಿ  ಎಷ್ಟು ಕೆಂಪಗವರೆ ಅಲ್ವಾ ಎಂದಿದ್ದರು. ನಾನು ಹ್ಞೂ, ಅಪ್ಪೈ ಎಂದಿದ್ದೆ. ಅದಾದ ನಂತರ ನನಗೆ ಬುದ್ಧಿ ಬಂದ ಕಾಲದಿಂದಲೂ ರಾಜೀವ್ ಶೋಷಿತರ ಪರ ಕೆಲಸ ಮಾಡಿದ ಒಂದೂ ಸುದ್ದಿಯನ್ನೂ ಓದಲಿಲ್ಲ. ಆದರೆ ಅದೇ ಶತಮಾನಗಳಿಂದ ಗಿಡಗಂಟಿಗಳು ಬೆಳೆದಿದ್ದ ಅಯೋಧ್ಯೆಯ ಬಾಬ್ರಿ ಮಸೀದಿಯ ಬೀಗವನ್ನು ರಾಜೀವ್ ತೆಗೆಸಿದ ಸುದ್ಧಿಯನ್ನು ಓದಿದೆ! ಮುಂದೆ ಅದರಿಂದಾಶದ ಅನಾಹುತ ಇಡೀ ಜಗತ್ತಿಗೇ ತಿಳಿದಿದೆ.ರಾಹುಲ್ ಕೂಡ ತಮ್ಮ ತಂದೆಯ ಹಾಶಗೆ ಕೆಂಪಗೆ ಇದ್ದಾರೆ. ಮುಂದೆ ಅವರೂ ಕೂಡ ಪ್ರಧಾನಿಯಾಗಲಿದ್ದಾರೆ. ಆದರೆ ಆಶಯವೆಂದರೆ ರಾಹುಲ್ ಗಾಂಧಿಯವರು ತಮ್ಮ ತಂದೆಯವರು ಮಾಡಿದ ತಪ್ಪುಗಳನ್ನು ಪುನರಾವತರ್ಿಸುವುದು ಬೇಡ. ಅದಕ್ಕಾಗಿ ರಾಹುಲ್ಜೀಯವರು ಇಂತಹ ಸಂವಾದಗಳನ್ನು ನಡೆಸುವುದು ಬಿಟ್ಟು ತಮ್ಮ ತಂದೆಯ , ತಮ್ಮ ಅಜ್ಜಿ ಇಂದಿರಾಗಾಂಧಿಯವರ, ಮುತ್ತಾತ ಪಂಡಿತ್ ನೆಹರೂರವರ ಆಡಳಿತಾವಧಿಯನ್ನು  ಕೂಲಂಕುಷವಾಗಿ ಅಧ್ಯಯನಮಾಡಲಿ. ತಪ್ಪುಒಪ್ಪುಗಳನ್ನು ಪರಿಶೀಲಿಸಲಿ .ಅದಕ್ಕೂ ಮೊದಲು ಸಂಸತ್ತಿನಲ್ಲಿ ಬಡವರ ಪರ, ಶೋಷಿತರ ಪರ ದನಿ ಎತ್ತಲಿ.ರಘೋತ್ತಮ ಹೊ. ಬಚಾನಮರಾಜನಗರ -ಮೊ; 9481189116

ರಾಹುಲ್ ಎಂಬ ಕೃತಕ ಮಿಂಚು


ರಾಹುಲ್ ಮಿಂಚು ಮತ್ತೊಮ್ಮೆ ರಾಜ್ಯದಲ್ಲಿ ಮಿಂಚಿದೆ. ಕಾಂಗ್ರೆಸ್ನ ಯುವರಾಜ ಮತ್ತು ಭಾವಿ ಪ್ರಧಾನಿ ಎಂದೇ ಬಿಂಬಿತರಾಗುತ್ತಿರುವ  ರಾಹುಲ್ ಗಾಂಧಿಯವರು ಸಂವಾದ ಎಂಬ ತಮ್ಮ ನೆಚ್ಚಿನ ಕಾರ್ಯಕ್ರಮದೊಂದಿಗೆ ಸಾಂಸ್ಕೃತಿಕ ನಗರಿಗೆ ಭೇಟಿ ನೀಡಿದ್ದು ನಿಜಕ್ಕೂ  ಮೆಚ್ಚುವಂತದ್ದು. ಪ್ರಶ್ನೆಯೇನೆಂದರೆ ಮೈಸೂರಿನಲ್ಲಿ ಅವರು ನಡೆಸಿಕೊಟ್ಟ ಸಂವಾದದಲ್ಲಿ ಈ ಕೆಳಗಿನ ಪ್ರಚಲಿತ ಪ್ರಶ್ನೆಗಳಿಗೆ ಉತ್ತರಿಸಿದ್ದರೆ ಚೆನ್ನ  ಇರುತ್ತಿತ್ತು ಎಂಬುದು.
1.1984 ರ ಭೂಪಾಲ್ ಅನಿಲ ದುರಂತದ ಪ್ರಮುಖ ಆರೋಪಿ ಆಂಡರ್ಸನ್ ದೇಶದಿಂದ ಪರಾರಿಯಾಗಲು ಸಹಾಯ ಮಾಡಿದ್ದು ಯಾರು?
2.ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ದೆಹಲಿಯ ಅವರ ಪಕ್ಷದ ಸಕರ್ಾರ ದಲಿತರ ಕಲ್ಯಾಣಕ್ಕೆ ಮೀಸಲಿಟ್ಟಿದ್ದ ಹಣ ಬಳಸಿಕೊಂಡ ಆರೋಪ ಕೇಳಿ ಬಂದಿದೆ. ಈ ಬಗ್ಗೆ ರಾಹುಲ್ಜೀಯವರ ಅಭಿಪ್ರಾಯವೇನು?
3.ಮಾಧ್ಯಮಗಳು ರಾಹುಲ್ಗಾಂಧಿಯವರನ್ನು ಮುಂದಿನ ಪ್ರಧಾನಿಯೆಂದು ಬಿಂಬಿಸುತ್ತಿವೆ . ಯಾಕೆ ಅವರ ಕುಟುಂಬದ ಮೂವರು ಪ್ರಧಾನಿಗಳಗಿದ್ದು ಸಾಕಾಗಲಿಲ್ಲವೇ? 120 ಕೋಟಿಗೂ ಮಿಕ್ಕಿ ಜನಸಂಖ್ಯೆ ಇರುವ ಒಂದು ಬೃಹತ್ ದೇಶವನ್ನು ಒಂದೇ ಕುಟುಂಬಕ್ಕೆ ಜಹಗೀರು ಬರೆದುಕೊಡುವುದು ಎಷ್ಟು ಸರಿ?                                                                                                                                                                 4.  4..ಮಾತೆತ್ತಿದರೆ ರಾಹುಲ್ ಗಾಂಧಿಯವರು ಉತ್ತರ ಪ್ರದೇಶಕ್ಕೆ ಭೇಟಿನೀಡುವುದು, ಆ ರಾಜ್ಯದಲ್ಲಿ ಪದೇ ಪದೇ ಗೊಂದಲವನ್ನುಂಟುಮಾಡುವುದು. ಯಾಕೆ ದಲಿತ ಮುಖ್ಯಮಂತ್ರಿ (ಮಾಯಾವತಿ) ಯೊಬ್ಬರು ನೆಮ್ಮದಿಯಿಂದ ರಾಜ್ಯವಾಳುವುದು ರಾಹುಲ್ಗಾಂಧಿಯವರಿಗೆ ಇಷ್ಟವಿಲ್ಲವೇ?
5. ಜಾತಿ ಆಧಾರಿತ ಜನಗಣತಿ ಮತ್ತು ಅಲ್ಪಸಂಖ್ಯಾತರಿಗೆ ಮೀಸಲಾತಿ ಒದಗಿಸಿಕೊಡುವ  ರಂಗನಾಥ ಮಿಶ್ರ ವರದಿ ಜಾರಿ ಬಗ್ಗೆ ಮೀನಾಮೇಷ ಎಣಿಸುತ್ತಿರುವುದೇಕೆ?
ಈ ಎಲ್ಲಾ ಪ್ರಶ್ನೆಗಳಿಗೆ, ಅನುಮಾನಗಳಿಗೆ ರಾಹುಲ್ಜೀಯವರು ಉತ್ತರಿಸಿದ್ದರೆ ಸೂಕ್ತವಿರುತ್ತಿತ್ತು.
ಅಂದಹಾಗೆ ಉತ್ತರಪ್ರದೇಶ ರಾಜ್ಯದಲ್ಲಿ ಪದೇ ಪದೇ ದಲಿತರ  ಮನೆಗಳಲ್ಲಿ  ವಾಸ್ತವ್ಯ ಹೂಡುವ  ರಾಹುಲ್ಜೀಯವರು  ಮೈಸೂರಿಗೆ ಬಂದಾಗ ದಲಿತರ ಮನೆಯಲ್ಲಿ ಏಕೆ ವಾಸ್ತವ್ಯ ಹೂಡಲಿಲ್ಲ? (ಹಾಗೇನಾದರು ಹೂಡಿದ್ದರೆ ಮೈಸೂರಿನ ಅಶೋಕಪುರಂ, ಕೈಲಾಸಪುರಂ ಮತ್ತು ಗಾಂಧಿನಗರಗಳಿಗೆ ಅಂತಹ ಅದೃಷ್ಟ ದೊರಕುತ್ತಿತ್ತು!) ಯಾಕೆ ಕನರ್ಾಟಕದ ದಲಿತರ ಮತಗಳು ರಾಹುಲ್ಗಾಂಧಿಯವರಿಗೆ ಬೇಡವೇ? ಅಥವಾ ಈಗಾಗಲೇ ರಾಜ್ಯದ ದಲಿತರು  ಕಾಂಗ್ರೆಸ್ ತೆಕ್ಕೆಯಲ್ಲಿದ್ದಾರೆ ಆದ್ದರಿಂದ ಕನರ್ಾಟಕದಲ್ಲಿ ಅವರ ಮನೆಗಳಲ್ಲಿ ವಾಸ್ತವ್ಯ ಹೂಡುವ ಅಗತ್ಯವಿಲ್ಲ ಎಂದು ರಾಹುಲ್ಜೀಯವರು ಭಾವಿಸಿದರೆ?
ಕಡೆಯದಾಗಿ ಹೇಳುವುದದರೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನೈಜ ಸಂವಾದ ನೆಡೆಯಬೇಕಾದ್ದು ಪಾಲರ್ಿಮೆಂಟ್ ನಲ್ಲಿ. ಬೀದಿಯಲ್ಲಲ್ಲ. ಆದರೂ  ಸಾರ್ವಜನಿಕವಾಗಿ ತಮ್ಮ ಇಮೇಜ್ ಬೆಳೆಸಿಕೊಳ್ಳಲು ರಾಹುಲ್ಗಾಂಧಿಯವರು ಹೀಗೆ ಬಂದು ಸುಮ್ಮನೆ ಮುಖ ತೋರಿಸಿ   ಪೂರ್ವ ನಿರ್ಧರಿತವಾಗಿ ಇಂತಿಂತಹವರಿಗೆ ಇಂತಿಂತಹದೆ ಪ್ರಶ್ನೆಗಳನ್ನು ಕೇಳಿ ಎಂದು ಸಂವಾದ ನಡೆಸಿ ಹಾಗೆ ಹೋಗುವುದು,  ಕೃತಕ ಮಳೆಯಂತೆ ಕೃತಕ ಮಿಂಚಾಗುತ್ತದೆ ಅಷ್ಟೆ. ನಿಸರ್ಗದತ್ತ ಸಹಜ ಮಿಂಚಾಗುವುದಿಲ್ಲ!
ರಘೋತ್ತಮ ಹೊ. ಬ
ಚಾಮರಜನಗರ- 571313
ಮೊ; 9481189116

ಖೈರ್ಲಂಜಿ: ದಲಿತರಿಗೆ ಮರೀಚಿಕೆಯಾಗುತ್ತಿರುವ ನ್ಯಾಯ


ಅದು ಸೆಪ್ಟೆಂಬರ್ 29 2006. ಆ ದಿನ ಸಂಜೆ ಐದು ಗಂಟೆಯ ಸಮಯ . ಮಹಾರಾಷ್ಟ್ರದ ಬಂಡಾರ ಜಿಲ್ಲೆಯ ಮೊಹಾಲಿ ತಾಲ್ಲೂಕಿನ ಖೈಲರ್ಾಂಜಿ ಗ್ರಾಮದ ಏಕೈಕ  ದಲಿತ ಕುಟುಂಬ ತನ್ನ ಪಾಡಿಗೆ ತಾನು  ನಿತ್ಯದ ಕಾಯಕದಲ್ಲಿ ತೊಡಗಿತ್ತು. ಶ್ರೀ ಭಯ್ಯಾಲಾಲ್ ಭೂತ್ ಮಾಂಗೆ, ಅವರ ಶ್ರೀಮತಿ ಸುರೆಖ ಭೂತ್ ಮಾಂಗೆ  ಮಕ್ಕಳಾದ ಪ್ರಿಯಾಂಕ, ರೋಶನ್, ಸುಧೀರ್  ಆ ಕುಟುಂಬದ ಸದಸ್ಯರು.  ಭಯ್ಯಾಲಾಲ್ ಭೂತ್ ಮಾಂಗೆ ಹೊರಗೆ ಹೋಗಿದ್ದ ಆ ಸಮಯದಲದ್ಲಿ ಶ್ರೀಮತಿ ಸುರೇಖ ಅಡುಗೆ ಮಾಡುತ್ತಿದ್ದರು. ಮೂವರು ಮಕ್ಕಳಾದ ಪ್ರಿಯಾಂಕ, ರೋಹನ್, ಸುಧೀರ್ ಓದುತ್ತಾ ಕುಳಿತ್ತಿದ್ದರು. ಬಹುಶಃ ಅವರುಗಳಿಗೆ ಗೊತ್ತಿರಲಿಲ್ಲ ,ತಾವು ಓದುತ್ತಿರುವುದು ತಮ್ಮ ಜೀವನದ ಕಡೆಯ  ಅಧ್ಯಾಯವನ್ನು ಎಂದು! ಏಕೆಂದರೆ  ಆ ಸಮಯದಲ್ಲಿ ಸುಮಾರು 50 ರಿಂದ 60 ರಷ್ಟಿದ್ದ ಕ್ರೂರ ಮನಸ್ಸಿನ ಜಾತೀಯ ಹಿಂದುಗಳ ಗುಂಪೊಂದು ಅವರುಗಳ ಮೇಲೆ ಮುಗಿಬಿದ್ದಿತ್ತು ರಣಹದ್ದುಗಳಂತೆ. ಆ ಹದ್ದುಗಳಲ್ಲಿ ಜಾತೀಯತೆಯ ವಿಷಜ್ವಾಲೆ ತುಂಬಿತ್ತು, ದೌರ್ಜನ್ಯದ ಅಟ್ಟಹಾಸ ಕೇಕೆ ಹಾಕುತಿತ್ತು. ಅಂತಹ ಅಟ್ಟಹಾಸದ ಜ್ವಾಲೆಗೆ ಖೈಲರ್ಾಂಜಿಯ ಆ ಬಡ ಕುಟುಂಬ ಧಗಧಗನೆ ಉರಿದು ಹೋಯಿತು.

ಆದರೆ ಅದು ಉರಿದ ಪರಿ? ಬಹುಶಃ ಅದನ್ನು ಹೇಳಿಕೊಳ್ಳಲು ಮನಸ್ಸು ಒಂದರೆಘಳಿಗೆ  ಬೆಚ್ಚಿಬೀಳುತ್ತದೆ. ಬರೆಯಲು ಕೈ ಗಡಗಡ ನಡುಗುತ್ತದೆ. ಭಯದಿಂದಲ್ಲ! ರೋಷದಿಂದ. ಏಕೆಂದರೆ  ಅಲ್ಲಿ ನಡೆದ ದೌರ್ಜನ್ಯ ತನ್ನ ಮಿತಿಯನ್ನು ಮೀರಿತ್ತು. ದಾಳಿ ನಡೆದ ಆ ಪರಿ ಎಂತಹವರನ್ನು ಬೆಚ್ಚಿಬೀಳಿಸುವಂತ್ತಿತ್ತು.

ಸತ್ಯ ಶೋಧನಾಸಮಿತಿಯ ವರದಿಯ ಪ್ರಕಾರವೇ ಹೇಳುವುದಾದರೆ, ಆ ಗುಂಪು ಭೂತ್ಮಾಂಗೆಯ  ಕುಟುಂಬದ ಅ ನಾಲ್ವರನ್ನು ಹೊಡೆಯಲು ಪ್ರಾರಂಭಿಸಿತು. ದರದರನೆ ಎಲ್ಲರನ್ನು ಗುಡಿಸಲಿನಿಂದ ಹೊರಗೆ ಎಳೆದು ತಂದ ಗುಂಪು, ಎಲ್ಲರ ಬಟ್ಟೆಗಳನ್ನು ಕಿತ್ತೆಸೆದು ನಗ್ನರನ್ನಾಗಿಸಿತು.  ಅಲ್ಲದೆ ರೋಷನ್ನನ್ನು ತನ್ನ ಅಕ್ಕ  ಪ್ರಿಯಾಂಕಳ ಜೊತೆ ಬಹಿರಂಗವಾಗಿ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸಿತು! ರೋಷನ್ ಅದಕ್ಕೆ ನಿರಾಕರಿಸಿದ್ದಕ್ಕೆ ಅವನ ಮಮರ್ಾಂಗಕ್ಕೆ ತೀವ್ರವದ ಏಟುಗಳು ಬಿದ್ದವು. ಅಲ್ಲದೆ ಪ್ರಿಯಾಂಕಳನ್ನು ಬೆತ್ತಲೆಗೊಳಿಸಿದ ಗುಂಪು,  ಅವಳ ವಕ್ಷ ಸ್ಥಳಕ್ಕೆ ಮಚ್ಚಿನಿಂದ ಹೊಡೆಯಿತು. ಅವಳ ಮಮರ್ಾಂಗಕ್ಕೆ ಚೂಪಾದ ದೊಣ್ಣೆಯಿಂದ ಚುಚ್ಚಿತು. ಅದಕ್ಕೂ ಮೊದಲು 19 ವರ್ಷದ ಅವಳನ್ನು ಗುಂಪು ಬಹಿರಂಗವಾಗಿಯೇ ಸಾಮೂಹಿಕವಾಗಿ ಅತ್ಯಾಚಾರ ಮಾಡಿತು. ದುರಂತವೆಂದರೆ ಇದನ್ನು ಅಲ್ಲಿ ನೆರೆದಿದ್ದ ,ಮೇಲ್ಜಾತಿ ಹೆಂಗಸರು ಬೆಂಬಲಿಸಿದರು! ಅಲ್ಲದೆ ಗಂಡಸರನ್ನು ಹಾಗೆ ಮಾಡುವಂತೆ ಜೋರಾಗಿ ಕೂಗುತ್ತಾ ಮತ್ತಷ್ಟು ಹಿರಿದುಂಬಿದಸಿದರು! ಅಂತಿಮವಾಗಿ ಶ್ರೀಮತಿ ಸುರೇಖಾರನ್ನು ಅವರ ಮೂವರು ಮಕ್ಕಳ ಎದುರಿನಲ್ಲಿಯೇ ಸಾಮೂಹಿಕವಾಗಿ ಅತ್ಯಾಚಾರ ಮಾಡಿದ ಗುಂಪು ತಾಯಿ, ಮಗಳು ಮತ್ತು ತಮ್ಮಂದಿರಿಬ್ಬರನ್ನು ಒಳಗೊಂಡಂತೆ ನಾಲ್ವರನ್ನು ಗ್ರಾಮದ ತುಂಬೆಲ್ಲಾ ಅಟ್ಟಾಡಿಸಿತು. ದೌರ್ಜನ್ಯದ ಮದ ಏರಿದ ಆ ಗುಂಪು ಆ ನಾಲ್ವರನ್ನು ಕೊಂದು ಹೆಣಗಳನ್ನು ಸಮೀಪದ ನಾಲೆಗೆ ಎಸೆಯಿತು. ತನ್ಮೂಲಕ ದಲಿತರ ಮೇ;ಲಿನ ದೌರ್ಜನ್ಯದ ಮತ್ತೊಂದು ರಕ್ತಸಿಕ್ತ ಪುಟ ಇತಿಹಾಸವನ್ನು ಸೇರಿತು.

ಹಾಗಿದ್ದರೆ ಈ ಭೀಕರ ಹತ್ಯೆ ನಡೆದದ್ದು ಏತಕ್ಕೆ? ಪ್ರಕರಣವೊಂದರಲ್ಲಿ ಸವಣರ್ೀಯ ವ್ಯಕ್ತಿಯೊಬ್ಬನ ವಿರುದ್ಧ ಭೂತ್ಮಾಂಗೆಯ ಕುಟುಂಬ ಸಾಕ್ಷಿ ಹೇಳಿದ್ದಕ್ಕೆ ನಡೆದ ಸೇಡಿನ ಹತ್ಯೆ ಇದು ಎಂದು ಪೋಲೀಸ್ ಮತ್ತು ಕೋಟರ್ು ಹೇಳುತ್ತವೆಯಾದರೂ ಇದರ ಹಿಂದೆ ಒಂದು ಭಯಾನಕ ಪಿತೂರಿ ಇರುವುದನ್ನು ಅವು ಗಮನಿಸಲು ಹೋಗಿಲ್ಲ . ಮಂಡಲ್ ವರದಿಯ ವಿರುದ್ಧ “ಕಮಂಡಲ ಚಳುವಳಿ”ಯನ್ನು  ಸಂಘಟಿಸಿ ಮಂಡಲ್ ವರದಿಯನ್ನು ದಿಕ್ಕು ತಪ್ಪಿಸಿದ್ದಂತದ್ದೆ ಮಾದರಿಯ ಪಿತೂರಿ ಇದು. ನಿಜ, ಮಂಡಲ್ ವರದಿಯ ವಿರುದ್ಧ ನಡೆದ  ಆ ಪಿತೂರಿಯ ಹಿಂದೆ ಇದ್ದದ್ದು ಸಂಘ ಪರಿವಾರ. ಖೈಲರ್ಾಂಜಿ ಹತ್ಯೆಯ  ಹಿಂದೆ ಇದ್ದದ್ದು ಕೂಡ ಅದೇ ಸಂಘ ಪರಿವಾರದ ಪಿತೂರಿ ಎನ್ನುತ್ತವೆ ಬಲ್ಲಮೂಲಗಳು! ಹಾಗಿದ್ದರೆ ಆ ಪಿತೂರಿಯಾದರೂ ಎಂತಹದ್ದು?

ಅದು ಘಟನೆ ನಡೆದ ಆ ವರ್ಷಕ್ಕೆ ಸಂಬಂದಿಸಿದ್ದು. 2006 ಬಾಬಾಸಾಹೇಬ್ ಅಂಬೇಡ್ಕರ್ರವರು ತಮ್ಮ ಲಕ್ಷ್ಷಾಂತರ ಅನುಯಾಯಿಗಳೊಂದಿಗೆ ನಾಗಪುರದ ದೀಕ್ಷಾ ಭೂಮಿಯಲ್ಲಿ 1956 ಅಕ್ಟೋಬರ್ 14 ರಂದು   ಬೌದ್ಧ ಧರ್ಮ ಸ್ವೀಕರಿಸಿದ ಘಟನೆಯ ಐವತ್ತನೆಯ ವರ್ಷ.  ಅಂಬೇಡ್ಕರರು ಬೌದ್ದಧರ್ಮ ಸ್ವೀಕರಿಸಿದ  ಸಂಭ್ರಮದ ಆ ಸುವರ್ಣ ಮಹೋತ್ಸವವನ್ನಾಚರಿಸಲು  ಆ ವರ್ಷ ಸೆಪ್ಟೆಂಬರ್ ಅಕ್ಟೋಬರ್ನ ಆ ಸಮಯದಲ್ಲಿ ದೆಶಾದ್ಯಂತ ಸಂಭ್ರಮದ ಸಿದ್ಧತೆ ನಡೆದಿತ್ತು.  ಸುವರ್ಣ ಮಹೋತ್ಸವದ ಈ ಸಂಧರ್ಬದಲ್ಲಿ ಮತ್ತೆ ಹತ್ತು ಲಕ್ಷ ಮಂದಿ ನಾಗಪುರದ ದೀಕ್ಷಾಭೂಮಿಯಲ್ಲಿ ಬೌದ್ಧಧರ್ಮ ಸ್ವೀಕರಿಸುವ ಸಿದ್ಧತೆ ಕೂಡ ಭರದಿಂದ ಸಾಗಿತ್ತು. ಕ್ರೂರತನದ ಪರಮಾವಧಿಯೆಂದರೆ, ದಲಿತರು ಇತ್ತ ಸಿದ್ಧತೆಯಲ್ಲಿ ತೊಡಗಿದ್ದರೆ  ಸಂಘಪರಿವಾರ ಇವರನ್ನು ಡಿಸ್ಟಬರ್್  ಮಾಡುವುದು ಹೇಗೆ ಎಂದು ಸಂಚು ರೂಪಿಸತೊಡಗಿತ್ತು! ಅಂತಹ ವ್ಯವಸ್ಥಿತ ಸಂಚಿನ, ಪಿತೂರಿಯ ಭಾಗವಾಗಿ ನಡೆದ ಘಟನೆಯೇ ಖೈಲರ್ಾಂಜಿಯ ಭೀಕರ ಹತ್ಯೆ. ಯಾಕೆಂದರೆ ಆ ಘಟನೆಯಲಿ ್ಲಮುಖ್ಯ ಪಾತ್ರ ವಹಿಸಿದ ಆರೋಪಿ ಭಾಸ್ಕರ್ ಕಾವಡೆ ಸ್ಥಳೀಯ ಬಿಜೆಪಿ ಮುಖಂಡ. ಇನ್ನು ಆತ ಸಂಘಪರಿವಾರದ ಸದಸ್ಯ ಎಂದು ಬೇರೆ ಹೇಳಬೇಕಾಗಿಲ್ಲ!

ಹತ್ಯೆ ನಡೆಯುತ್ತಿದ್ದಂತೆ ದೇಶದಾದ್ಯಂತ ದಲಿತ ಸಂಘಟನೆಗಳು ಪ್ರತಿಭಟನೆಗಿಳಿದವು. ತಪ್ಪಿತಸ್ಥರ ವಿರುದ್ಧ ಉಗ್ರ ಕ್ರಮ ಕೈಗೊಳ್ಳುವಂತೆ ಧರಣಿ ಹೋರಾಟ ನಡೆಸಿದವು. ಒಂದರ್ಥದಲಿ ಸಂಘಪರಿವಾರದ ಸಂಚು ಫಲಿಸಿತ್ತು. ಖೈಲರ್ಾಂಜಿ ಹತ್ಯೆಯ ಸೂತಕದ ಹಿಂದೆ ಬಾಬಾಸಹೇಬರು ಬೌದ್ದಧರ್ಮ ಸ್ವೀಕರಿಸಿದ ಸುವರ್ಣ ಮಹೋತ್ಸವದ ಸಂಭ್ರಮ ಕರಗಿಹೋಯಿತು.

ನಾಗಪುರದಲ್ಲಿ  ಸಂಘಪರಿವಾರದ ಈ ಸಂಚು ಇನ್ನೂ ನಿಂತಿಲ್ಲ. ಅದಕ್ಕೋಸ್ಕರ ಪ್ರತ್ಯಕ್ಷವಾಗಿ ಕಂಡ ಘಟನೆ ಯೊಂದನ್ನು ಇಲ್ಲಿ ಹೇಳಲೇಬೇಕಾಗಿದೆ.

ನಾಗಪುರದ ದೀಕ್ಷಾಭೂಮಿ ದಲಿತರಿಗೆ ಪುಣ್ಯ ಭೂಮಿ. ಮುಸಲ್ಮಾನರಿಗೆ ಮೆಕ್ಕಾ ಹೇಗೋ, ಕ್ರೈಸ್ತರು ಮತ್ತು ಯಹೂದ್ಯರಿಗೆ ಜೆರೂಸಲೆಂ ಹೇಗೋ, ಹಿಂದೂಗಳಿಗೆ ಕಾಶಿ ಮತ್ತಿತರ ಸ್ಥಳಗಳು ಹೇಗೋ ಹಾಗೆ ದಲಿತರಿಗೆ ನಾಗಪುರದ ದೀಕ್ಷಾಭೂಮಿ. ಪ್ರತಿವರ್ಷ ಅಕ್ಟೋಬರ್ ತಿಂಗಳಲ್ಲಿ ಇಲ್ಲಿಗೆ 50 ಲಕ್ಷಕ್ಕೂ ಅಧಿಕ ಮಂದಿ ಭೇಟಿ ನೀಡುತ್ತಾರೆ. ಬಾಬಾಸಾಹೇಬರ ಚಿಂತನೆಗಳನ್ನು ಹಂಚಿಕೊಳ್ಳುತ್ತಾರೆ. ಶುಭ್ರ ಬಿಳಿ ವಸ್ತ್ರ ಧರಿಸಿ ದೇಶದ  ಮೂಲೆಮೂಲೆಗಳಿಂದ ಒಂದೆಡೆ ಬಂದು ಸೇರುವ ದಲಿತರು ಬೌದ್ಧ ಧರ್ಮದ ದೀಕ್ಷೆ ಪಡೆಯುತ್ತಾರೆ. ಬುದ್ಧನ ಚಿಂತನೆಗಳೊಂದಿಗೆ ಮತ್ತೆ ತಮ್ಮ ಊರು ಸೇರುತ್ತಾರೆ.

ಇಂತಹದ್ದೆ ಒಂದು ಸಂಧರ್ಭ, ಅಂದರೆ 2008 ಅಕ್ಟೋಬರ್ 14 ರಂದು ನಾನು ಮತ್ತು ನನ್ನ ಐವರು ಸ್ನೇಹಿತರು ದೀಕ್ಷಾಭೂಮಿಗೆ ತೆರಳಿದ್ದೆವು. ಅಲ್ಲಿ ಕಳೆದ ಮೂರು ದಿನಗಳು ಬಹುಶಃ ನಮ್ಮ ಜೀವನದ ಪವಿತ್ರ ಕ್ಷಣಗಳು. ಅಲ್ಲಿ ಬಾಬಾಸಾಹೇಬ್ ಅಂಬೇಡ್ಕರರ ಪವಿತ್ರ ಉಸಿರು ಮತ್ತು ಚಿಂತನೆ ತುಂಬಿರುತ್ತದೆ. . ಗೌತಮ ಬುದ್ಧರ ತನ್ನ ನೈಜ ದರುಶನ ನೀಡುತ್ತದೆ ಎಂದರೂ ತಪ್ಪಾಗಲಾರದು. ಇಂತಹ ಖುಷಿಯಲ್ಲಿ ನಾವಿರಬೇಕಾದರೆ ಸಂಘಪರಿವಾರದ ಪಿತೂರಿಯ ಸಣ್ಣ ಝಲಕ್ ಒಂದು ನಮ್ಮ ಕಣ್ಣೆದುರೇ ನಡೆಯಿತು. ಆ ಪಿತೂರಿ ಇಂತಿದೆ. ಇತ್ತ ಲಕ್ಷಾಂತರ ಜನ ದಲಿತರ ಗುಂಪು ಬುದ್ಧ ಅಂಬೇಡ್ಕರ್ ಎಂದು ದೀಕ್ಷೆ ಸ್ವೀಕರಿಸುವುದು , ವಸ್ತು ಪ್ರದರ್ಸನ ವೀಕ್ಷಿಒಸುವುದು, ಬುದ್ಧರ ತತ್ವಗಳನ್ನು ಕೇಳುವ ಬಿಜಿಯಲ್ಲಿದ್ದರೆ ಅತ್ತ ಎಲ್ಲಿಂದಲೋ ಕೇಸರಿ ವಸ್ತ್ರ ಧರಿಸಿದ ಕೈಯಲ್ಲಿ ತ್ರಿಶೂಲ ಹಿಡಿದ ವ್ಯಕ್ತಿಯೊಬ್ಬ ದಿಢೀರನೆ ನುಗ್ಗಿದ ! “ಜೈ ಶ್ರೀರಾಮ್” ಎಂಬ ಅವನ ಕೂಗು ಮೌನವಾಗಿ ಸಾಗುತ್ತಿದ್ದ ಆ ಜನರನ್ನು ಅವನೆಡೆ ತಿರುಗುವಂತೆ ಮಾಡಿತ್ತು. ತಕ್ಷಣ ಜಾಗೃತರಾದ ಅಲ್ಲೆ ಇದ್ದ ಸಮಾವೇಶದ ಸ್ವಯಂಸೇವಕರು ಆ ಕಾವಿಧಾರಿಯನ್ನು ಹಿಡಿದು ಪೋಲೀಸರಿಗೆ ಒಪ್ಪಿಸಿದರು. ಅಚ್ಚರಿಯ ವಿಷಯವೆನೆಂದರೆ ಒಬ್ಬನೇ ಒಬ್ಬ ದಲಿತನೂ ಕಿಂಚಿತ್ತು ಕದಲಿಲ್ಲ. ಯಾಕೆಂದರೆ ಅಲ್ಲೇನಾದರು ಗಲಿಬಿಲಿಯಾಗಿದ್ದರೆ ಕೇವಲ ಕಾಲ್ತುಳಿತದಿಂದಲೇ ಸಾವಿರಾರು ಜನ ಬಲಿಯಾಗುವ ಸಾಧ್ಯತೆಯಿತ್ತು.  ಶಾಂತಚಿತ್ತದ ಸಮಭಾವದ ದಲಿತರು ಗಾಂಭೀರ್ಯತೆಯನ್ನು ಪ್ರದಶರ್ಿಸಿ ತಮ್ಮತನ ಮೆರೆದರು! ಆದರೆ ಆ ಸಂಧರ್ಭದಲ್ಲಿ ನಿಜಕ್ಕು ಆಕ್ರೋಶಕ್ಕೊಳಗಾದದ್ದು ನಾನು. ಆ ಕಾವಿಧಾರಿಯನ್ನು ಏನೂ ಮಾಡದೇ ಸುಮ್ಮನೆ ಪೋಲಿಸರಿಗೊಪ್ಪಿಸಿದರಲ್ಲಾ ಎಂದು ಕುಪಿತನಾದೆ. ಆದರೆ ನಂತರವೇ ತಿಳಿದದ್ದು ಸಂಘಪರಿವಾರದ ಇಂತಹ ಪಿತೂರಿಗಳು ಆಗಾಗ್ಗೆ ನಡೆಯುತ್ತಿರುತ್ತದೆ ಮತ್ತು ಖೈರ್ಲಂಜಿಯ ಹತ್ಯಾಕಾಂಡ ಅಂತಹ ಪಿತೂರಿಯ ಭೀಭತ್ಸ ಪ್ರದರ್ಶನ ಎಂದು.

ಖೈಲರ್ಾಂಜಿಯ ಈ ಭೀಕರ ಹತ್ಯಾಕಾಂಡದ  ಬಗ್ಗೆ ಈಗ ಯಾಕೆ ಹೇಳಬೇಕಾಯಿತೆಂದರೆ ಮೊನ್ನೆ ಜುಲೈ 12 ರಂದು ಬಾಂಬೆ ಹೈಕೊಟರ್್ನ ನಾಗಪುರ ಪೀಠವು ಖೈಲರ್ಾಂಜಿಯ ಆರೋಪಿಗಳಿಗೆ ಸ್ಥಳೀಯ ವಿಚಾರಣಾ ನ್ಯಾಯಾಲಯವೊಂದು ವಿಧಿಸಿದ್ದ ಮರಣದಂಡನೆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಿದೆ. ತನ್ಮೂಲಕ ಸ್ವತಂತ್ರ ಭಾರತದಲ್ಲಿ ದಲಿತರ ಭೀಕರ ಹತ್ಯಾಕಾಂಡದ ಆರೋಪಿಗಳಿಗೆ ಕೆಳಹಂತದ ನ್ಯಾಯಾಲಯವೊಂದು ಪ್ರಥಮ ಬಾರಿಗೆ ಮರಣದಂಡನೆ ವಿಧಿಸಿದ್ದನ್ನು ಹೈಕೋಟರ್್ ರದ್ದು ಪಡಿಸಿದೆ. ಹೈಕೋಟರ್್ನ ಈ ತೀಪರ್ು ನಿಜಕ್ಕು ಆಘಾತಕಾರಿಯಾದದ್ದು. ಪ್ರಕರಣದ ಭೀಕರತೆಯು ಅಪರೂಪದಲ್ಲೆ ಅಪರೂಪ ಎನ್ನುವಂತಹದ್ದು. ಈ ಹಿನ್ನೆಲೆಯಲ್ಲಿ ವಿಚಾರಣಾ ನ್ಯಾಯಲಯ ನೀಡಿದ್ದ ಮರಣದಂಡನೆಯ ತೀಪರ್ು ಸರಿಯಾಗೆ ಇತ್ತು. ಆದರೆ ಹೈಕೋಟ್ರ್  ಈಗ ಇದಕ್ಕೆ ವ್ಯತಿರಿಕ್ತ ತೀಪರ್ು ನೀಡಿದೆ!

ಹೈಕೋಟರ್್ನ ಈ ತೀಪರ್ಿನ ವಿರುದ್ಧ ಸುಪ್ರೀಂ ಕೊಟರ್್ನಲ್ಲಿ ಮೇಲ್ಮನವಿ ಸಲ್ಲಿಸುವುದೊಂದೆ ಈಗ ಉಳೀದಿರುವ ದಾರಿ. ಈ ನಿಟ್ಟಿನಲಿ ಮಹಾರಾಷ್ಟ್ರ ಸಕರ್ಾರ ಕ್ರಮ ಕೈಗೊಳ್ಳಬೇಕಿದೆ.  ಸಿಬಿಐ ಈ ಪ್ರಕರಣದಲ್ಲಿ ಉದ್ದೇಶಪೂರ್ವಕವಾಗಿಯೇ ದುರ್ಬಲ ವಾದ ಮಂಡಿಸಿರುವ ಆರೋಪ ಕೇಳೀ ಬಂದಿದೆ. ಈ ನಿಟ್ಟಿನಲಿ ಕೇಂದ್ರ ಸಕಾರ ಕೂಡ ಮಧ್ಯೆ ಪ್ರವೇಶಿಸಬೇಕಾಗಿದೆ. ದೌರ್ಜನ್ಯಕೋರರು ಮುಂದೆ ದೌರ್ಜನ್ಯ  ಮಾಡಲು ಹೆದರಬೇಕಾದರೆ ಖೈರ್ಲಂಜಿಯ ಆರೋಪಿಗಳಿಗೆ ಮರಣದಂಡನೆಯೇ ಸೂಕ್ತ ಶಿಕ್ಷೆ. ಈ ನಿಟ್ಟಿನಲಿ ನ್ಯಾಯಲಯದ ಈ ತೀಪರ್ಿನ ವಿರುದ್ಧ ಶೋಷಿತ ಸಮುದಾಯ ದನಿಯೆತ್ತಬೇಕಿದೆ.

ಖೈಲರ್ಾಂಜಿಯಂತಹ ಪ್ರಕರಣಗಳು ಈಗ ನಿಂತಿದೆ ಎಂದಲ್ಲ . ಮೊನ್ನೆ ತುಮಕೂರಿನ ಗೋಪಾಲಪುರ ಗ್ರಾಮದಲ್ಲಿ ದಲಿತ ಮಹಿಳೆ ಹೊನ್ನಮ್ಮ ಳನ್ನು ಕಲ್ಲಿನಿಂದ ಜಜ್ಜಿ ಕೊಂದದ್ದು ಖೈಲರ್ಾಂಜಿಯ ಪುನರಾವರ್ತನೆಯಲ್ಲದೆ  ಬೇರೇೆನಲ್ಲ. ಚರಂಡಿಯಲ್ಲಿ ಅರೆಜೀವದಿಂದ ಬಿದ್ದಿದ್ದ ಹೊನ್ನಮ್ಮ ‘ನೀರು, ನಿರು’ ಎಂದು ಅಂಗಲಾಚಿದಾಗ ದೌರ್ಜನ್ಯಕೊರ ಮನಸ್ಸುಗಳು ಮತ್ತೊಂದು ಕಲ್ಲು ಎತ್ತಿಹಾಕಿದ್ದು, ಖೈಲರ್ಾಂಜಿಯಲ್ಲಿ ಪ್ರಿಯಾಂಕಳ ಮಮರ್ಾಂಗಕ್ಕೆ  ಚೂಪಾದ ದೊಣ್ಣೆಯಿಂದ ಚುಚ್ಚಿದ್ದು, ಬಹುಶಃ ಇಂತಹ ಭೀಬತ್ಸ ನೆನಪುಗಳಷ್ಟೆ ದಲಿತರಿಗೆ ಉಳಿಯುವುದು. ನ್ಯಾಯ? ಶುದ್ಧ ಮರೀಚಿಕೆಯಷ್ಟೆ.

ರಘೋತ್ತಮ ಹೊ. ಬ

ಚಾಮರಾಜನಗರ-571313

ಮೊಬೈಲ್ – 9481189116

“ನಾಗಸಿಧ್ಧಾರ್ಥ ಹೊಲೆಯಾರ್”, ವೈಚಾರಿಕ ಸಾಹಿತ್ಯದ ಹೊಸನೀರು


ಖ್ಯಾತ ತತ್ವಶಾಸ್ತ್ರಜ್ಙ ಹೆಚ್.ಡ್ರಮಂಡ್ ವೈಚಾರಿಕತೆಗೆ ಸಂಬಂಧಿಸಿದಂತೆ ಒಂದೆಡೆ ಹೀಗೆ ಹೇಳುತ್ತರೆ. ಬಾಬಾಸಾಹೇಬ್ ಅಂಬೇಡ್ಕರ್ರವರು ತಮ್ಮ “ಜಾತಿ ನಿಮರ್ೂಲನೆ” ಎಂಬ ಕೃತಿಯ ಮುನ್ನುಡಿಯಲ್ಲಿ ಡ್ರಮಂಡ್ರ ಈ  ಸಾಲುಗಳನ್ನು ಬಳಸಿಕೊಳ್ಳುತ್ತ್ತಾರೆ ಆ ಅದ್ಭುತ ಸಾಲುಗಳು ಇಂತಿವೆ.”ವಿಚಾರ ಮಾಡಲೊಲ್ಲದವನು ಮತಾಂಧ, ವಿಚಾರ ಮಾಡಲರಿಯದವನು ಮೂರ್ಖ, ವಿಚಾರ ಮಾಡಲಂಜುವವನು ಗುಲಾಮ”. ಬಹುಶಃ ವೈಚಾರಿಕತ ೆಅಧಾರಿತ ಸಮಾಜದ ದೃಷ್ಡಿಕೋನ ಹೇಗಿರಬೇಕೆಂಬುದಕ್ಕೆ  ಡ್ರಮಂಡ್ರ ಈ ಸಾಲುಗಳು ಕನ್ನಡಿ ಹಿಡಿಯುತ್ತವೆ. ಇಂದು  ಚಾಮಾರಾಜನಗರದಲ್ಲಿ ಬಿಡುಗಡರೆಯಾಗುತ್ತಿರುವ  ನಾಗಸಿದ್ಧಾರ್ಥ ಹೊಲೆಯಾರರ ‘ಬಾಬಾ ಸಾಹೇಬ್ ಡಾ.ಅಂಬೇಡ್ಕರ್ ದೃಷ್ಟಿಯಲ್ಲಿ ಕಲಿಯುಗ” ಎಂಬ ಕೃತಿ ಅಂತಹ ವೈಚಾರಿಕತೆಯ ಸಣ್ಣ ಬಿಂಬ ಎನ್ನಲಡ್ಡಿಯಿಲ್ಲ. ಈ ಹಿನ್ನೆಲೆಯಲ್ಲಿ ನಾಗಸಿದ್ಧಾರ್ಥ ಹೊಲೆಯಾರರ ಬದುಕು ಬರಹದ ಸಣ್ಣ ಚಿತ್ರಣ ಇಲ್ಲಿದೆ.
“ನಾಗಸಿದ್ಧಾರ್ಥ ಹೊಲೆಯಾರ್” ಎಂಬ ಕಾವ್ಯನಾಮದಿಂದ ಸಾಹಿತ್ಯ ಲೊಕಕ್ಕೆ ಪರಿಚಯವಾಗುತ್ತಿರುವ ಇವರ ಮೂಲ ಹೆಸರು ರಾಜಶೇಖರಮೂತರ್ಿ. ವೃತ್ತಿಯಲ್ಲಿ ಉಪತಹಸೀಲ್ದಾರರು, ಪ್ರವೃತ್ತಿಯಲಿ ಲೇಖಕ. ಲೇಖಕ ಅನ್ನುವದಕ್ಕಿಂತ ಸಂಶೋದಕ. ಆ ಸಂಶೋಧನೆಗೆ ಅಂಬೇಡ್ಕರ್ವಾದದ ನೆಲೆಗಟ್ಟಿದೆ. ಶೊಷಿತರ ಪರ ಕಾಳಜಿ ಇದೆ. ಸಾಮಾಜಿಕ ಹೊಣೆಗಾರಿಕೆಯ ನಿರತಂರ ತುಡಿತವಿದೆ.
ಸಿದ್ಧಾರ್ಥ ಹೊಲೆಯಾರರ ಜನ್ಮ ಸ್ಥಳ ಚಾಮಾರಾಜನಗರ ತಾಲ್ಲೂಕಿನ ಮಂಗಲ ಹೊಸುರು ಗ್ರಾಮ. ತಂದೆ ಎಸ್ ಬಸವಯ್ಯ, ತಾಯಿ ದೇವಾಜಮ್ಮ . ಇವರದು ಸುಶಿಕ್ಷಿತ ದಲಿತ ಕುಟುಂಬ. ಅಂತಹ ಶಿಕ್ಷಣದ ಸಂಸ್ಕಾರ ಇವರಿಗೆ ಅದುದರಿಂದಲೇ ಬಾಲ್ಯದಿಂದಲೆ ಇವರದು ಪ್ರಶ್ನಿಸುವ ಮನೋಭಾವ. ಕವನಗಳನ್ನು ಕಥೆಗಳನ್ನು ಬರೆಯುವ ಹುಚ್ಚು. ಸಮಾಜದ ಬದಲಾವಣೆಗೆ ತಹತಹಿಸುವ ಗುಣ. ಇಂತಹ ಗುಣವೇ ಇವರನ್ನು ನವದೆಹಲಿಯ ಖ್ಯಾತ ಸಂಶೋಧಕ ಶ್ರೀ ಎನ್. ಕೆ. ಶಮರ್ಾಜಿಯವರ ಸಂಪರ್ಕ ಪಡೆಯುವಂತೆ ಮಾಡಿದ್ದು. “ದಲಿತ್ ವಾಯ್ಸ್ ‘ ಆಂಗ್ಲ ಮಾಸಿಕದಲ್ಲಿ ಇವರ ಒಂದು ಪತ್ರ ಪ್ರಕಟವಾದದ್ದು, ಆ ಪತ್ರದ ಜಾಡು ಹಿಡಿದು ಶ್ರೀ ಎನ್. ಕೆ. ಶಮರ್ಾರವರು ಸಿದ್ಧಾರ್ಥ ಹೊಲೆಯಾರರನ್ನು ತಮ್ಮ ತೆಕ್ಕೆಗೆ ಸೆಳೆದು ಕೊಂಡದ್ದು, ಸಿದ್ದಾರ್ಥ ಹೊ;ಲೆಯಾರರ ವೈಚಾರಿಕತೆಗೆ ನೀರೆರೆದದ್ದು, ಬಹುಶಃ ವ್ಯಕ್ತಿಯೊಬ್ಬರ ಜೀವನಕ್ಕೆ ಸಿಗಬಹುದಾದ ನೈಜ ತಿರುವು ಎನ್ನಬಹುದು. ಸ್ವತಃ ಸಿದ್ಧಾರ್ಥ ಹೊಲೆಯಾರರೆ ” ನಾನೊಬ್ಬ ಲೇಖಕನಾಗಲು ನನಗೆ ಅಂಬೇಡ್ಕರ್ ವಾದದ ದೀಕ್ಷೆ ನೀಡಿದ ನನ್ನ ಪರಮ ಪೂಜ್ಯ ಗುರುಗಳಾದ ನವದೆಹಲಿಯ ಶ್ರೀ ಎನ್ ಕೆ ಶಮರ್ಾರವರೆ ಕಾರಣ ಎನ್ನುತ್ತಾರೆ.  ಪ್ರಸ್ತುತ ಇಂದು ಬಿಡುಗಡೆಯಾಗುತ್ತಿರುವ ಕೃತಿ ಅಂತಹ ಅಂಬೇಡ್ಕರ್ವಾದದ ದೀಕ್ಷೆಯಿಂದ ಒಡಮೂಡಿದ ಕೃತಿ ಎಂದರೆ ಅತಿಶಯೋಕ್ತಿಯೇನಲ್ಲ.
ಹಾಗಿದ್ದರೆ ಈ ಕೃತಿಯಲ್ಲಿ ಅಂತಹದ್ದೇನಿದೆ? ಲೇಖಕರು ಪ್ರಾರಂಭದಲ್ಲೇ ಹೇಳುವ ಹಾಗೆ” ವಿಜ್ಞಾನ ಮತ್ತು ತಂತ್ರ ಜ್ಞಾನವನ್ನು ಅಜ್ಞಾನದ ಪ್ರಚಾರಕ್ಕೆ ದುರ್ಬಳಕೆ ಮಾಡುತ್ತಿರುವುದರಿಂದ ವೀಕ್ಷಕರ ಮೇಲಾಗುತ್ತಿರುವ ದುಷ್ಪರಿಣಾಮದ ಹಿನ್ನೆಲೆಯಲ್ಲಿ ಕಲಿಯುಗದ ಬಗ್ಗೆ ಜನರಲ್ಲಿರುವ ಮೌಢ್ಯ ದ ಬಗ್ಗೆ ಕೆಲವರಲ್ಲಾದರೂ ಜಾಗೃತಿಮೂಡಿಸುವ ಉದ್ದೇಶದಿಂದ ….” ಹೌದು , ಇಲ್ಲಿ ಮೌಢ್ಯದ ವಿರುದ್ಧ ಚಾಟಿಯನ್ನೆ ಬೀಸಲಾಗಿದೆ. ಅದಕ್ಕಿಂತಲೂ ಮುಖ್ಯವಾಗಿ ಲೇಖಕರು ಭಾರತದ ಇತಿಹಾಸವನ್ನು ಪುನರ್ರಚಿಸುವ ಅಗತ್ಯವನ್ನು ಒತ್ತಿ ಹೇಳುತ್ತಾರೆ. “ಬೇಟೆಗಾರರಿಂದ ರಚಿತವಾದ  ಇತಿಹಾಸ” ಆ ಬೇಟೆಗಾರರಿಂದ ತಪ್ಪಿಸಿಕೊಂಡ ಹುಲಿಯ ಇತಿಹಾಸ ಆಗಿರಲು ಹೇಗೆ ಸಾಧ್ಯ? ಎಂದು ಈ ದೇಶದ ಮೂಲನಿವಾಸಿಗಳ ಹಿನ್ನೆಲಿಯಲ್ಲಿ ಭಾರತದ “ಮನು ಪ್ರಣೀತ ” ಇತಿಹಾಸವನ್ನು ಪ್ರಶ್ನಿಸುತ್ತಾರೆ.  ಹಾಗೆ ಪ್ರಶ್ನಿಸುವ ಅವರು  ಸುಮ್ಮನೇ ಕೂರುವುದಿಲ್ಲ. ಇತಿಹಾಸಕ್ಕೆ  ಹೊಸ ಬೆಳಕು ಚೆಲ್ಲು ವ ಪ್ರಯತ್ನವನ್ನೂ ಕೂಡ ಮಾಡುತ್ತಾರೆ. ಉದಾಹರಣೆಗೆ “ನಾಗ ಬೌದ್ಧ ಹೊಲೆಯರ ಇತಿಹಾಸ” ಎಂಬ ಲೇಖನದಲ್ಲಿ,  ” ಹೊಲ” ಎಂದರೆ “ಭೂಮಿ,” “ಹೊಲೆಯ” ಎಂದರೆ “ಹೊಲದ ಒಡೆಯ” ಎಂದು ಹೊಲೆಯ  ಎಂಬ ಪದಕ್ಕೆ ಹೊಸ ಅರ್ಥವನ್ನೇ ನೀಡುತ್ತಾರೆ. ಮತ್ತು ಇದಕ್ಕೆ ಸೂಕ್ತ ಆಧಾರವನ್ನು ಸಹ ನೀಡುತ್ತಾರೆ, ಮತ್ತೊಂದೆಡೆ ಅಂಬೇಡ್ಕರ್ರವರು “ಅಸ್ಪೃಶ್ಯರು ಮೂಲತಃ ನಾಗ ಜನಾಂಗದವರು” ಎಂದಿರುವುದಕ್ಕೆ ಸಮರ್ಥನೆಯಾಗಿ ಲೇಖಕರು, “ನಾಗರೀಕ”, “ನಾಗರೀಕತೆ”, “ನಗರ” ಈ ಪದಗಳು “ನಾಗ ಜನಾಂಗ ದ  ವ್ಯಕಿ”್ತಯನ್ನು, “ನಾಗ ಜನಾಂಗದ ಸಂಸ್ಕೃತಿ”ಯನ್ನು, ಮತ್ತು “ಅವರು ವಾಸಿಸುತ್ತಿದ್ದ ಸ್ಥಳ”ಗಳನ್ನು ಸೂಚಿಸುತ್ತಿದ್ದವು ಎನ್ನುತ್ತಾರೆ.
ಒಟ್ಟಾರೆ ಹೊಲೆಯಾರರು ತಮ್ಮ ಈ ಕೃತಿಯಲ್ಲಿ ಇತಿಹಾಸವೆಂಬ ಗೀಜಗನ ಗೂಡಿಗೆ ಕೈ ಹಾಕುವ ಪ್ರಯತ್ನ ಮಾಡಿದ್ದಾರೆ. ಉದಹರಣೆಗೆ “ಬೌದ್ಧ ಬಿಕ್ಕು ಯೇಸು ಕ್ರಿಸ್ತ” ಎಂಬ ಲೇಖನ ಅಂತಹ ಪ್ರಯತ್ನಗಳಲ್ಲೊಂದು. ಅದಲ್ಲದೇ “ಪೇಜಾವರ ಶ್ರೀಗಳಿಗೊಂದು ಬಹಿರಂಗ ಪತ್ರ” ಎಂಬ ಲೇಖನದಲ್ಲಿ, “ಬುದ್ಧ, ಬೌದ್ಧ ಬಿಕ್ಕು ಮತ್ತು ಬಿಕ್ಕುಣಿಯರನ್ನು ಧರ್ಮಸ್ಥಳ ಮಂಜುನಾಥ, ತಿರುಪತಿಯ ಬಾಲಾಜಿ, ಕೇದಾರನಾಥ, ಶ್ರೀ ರಂಗನಾಥ,ಪುರಿಯ ಜಗನ್ನಥ, ಕಾಶಿ ವಿಶ್ವನಾಥ, ಕಂಚಿ ಕಾಮಕ್ಷಿ, ಮಧುರೈ ಮೀನಾಕ್ಷಿ, ಎಲ್ಲಮ್ಮ, ಪೊಲ್ಲಮ್ಮ, ಮಾರಮ್ಮ  ಇತ್ಯಾದಿ ರೂಪಗಳಲ್ಲಿ ಪೂಜಿಸಲಾಗುತ್ತಿದೆ” ಎಂದು ಇತಿಹಾಸದ  ಬುಡವನ್ನೆ ಅಲುಗಾಡಿಸುವ ಪ್ರಯತ್ನ ಮಾಡಿದ್ದಾರೆ.
ಇದಿಷ್ಟೆ ಅಲ್ಲದೆ ಅಸ್ಪೃಶ್ಯರ ಮಧ್ಯೆ ಇರುವ “ಎಡಗೈ-ಬಲಗೈ” ಸಮಸ್ಯೆಯ ಬಗ್ಗೆ ಮಾನವೀಯ ಕಳಕಳಿಯ       ಹಿನ್ನೆಲೆಯಲ್ಲಿ ಬರೆಯುವ ಲೇಖಕರು , ಸಮಾಜದ ಅತ್ಯಂತ ತಳಸಮುದಾಯವಾದ ಜಲಗಾರರ ಸಮಸ್ಯೆಗಳನ್ನು ಎತ್ತಿಕೊಳ್ಳುತ್ತಾ ” ಚಂದ್ರ ಲೋಕವೆಂಬ ನಿಜರ್ೀವ ಲೋಕದ ಬಗ್ಗೆ ತರಲೆಕೆಡಿಸಿಕೊಳ್ಳುವ ವಿಜ್ಞಾನಿಗಳು ಮ್ಯಾನ್ ಹೋಲ್ಗಳನ್ನು ಶುಚಿಗೊಳಿಸಲು ಇನ್ನೂ ಏಕೆ ಒಂದೂ ಯಂತ್ರವನ್ನು ಕಂಡುಹಿಡಿದಿಲ್ಲ? ಎಂದು ಆತಂಕದಿಂದ ಪ್ರಶ್ನಿಸುತ್ತಾರೆ.  ಆ ನಿಟ್ಟಿನಲಿ ಮಾಹಿತಿತಂತ್ರಜ್ಞಾನ (ಐ. ಟಿ), ಜೈವಿಕ ತಂತ್ರಜ್ಞಾನ(ಬಿ,ಟಿ) ಯ ಹಾಗೆ ಶೌಚ ತಂತ್ರಜ್ಞಾನ (ಣಛಿಚಿತಜಟಿರರ ಖಿಜಛಿಟಿಠಟಠರಥಿ)  ಕೂಡ ಅಭಿವೃದ್ಧಿಯಾಗಬೇಕು ಎಂಬ ಗಂಭೀರ ಸಲಹೆಯನ್ನು ನೀಡುತ್ತಾರೆ.
ಒಟ್ಟಾರೆ ನಾಗಸಿದ್ಧಾರ್ಥ ಹೊಲೆಯಾರರ ಈ ಕೃತಿ ಮಾನವ ಪರ ಕಾಳಜಿಯ ಕೃತಿಯಾಗಿದೆ. ಅದಕ್ಕೆ ಹೊಸ ದಿಕ್ಕು ಸೂಚಿಸುವ ಛಾತಿ ಇದೆ.  ಎಲ್ಲವನ್ನು ನೇರವಾಗಿ ಹೇಳುವ ದಿಟ್ಟ ಗುಣ ಇದೆ. ಈ ಸಂಧರ್ಭದಲ್ಲಿ  ಖ್ಯಾತ ಚಿಂತಕ ಜೆ. ಆರ್. ಲಾವೆಲ್ರ ಹೇಳಿಕೆ ಇಲ್ಲಿ ಉಲ್ಲೇಖನೀಯ, “ನಾವು ಮಾತನಾಡುತ್ತೇವೆ ನಮ್ಮನ್ನು ಎಲ್ಲರೂ ಕೇಲಿಸಿಕೊಳ್ಳಲಿ. ಇದರಿಂದ  ಪ್ರಪಂಚದ ವ್ಯವಸ್ಥೆ ಬಿರುಕು ಬಿಟ್ಟರೂ ಬಿಡಲಿ, ನಾವು ಒಂದು ಶಬ್ಧವನ್ನೂ ಬಚ್ಚಿಡುವುದಿಲ್ಲ. ಆಡಿದ ಒಂದು ಅಕ್ಷರವನ್ನೂ ಹಿಂದಕ್ಕೆ ತೆಗೆದು ಕೊಳ್ಳುವುದಿಲ್ಲ. ಅಂಜುಬುರುಕರು ಅಂಜುತ್ತಿರಲಿ , ಹೇಡಿಗಳು ಹಿಂಜರಿಯಲಿ, ಸಂಪ್ರದಾಯವಾದಿಗಳು ಎದುರಾಗಿ ನಿಲ್ಲಲಿ, ನಾವು ಯಾವುದನ್ನು ಧೈರ್ಯದಿಂದ ವಿಚಾರಿಸಿದ್ದೇವೆಯೋ ಅದನ್ನು ಹೇಳುವ ಧೈರ್ಯವು ನಮಗಿದೆ.”                                                                                                        ನಾಗಸಿದ್ಧಾರ್ಥ ಹೊಲೆಯಾರರು ಎಲ್ಲವನ್ನು ಧೈರ್ಯದಿಂದ ಹೇಳಿದ್ದಾರೆ. ಅವರು ಯಾವುದನ್ನೂ ಬಚ್ಚಿಟ್ಟಿಲ್ಲ. ಹಿಂಜರಿಯಲು ಹೋಗಿಲ್ಲ      , ಅಂಜಿಕೆಯಂತೂ ಇಲ್ಲವೇ ಇಲ್ಲ. ಆದರೆ ಎಲ್ಲರೂ ಕೇಳಿಸಿ ಕೊಳ್ಳಲಿ ಎಂಬ ಕಳಕಳಿ ಇದೆ. ತನ್ನ ವಿಚಾರಗಳನ್ನು  ಎಲ್ಲರಿಗೂ ಮುಟ್ಟಿಸಬೇಕೆಂಬ ಅಧಮ್ಯ ಉತ್ಸಾಹವಿದೆ. ಮತ್ತು ಹಾಗಯೇ ಸಮಯ ಕೂಡ ಇದೆ ಯಾಕೆಂದರೆ ಸಿದ್ಧಾರ್ಥ ಹೊಲೆಯಾರರಿಗೆ ಈಗಿನ್ನೂ ನಲವತ್ತು.
ಒಟ್ಟಿನಲಿ ನಾಗಸಿದ್ಧಾರ್ಥ ಹೊಲೆಯಾರರ ” ಬಾಬಾಸಾಹೇಬ್ ಡಾ.ಅಂಬೇಡ್ಕರ್ ದೃಷ್ಟಿಯಲ್ಲಿ ಕಲಿಯುಗ” ಎಂಬ ಈ ಕೃತಿ ವೈಚಾರಿಕ ಸಾಹಿತ್ಯಕ್ಕ್ಕೆ ಹರಿದು ಬರುತ್ತಿರುವ ಸಣ್ಣ ತೊರೆ. ಓದುಗರು ಅದರ ಒಂದೊಂದು ಗುಟುಕನ್ನೂ ಮಾನವೀಯ ಕಳಕಳಿಯ ಹಿನ್ನೆಲೆಯಲ್ಲಿ ಸ್ವೀಕರಿಸಬೇಕಾಗಿದೆ. ಕಡೆಯದಾಗಿ ಕನ್ನಡ ಮರಾಠಿಯ ಮೊದಲ ದಲಿತ ಲೇಖಕ ಎಂದು ಗುರುತಿಸಲ್ಪಡುವ ದೇವರಾಯ ಹಿಂಗಳೆಯವರು ಅಂಬೇಡ್ಕರರನ್ನು ಕುರಿತು ಒಂದು ಕವನ ಬರೆದಿದ್ದಾರೆ. ಅದರ ಒಂದೆರಡು ಸಾಲುಗಳು  ಇಂತಿವೆ.
ಅವನು ಸೂರ್ಯ
ನಾವು ಅವನ ತುಣುಕುಗಳು
ಲೇಖಕ ನಾಗಸಿದ್ಧಾರ್ಥ ಹೊಲೆಯಾತರರು ಅಂತಹ ತುಣುಕಿನ ಒಂದಂಶವಾಗಿ ಬೆಳಗಲಿ, ಕನ್ನಡ ಸಾಹಿತ್ಯದ ಆಸ್ತಿಯಾಗಲಿ ಎಂಬುದಷ್ಟೆ ಈ ಲೇಖನದ ಕಳಕಳಿ.
-ರಘೋತ್ತಮ ಹೊ.ಬ

ಚಾಮರಾಜನಗರ-571313
ಮೊಬೈಲ್-9481189116

ಮುಚ್ಚಿಡಲ್ಪಟ್ಟ ಅಂಬೇಡ್ಕರ್ ಭವ್ಯ ಇತಿಹಾಸ


ಮುಚ್ಚಿಡಲ್ಪಟ್ಟ ಅಂಬೇಡ್ಕರ್ ಭವ್ಯ ಇತಿಹಾಸ

ರವಿವಾರ – ಜೂನ್ -27-2010

varthabharathi

ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ರ ಬಗ್ಗೆ ಈ ದೇಶದ ಜನತೆಗೆ ಏನು ಗೊತ್ತು? ಗೊತ್ತಿರುವುದಿಷ್ಟೆ. ಅಂಬೇಡ್ಕರರು ಯಾರೂ ಮುಟ್ಟಿಸಿಕೊಳ್ಳಲಾಗದ ಒಂದು ಕೀಳು ಜಾತಿಯಲ್ಲಿ ಹುಟ್ಟಿದರು. ಬಾಲ್ಯ ದಿಂದಲೇ ಅಸ್ಪಶತೆಯ ನೋವನ್ನು ಅನುಭವಿಸಿ ದರು. ತಮ್ಮ ತಂದೆಯನ್ನು ನೋಡಲು ಗಾಡಿಯಲ್ಲಿ ಹೋಗುತ್ತಿದ್ದಾಗ ಗಾಡಿಯಿಂದ ತಳ್ಳಲ್ಪಟ್ಟರು.

ಹೀಗೆ ಅವಮಾನಕ್ಕೊಳಗಾದ ಅಂಬೇಡ್ಕರ್ ಮುಂದೆ ಉನ್ನತ ಜ್ಞಾನಪಡೆದು ಈ ದೇಶದ ‘ಸಂವಿಧಾನ ಶಿಲ್ಪಿ’ ಎನಿಸಿ ಕೊಂಡರು. ಅಸ್ಪಶರ ಉದ್ಧಾರಕ್ಕಾಗಿ ಹೋರಾಡಿದರು ಎಂಬುದಷ್ಟೆ. ಬಹುಶಃ ಇದ ಕ್ಕಿಂತ ಹೆಚ್ಚಿಗೆ ಅಂಬೇಡ್ಕರರ ಬಗ್ಗೆ ಈ ದೇಶದ ಜನತೆಗೆ ಗೊತ್ತಿರುವುದು ಸಾಧ್ಯವಿಲ್ಲ. ಅಥವಾ ಮೇಲೆ ಹೇಳಿರುವುದೇ ಹೆಚ್ಚಿರಬೇಕು! ದಲಿತರಿಗೆ ಮೀಸಲಾತಿ ತಂದುಕೊಟ್ಟದಷ್ಟೇ ಅವರ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ತನ್ಮೂಲಕ ಅಂಬೇಡ್ಕರ್ ಎಂಬ ‘ಮಹಾನ್ ಇತಿಹಾಸವನ್ನು’ ಮುಚ್ಚಲಾಗುತ್ತಿದೆ!

ಹಾಗಿದ್ದರೆ ಅಂಬೇಡ್ಕರ್‌ರ ಸಾಧನೆ ಇದಿಷ್ಟು ಮಾತ್ರವಾ? ಅಥವಾ ಇನ್ನೇನು ಇಲ್ಲವಾ? ಯಾಕೆಂದರೆ 2006ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಅಮೇರಿಕದ ಅಧ್ಯಕ್ಷ ಜಾರ್ಜ್‌ಬುಷ್ ‘ಗಾಂಧಿ, ಠಾಗೋರ್ ಮತ್ತು ನೆಹರೂ’ರವರನ್ನು ನವ ಭಾರತದ ನಿರ್ಮಾತೃಗಳೆನ್ನುತ್ತಾರೆ. ಅಂಬೇಡ್ಕರ್ ರನ್ನು ಈ ಪರಿಯಲ್ಲಿ ಇತಿಹಾಸದಲ್ಲಿ ಕಬ್ಜರನ್ನಾಗಿ ಸುವ ಅಥವಾ ಮರೆಮಾಚುವ ಪ್ರಯತ್ನ ನಿರಂತರ ವಾಗಿ ನಡೆಯುತ್ತಿರುವಾಗ ಬುಷ್‌ರಂತಹವರು ಇದಕ್ಕಿಂತ ಹೆಚ್ಚಿಗೆ ಇನ್ನೇನನ್ನು ತಾನೆ ಹೇಳಿ ಯಾರು? ಈ ಹಿನ್ನೆಲೆಯಲ್ಲಿ ಹೊರಜಗತ್ತಿಗೆ ಅಂಬೇಡ್ಕರ್‌ರ ನೈಜ ಸಾಧನೆಗಳನ್ನು ಬಿಚ್ಚಿ ಹೇಳಬೇಕಾಗಿದೆ. ಇತಿಹಾಸದಲ್ಲಿ ಅವರನ್ನು ಮರೆಮಾಚಲು ನಡೆಯುತ್ತಿರುವ ದುಷ್ಟ ಪ್ರಯತ್ನವನ್ನು ತಡೆಯಬೇಕಾಗಿದೆ.

ಹಾಗಿದ್ದರೆ ಅಸ್ಪಶರ ಉದ್ಧಾರವನ್ನು ಸಂವಿ ಧಾನ ರಚನೆಯನ್ನು ಹೊರತುಪಡಿಸಿ ಅಂಬ್ಕೇಡರ್‌ರ ಇನ್ನೇನೇನು ಸಾಧನೆಗಳಿವೆ? ಪಟ್ಟಿ ಮಾಡುತ್ತಾ ಹೋದರೆ ‘ಬಾಬಾ ಸಾಹೇಬ’ರ ವ್ಯಕ್ತಿತ್ವ ಗಾಂಧಿ ಎಂಬ ‘ಮಹಾತ್ಮ’ರನ್ನೂ, ಠಾಗೋರ್ ಎಂಬ ‘ಗುರುದೇವ’ರನ್ನೂ, ನೆಹರೂ ಎಂಬ ‘ಚಾಚಾ’ ರನ್ನೂ ಮೀರಿ ಬೆಳೆಯುತ್ತದೆ. ಏಕೆಂದರೆ ಈ ದೇಶದಲ್ಲಿ ಪ್ರಪ್ರಥಮವಾಗಿ ರೈತರ ಪರ ದನಿ ಎತ್ತಿದ್ದು ಅಂಬೇಡ್ಕರ್.

ಈ ದೇಶದ ಮಹಿಳೆಯ ರಿಗೆ ‘ಹಿಂದೂ ಸಂಹಿತೆ ಮಸೂದೆಯ ಮೂಲಕ ನ್ಯಾಯ ದೊರಕಿಸಿಕೊಡಲು ಹೋರಾಡಿದ್ದು ಅಂಬೇಡ್ಕರ್. ಅಚ್ಚರಿಯ ವಿಷಯವೆಂದರೆ ಈ ದೇಶದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್.ಬಿ.ಐ) ಸ್ಥಾಪಿಸಲು ಕಾರಣರಾ ದದ್ದು ಕೂಡ ಅಂಬೇಡ್ಕರ್‌ರೆ.

ಹಿಂದೂ ಸಾಮಾಜಿಕ ಸುಧಾರಣೆಗೆ ಯತ್ನಿಸಿದ್ದು, ಪಾಕಿಸ್ತಾನ ವಿಷಯ, ಕಾರ್ಮಿಕ ನೀತಿ, ವಿದ್ಯುತ್ ಮತ್ತು ನೀರಾವರಿ ನೀತಿ, ದಾಮೋದರ ಕಣಿವೆ ಯೋಜನೆ, ಹಿರಾಕುಡ್ ಯೋಜನೆ, ಸೋನ್ ಕಣಿವೆ ಯೋಜನೆ, ಎರಡನೆ ಮಹಾಯುದ್ಧದ ನಂತರ ದೇಶದ ಆರ್ಥಿಕ ನೀತಿ ರೂಪಿಸಿದ್ದು. ಅಬ್ಬಬ್ಬಾ ಪಟ್ಟಿ ಮಾಡುತ್ತಾ ಹೋದರೆ ಅಂಬೇಡ್ಕರ್‌ರು ಇದಕ್ಕೆಲ್ಲ ಕಾರಣರಾ ಎಂದೆನಿಸುತ್ತದೆ. ವಾಸ್ತವವೆಂದರೆ ಇವು ಅವರ ಮುಚ್ಚಿಟ್ಟ ಇತಿಹಾಸದ ಕೆಲವು ತುಣುಕುಗಳು ಅಷ್ಟೇ!

ಉದಾಹರಣೆಗೆ ಹೇಳುವುದಾದರೆ 1945ರಲ್ಲಿ ಎರಡನೆ ಮಹಾಯುದ್ಧದ ನಂತರ ಈ ದೇಶದ ಕೃಷಿ, ಕೈಗಾರಿಕೆ, ಆರ್ಥಿಕ ಸ್ಥಿತಿ, ಪುನರ್ವಸತಿ ಮತ್ತು ಸೈನಿಕರ ಕಲ್ಯಾಣಕ್ಕಾಗಿ ‘ಪುನರುಜ್ಜೀವನ ಸಮಿತಿ ಸಭೆ’ ಬ್ರಿಟಿಷ್ ಗವರ್ನರ್ ಜನರಲ್‌ರಿಂದ ರಚಿಸಲ್ಪಟ್ಟಿತು. ಅಂಬೇ ಡ್ಕರ್ ಆ ಸಮಿತಿಯ ಸದಸ್ಯರಾಗಿದ್ದರು ಮತ್ತು ಅವರಿಗೆ ‘ನೀರಾವರಿ ಮತ್ತು ವಿದ್ಯುಚ್ಛಕ್ತಿ ನೀತಿ ನಿರೂ ಪಣಾ ಸಮಿತಿ’ಯ ಜವಾಬ್ದಾರಿಯನ್ನು ವಹಿಸಲಾಯಿತು.

ಆಸಕ್ತಿದಾಯಕ ವಿಷಯವೇನೆಂದರೆ ಆ ಸಮಿತಿಯ ಅಧ್ಯಕ್ಷರಾಗಿ ಅಂಬೇಡ್ಕರ್ ಅದ್ಭುತವಾದ ಸಾಧನೆ ಮಾಡಿದ್ದಾರೆ. 1942ರಿಂದ 1946ರ ವರೆಗೆ ಗವರ್ನರ್ ಜನರಲ್‌ರವರ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕ್ಯಾಬಿನೆಟ್ ಮಂತ್ರಿಯ ಸ್ಥಾನ ಪಡೆದಿದ್ದ ಅವರಿಗೆ ಕಾರ್ಮಿಕ, ನೀರಾವರಿ ಮತ್ತು ವಿದ್ಯುಚ್ಛಕ್ತಿ ಇಲಾಖೆಗಳನ್ನು ವಹಿಸಲಾಗಿತ್ತು. ಈ ನಾಲ್ಕು ವರ್ಷಗಳ ಅವಧಿಯಲ್ಲಿ ಅಂಬೇಡ್ಕರ್‌ರವರು ಮಾಡಿದ ಸಾಧನೆ ಬಹುತೇಕ ಜನರಿಗೆ ಗೊತ್ತಿಲ್ಲ!

ಅಥವಾ ಗೊತ್ತಾಗಲು ಬಿಟ್ಟಿಲ್ಲ. ಕುತೂಹಲಕಾರಿ ವಿಷಯವೆಂದರೆ ಈ ಅವಧಿಯಲ್ಲಿಯೇ ಅವರು ಪ್ರಸಿದ್ಧ ದಾಮೋದರ್ ಕಣಿವೆ ಯೋಜನೆ, ಹಿರಾ ಕುಡ್ ಯೋಜನೆ ಮತ್ತು ಸೋನ್ ಕಣಿವೆ ಯೋಜನೆ ಜಾರಿಗೊಳಿಸಿದ್ದು ಮತ್ತು ಇಂತಹ ಬೃಹತ್ ನೀರಾವರಿ ಯೋಜನೆ, ವಿದ್ಯುತ್ ಯೋಜನೆಗಳನ್ನು ಗಮನ ದಲ್ಲಿಟ್ಟುಕೊಂಡು ಅವರು 1944ರಲ್ಲೆ ‘ಕೇಂದ್ರೀಯ ಜಲವಿದ್ಯುತ್ ಮತ್ತು ನೀರಾವರಿ ಆಯೋಗ’ವನ್ನು ಸ್ಥಾಪಿಸಿದ್ದು.

ಇವತ್ತು ನಮ್ಮ ಮನೆಗಳೇನಾದರೂ ಬೆಳಗುತ್ತಿದ್ದರೆ, ನಮ್ಮ ಹೊಲಗಳೇನಾದರೂ ಹಸುರಿನಿಂದ ಕಂಗೊಳಿಸುತ್ತಿದ್ದರೆ ಅದು ನೀರಾವರಿ ಮತ್ತು ವಿದ್ಯುತ್ ಕ್ಷೇತ್ರದಲ್ಲಿ ಅಂಬೇಡ್ಕರ್ ಮಾಡಿದ ಅದ್ಭುತ ಸಾಧನೆಯ ಫಲವಲ್ಲದೆ ಬೇರೇನೂ ಅಲ್ಲ. ದುರಂತ ವೆಂದರೆ ಇಂತಹ ಅದ್ಭುತ ಸಾಧನೆಯನ್ನು ಮುಚ್ಚಿಡಲಾಗಿದೆಯಲ್ಲ ಎಂಬುದು.

ಅಂಬೇಡ್ಕರ್‌ರ ಮತ್ತೊಂದು ಸಾಧನೆಯನ್ನು ಹೇಳಲೇಬೇಕು. ಅದು ಭಾರತೀಯ ರಿಸರ್ವ್ (ಆರ್‌ಬಿಐ)ಗೆ ಸಂಬಂಧಿಸಿದ್ದು. ತಮ್ಮ ‘ಆರ್ಥಿಕ ಯೋಜನೆ, ನೀರಾವರಿ ಮತ್ತು ವಿದ್ಯುತ್ ಕ್ಷೇತ್ರದಲ್ಲಿ ಅಂಬೇಡ್ಕರ್ ಪಾತ್ರ’ ಎಂಬ ಕೃತಿಯಲ್ಲಿ ಖ್ಯಾತ ಚಿಂತಕ ಸುಖದೇವ್ ಥೊರಟ್‌ರವರು ಇದನ್ನು ದಾಖಲಿಸುತ್ತಾರೆ. ”ಆರ್‌ಬಿಐ ಸ್ಥಾಪನೆಗೆ ಬ್ರಿಟಿಷ್ ಮಹಾರಾಣಿಯವರಿಂದ ನೇಮಿಸಲ್ಪಟ್ಟಿದ್ದ ‘ಹಿಲ್ಟನ್ ಯಂಗ್ ಆಯೋಗ’ದ ಮುಂದೆ ಅಂಬೇಡ್ಕರ್ ರವರು ಆರ್‌ಬಿಐನ ಮಾರ್ಗದರ್ಶಿ ಸೂತ್ರ, ಕಾರ್ಯಶೈಲಿ ಮತ್ತು ದೂರದೃಷ್ಟಿಯನ್ನು ಮಂಡಿಸುತ್ತಾರೆ.

ತನ್ಮೂಲಕ ಆರ್.ಬಿ.ಐ.ನ ಸ್ಥಾಪನೆಗೆ ಕಾರಣರಾಗುತ್ತಾರೆ’ ಎನ್ನುತ್ತಾರೆ ಸುಖದೇವ್ ಥೊರಟ್. ಕುತೂಹಲಕಾರಿ ಅಂಶವೆಂದರೆ ‘ಹಿಲ್ಟನ್ ಯಂಗ್’ ಆಯೋಗದ ಪ್ರತಿಯೊಬ್ಬ ಸದಸ್ಯನ ಕೈಯಲ್ಲೂ ಅಂಬೇಡ್ಕರ್ ‘ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್’ಗಾಗಿ ‘ಡಿ.ಎಸ್‌ಸಿ’ ಪದವಿ ಪಡೆಯಲು ರಚಿಸಿದ್ದ ‘ರೂಪಾಯಿಯ ಸಮಸ್ಯೆ, ಅದರ ಮೂಲ ಮತ್ತು ಪರಿಹಾರ’ ಎಂಬ ಕೃತಿಯಿತ್ತು.

ದೇಶದ ಹಣಕಾಸು ವ್ಯವಸ್ಥೆ ಪಟ್ಟಭದ್ರರ ಕೈಗೆ ಜಾರುತ್ತಿದ್ದುದನ್ನು ಗಮನಿಸಿ ಅಂಬೇಡ್ಕರ್‌ರು ಆರ್.ಬಿ.ಐ.ನ ಅಗತ್ಯತೆ ಮತ್ತು ಅದರ ಭವಿಷ್ಯದ ಮಾರ್ಗಸೂಚಿಯ ಬಗ್ಗೆ ಆಯೋಗದ ಮುಂದೆ ಸಮಗ್ರವಾದ ವಾದ ಮಂಡಿಸುತ್ತಾರೆ. ತನ್ಮೂಲಕ 1934ರಲ್ಲಿ ಅದರ ಸ್ಥಾಪನೆಗೆ ಕಾರಣರಾಗುತ್ತಾರೆ. ಮತ್ತೆ ಕೇಳು ತ್ತಿರುವ ಪ್ರಶ್ನೆಯೇನೆಂದರೆ ಇಂತಹ ಅದ್ಭುತ ಇತಿಹಾಸ ಎಷ್ಟು ಜನರಿಗೆ ಗೊತ್ತು ಎಂಬುದು?

ಮತ್ತೊಂದು ವಿಷಯ ಇಲ್ಲಿ ಹೇಳಲೇಬೇಕಾಗಿದೆ. ಇತ್ತೀಚೆಗೆ ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾ ತನ್ನ 150ನೆ ವರ್ಷಾಚರಣೆಯನ್ನು ನೆರವೇರಿಸಿಕೊಂಡಿತು. ಅದು ರಾಷ್ಟ್ರಗೀತೆಯ ಕರ್ತೃ ರವೀಂದ್ರನಾಥ್ ಠಾಗೋರ್‌ರನ್ನು ತನ್ನ ಬ್ರಾಂಡ್ ಅಂಬಾಸಿಡರ್ ಎಂದು ಬಿಂಬಿಸಿತು. ಪ್ರಶ್ನೆಯೇನೆಂದರೆ ಈ ದೇಶದ ಕರೆನ್ಸಿಯ ಬಗ್ಗೆ ಹಣಕಾಸು, ಅರ್ಥಶಾಸ್ತ್ರದ ಬಗ್ಗೆ ಠಾಗೋರ್‌ರ ಕೊಡುಗೆಯಾದರೂ ಏನು? ಎಂಬುದು.

ಖಂಡಿತ ಏನೂ ಇಲ್ಲ. ಎಸ್.ಬಿ.ಐ. ರಿಸರ್ವ್ ಬ್ಯಾಂಕ್ ಸ್ಥಾಪನೆಗೆ ಕಾರಣಕರ್ತರಾದ, ಹಲವಾರು ಕೃತಿಗಳನ್ನು ರಚಿಸಿ ಈ ದೇಶದ ಆರ್ಥಿಕತೆ ಮತ್ತು ಹಣಕಾಸು ಕ್ಷೇತ್ರಕ್ಕೆ ಅದ್ಭುತ ಕೊಡುಗೆ ನೀಡಿರುವ, ನೊಬೆಲ್ ಪ್ರಶಸ್ತಿ ವಿಜೇತ ಖ್ಯಾತ ಅರ್ಥಶಾಸ್ತ್ರಜ್ಞ ಅಮಾರ್ತ್ಯ ಸೇನ್‌ರಿಂದ ‘ಅಂಬೇಡ್ಕರ್ ನನ್ನ ಅರ್ಥಶಾಸ್ತ್ರದ ಗುರು’ ಎಂದು ಕರೆಸಿಕೊಂಡಿರುವ ಬಾಬಾಸಾಹೇಬ್ ಡಾ. ಅಂಬೇಡ್ಕರ್‌ರನ್ನು ತನ್ನ ಬ್ರಾಂಡ್ ಅಂಬಾಸಿಡರ್ ಎಂದು ಬಿಂಬಿಸಬೇಕಿತ್ತು!

ದುರಂತ ವೆಂದರೆ ಅಸ್ಪಶತೆಯ ಸೋಂಕು ತಗುಲಿಸಿಕೊಂಡ ಈ ದೇಶದ ಸ್ಥಾಪಿತ ಹಿಸಾಕ್ತಿಗಳಿಗೆ ಅಂಬೇಡ್ಕರ್‌ರ ಈ ಸಾಧನೆಗಳು ಕಾಣುತ್ತಿಲ್ಲ. ಇನ್ನು ಅವರು ಬ್ರಾಂಡ್ ಅಂಬಾಸಿಡರ್ ಆಗಲು ಹೇಗೆ ಸಾಧ್ಯ? ಅವರನ್ನು ಕೇವಲ ಒಂದು ಸಮುದಾಯದ ‘ಬ್ರಾಂಡ್’ ಆಗಿ ಬಿಂಬಿಸಲಾಗುತ್ತಿದೆ ಅಷ್ಟೆ!

ಇನ್ನು ಈ ನಡುವೆ ಅಂತರಾಜ್ಯ ಸಮಸ್ಯೆ ಗಳ ಬಗ್ಗೆ ಅಂಬೇಡ್ಕರ್‌ರ ಅನಿಸಿಕೆಗಳನ್ನು ದಾಖಲಿಸಲೇಬೇಕು. ಯಾಕೆಂದರೆ 1955ರಲ್ಲೇ ಅಂಬೇಡ್ಕರ್ ತಮ್ಮ ‘ಭಾಷಾವಾರು ಪ್ರಾಂತ್ಯ ಗಳ ಬಗೆಗಿನ ಆಲೋಚನೆಗಳು’ ಎಂಬ ಕೃತಿಯಲ್ಲಿ ಮಧ್ಯಪ್ರದೇಶವನ್ನು ಉತ್ತರ ಮತ್ತು ದಕ್ಷಿಣ ರಾಜ್ಯಗಳಾಗಿ ವಿಂಗಡಿಸಲು ಮತ್ತು ಬಿಹಾರವನ್ನು ಎರಡು ರಾಜ್ಯವಾಗಿ ವಿಂಗಡಿಸಲು ಸಲಹೆ ನೀಡು ತ್ತಾರೆ.

ಅಚ್ಚರಿಯ ವಿಷಯವೇನೆಂದರೆ ಅವರು ಸಲಹೆ ನೀಡಿದ 45 ವರ್ಷಗಳ ನಂತರ ಅದು ಜಾರಿಯಾ ದದ್ದು. ಯಾಕೆಂದರೆ 2000ದಲ್ಲಿ ಮಧ್ಯಪ್ರದೇಶದಿಂದ ಛತ್ತೀಸ್‌ಗಢ ಮತ್ತು ಬಿಹಾರದಿಂದ ಜಾರ್ಖಂಡ್ ಅನ್ನು ವಿಭಜನೆಗೊಳಿಸಿ ಪ್ರತ್ಯೇಕ ರಾಜ್ಯಗಳೆಂದು ಘೋಷಿಸಲಾಯಿತು. ತನ್ಮೂಲಕ ಅಂಬೇಡ್ಕರ್‌ರ ದೂರದೃಷ್ಟಿಗೆ ಮನ್ನಣೆ ನೀಡಲಾಯಿತು. (ಅಂದಹಾಗೆ ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಇರುವ ಹೊಗೇನಕಲ್ ವಿವಾದಕ್ಕೆ ಅಂಬೇಡ್ಕರ್‌ರಲ್ಲಿ ಪರಿಹಾರವಿದೆಯೆಂದರೆ ಅತಿಶಯೋಕ್ತಿಯೆನಿಸದು. ಅದಕ್ಕಾಗಿ ಅಂಬೇಡ್ಕರ್ ಕೃತಿಗಳ ಮೊರೆ ಹೋಗಬೇಕಷ್ಟೆ.)

ಅಂಬೇಡ್ಕರ್‌ರನ್ನು ಮುಚ್ಚಿಡುವ, ಅವರ ಸಾಧನೆಗಳೆಲ್ಲವನ್ನು ಇಡೀ ಜಗತ್ತಿಗೆ ಹೇಳದಿರುವುದರ ಹಿಂದಿರುವ ಹುನ್ನಾರವಾದರೂ ಏನು? ಖಂಡಿತ ಒಂದು ಬೃಹತ್ ಸಮುದಾಯವನ್ನು, ಅದರ ಭವ್ಯ ಇತಿಹಾಸವನ್ನು ಅದರಿಂದ ಮರೆಮಾಚಿ ಮಾನಸಿಕ ಗುಲಾಮಗಿರಿಗೆ ತಳ್ಳುವ ವ್ಯವಸ್ಥಿತ ಸಂಚಿದು. ಈ ನಿಟ್ಟಿನಲ್ಲಿ ಶೋಷಿತ ಸಮುದಾಯ ಅಂತಹ ವ್ಯವಸ್ಥಿತ ಸಂಚಿಗೆ ಬಲಿಯಾಗಬಾರದು.

‘ನಮಗೇಕೆ ಇದನ್ನು ಹೇಳಲಿಲ್ಲ’ ಎಂದು ಮುಂದಿನ ಪೀಳಿಗೆ ಕೇಳುವಂತಾಗಬಾರದು. ಆದಕಾರಣ ಶೋಷಿತ ಸಮುದಾಯ ತಕ್ಷಣ ಎಚ್ಚೆತ್ತುಕೊಳ್ಳಬೇಕಿದೆ. ಅಂಬೇಡ್ಕರ್‌ರ ಭವ್ಯ ಇತಿಹಾಸವನ್ನು, ಪ್ರತಿಯೊಂದು ಸಾಧನೆಯನ್ನು ಇಡೀ ಜಗತ್ತಿಗೆ ಸಾರಿ ಹೇಳಲು ಟೊಂಕಕಟ್ಟಿ ನಿಲ್ಲಬೇಕಿದೆ.

-ರಘೋತ್ತಮ ಹೂ.ಬ. ಚಾಮರಾಜನಗರ, Ph: 09481189116

ಜಾತಿ ಆಧಾರಿತ ಜನಗಣತಿ ಮತ್ತು ಅಂಬೇಡ್ಕರ್ Caste-based Census & Ambedkar:Ho.ba.Raghothama


ಜಾತಿ ಆಧಾರಿತ ಜನಗಣತಿ ಮತ್ತು ಅಂಬೇಡ್ಕರ್

ಜನಗಣತಿ ಹಾಗೆಂದರೆ ಸರಳವಾಗಿ ಜನರನ್ನು ಎಣಿಸುವುದು ಎಂದರ್ಥ. ಹಾಗಂತ ಕುರಿಗಳನ್ನು ಲೆಕ್ಕ ಹಾಕುವ ಹಾಗೆ ಜನರನ್ನು ಲೆಕ್ಕ ಹಾಕಲಾಗು ತ್ತದೆಯೇ? ಖಂಡಿತ ಇಲ್ಲ. ಜನಗಣತಿ ಒಂದು ದೇಶದ ಸಾಮಾಜಿಕ, ಆರ್ಥಿಕ ಅಭಿವೃದ್ಧಿಗೆ ಕನ್ನಡಿ ಹಿಡಿಯುತ್ತದೆ. ಹಿಡಿಯುತ್ತದೆ ಎನ್ನುವು ದಕ್ಕಿಂತ ಕನ್ನಡಿ ಹಿಡಿಯಲೇಬೇಕು ಎನ್ನುವುದು ಹೆಚ್ಚು ಸೂಕ್ತ. ಅದರಲ್ಲೂ ಸಂಕೀರ್ಣ ಸಾಮಾಜಿಕ ವ್ಯವಸ್ಥೆ ಹೊಂದಿರುವ ಭಾರತದಂತಹ ಈ ದೇಶದ ವಾಸ್ತವ ಸಂಗತಿ ಗಳನ್ನು ಜನಗಣತಿ ಬಿಂಬಿಸುವಂತಿರಬೇಕು.ಈ ದೇಶದ ಪ್ರತಿಯೊಬ್ಬರ ಅಗತ್ಯಗಳನ್ನು ಪೂರೈಸಲು ನಿಖರ ಚಿತ್ರಣ ನೀಡುವಂತಿರ ಬೇಕು. ಹಾಗಿದ್ದರೆ ಇಲ್ಲಿಯವರೆಗೆ ನಡೆದ ಜನಗಣತಿ ಗಳು ಇಂತಹ ಅಂಶಗಳನ್ನು ಬಿಂಬಿಸಿಲ್ಲವೇ? ಅಂತಹ ನಿಖರ ಚಿತ್ರಣವನ್ನು ನೀಡಿಲ್ಲವೇ ಎಂದರೆ ಖಂಡಿತ ನೀಡಿವೆ. ಆದರೆ ಅದು 1931ರ ವರೆಗೆ ಮಾತ್ರ! ಯಾಕೆಂದರೆ 1931ರ ವರೆಗೆ ಮಾತ್ರ ಈ ದೇಶದಲ್ಲಿ ಜಾತಿ ಆಧಾರಿತ ಜನಗಣತಿ ನಡೆಯಿತು. ತನ್ಮೂಲಕ ದೇಶದ ಸಾಮಾಜಿಕ ವ್ಯವಸ್ಥೆಗೆ ಸ್ಪಷ್ಟ ಕನ್ನಡಿ ಹಿಡಿಯಿತು.ಅಂತಹ ಕನ್ನಡಿಯಿಂದ ಮೂಡಿದ ಬಿಂಬವನ್ನು ಆಡಳಿತಾರೂಢ ಬ್ರಿಟೀಷರಿಗೆ ತೋರಿಸಿ ‘ನೋಡಿ ನಮ್ಮ ಜನಗಳ ಸ್ಥಿತಿಗತಿ ಹೀಗಿದೆ’ ಎಂದು ಈ ದೇಶದಲ್ಲಿ ಪ್ರಪ್ರಥಮವಾಗಿ ಜಾತಿ ಆಧಾರಿತ ಜನಗಣತಿಯಿಂದ ಪ್ರಯೋಜನ ಪಡೆದ ಜನನಾಯಕನೆಂದರೆ ಡಾ. ಅಂಬೇಡ್ಕರ್ ಮಾತ್ರ. ಅಗತ್ಯವಾಗಿ ಅಂತಹ ಪ್ರಯೋಜನ ಪಡೆದ ಜನಸಮೂಹವೆಂದರೆ ಅಸ್ಪಶರು ಅಥವಾ ದಲಿತರು. ಅಸ್ಪಶರಿಗೆ ಜಾತಿ ಆಧಾರಿತ ಗಣತಿಯಿಂದ ಉಂಟಾದ ಅನುಕೂಲದ ಯಶೋಗಾಥೆಯನ್ನು ಸ್ವತಃ ಅಂಬೇಡ್ಕರ್‌ರೆ ದಾಖಲಿಸಿದ್ದಾರೆ.ಜಾತಿ ಆಧಾರಿತ ಜನಗಣತಿಯ ಬಗ್ಗೆ ಗೊಂದಲವೆದ್ದಿರುವ ಈ ದಿನಗಳಲ್ಲಿ ಅಂತಹ ಗಣತಿಯಿಂದ ಆಗುವ ಪ್ರಯೋಜನವೇನು? ಅಂತಹ ಗಣತಿ ಯಾಕೆ ಬೇಕು? ಅಂತಹ ಗಣತಿಗೆ ಯಾರಿಂದ ವಿರೋಧವಿರುತ್ತದೆ? ಅಂತಹ ವಿರೋಧಕ್ಕೆ ಉತ್ತರವೇನು? ಇತ್ಯಾದಿ ಪ್ರಶ್ನೆಗಳಿಗೆ ಅಂಬೇಡ್ಕರ್‌ರವರ ಬರಹಗಳಲ್ಲಿ ಸ್ಪಷ್ಟನೆ ಸಿಗುತ್ತದೆ. ರಾಜ್ಯ ಸರಕಾರವೇ ಪ್ರಕಟಿಸಿರುವ ಡಾ॥ಜಾತಿಯು ಈಗಲೂ ಸಹ ಭಾರತದ ಸಾಮಾಜಿಕ ಪಾತಳದ ಅಡಿಗಲ್ಲು ಎನ್ನುತ್ತಾರೆ.

ಆದ್ದರಿಂದ ಜಾತಿಯ ದಾಖಲಾತಿ ಯು ಭಾರತೀಯ ಸಮಾಜದ ವಿವಿಧ ಸಾಮಾಜಿಕ ಸ್ತರಗಳಲ್ಲಿ ಉಂಟಾಗಿರುವ ಬದಲಾವಣೆಗಳಿಗೆ ಅತ್ಯುತ್ತಮವಾದ ಕೈಪಿಡಿಯಾಗಿದೆ. ಮುಂದುವರಿದು ಅಂಬೇಡ್ಕರರವರು ಹಿಂದೂ ಎಂಬ ಪದವನ್ನು ಅದರ ಅತ್ಯಂತ ವ್ಯಾಪಕವಾದ ಅರ್ಥದಲ್ಲಿ ಬಳಸಿ ನೋಡಿದರೆ ಪ್ರತಿಯೊಬ್ಬ ಹಿಂದೂವು ಒಂದು ಜಾತಿಯಲ್ಲಿ ಹುಟ್ಟಿದ್ದಾನೆ ಮತ್ತು ಆ ಜಾತಿಯು ಅವನ ಧಾರ್ಮಿಕ, ಸಾಮಾಜಿಕ, ಆರ್ಥಿಕ ಮತ್ತು ಕೌಟುಂಬಿಕ ಜೀವನವನ್ನು ತೊಟ್ಟಿಲಿನಿಂದ ಶ್ಮಶಾನ ಗುಂಡಿಯವರೆಗೆ ನಿರ್ಧರಿಸುತ್ತದೆ.

ಪಾಶ್ಚಿಮಾತ್ಯ ದೇಶಗಳಲ್ಲಿ ಸಮಾಜದ ವಿವಿಧ ಸ್ತರಗಳನ್ನು ನಿರ್ಧರಿಸುವುದರಲ್ಲಿ ಪ್ರಮುಖವಾದ ಅಂಶಗಳೆಂದರೆ ಸಂಪತ್ತು, ವಿದ್ಯಾಭ್ಯಾಸ ಮತ್ತು ಉದ್ಯೋಗ; ಇವು ಅಲ್ಲಿ ಚಲನಾತ್ಮಕವಾಗಿವೆ ಮತ್ತು ಉದಾರ ಭಾವನೆಗಳಿಂದ ಕೂಡಿವೆ. ಇದರಿಂದಾಗಿ ಹುಟ್ಟು ಮತ್ತು ವಂಶಪಾರಂಪರ್ಯತೆಯ ಸ್ಥಾನದ ಬಿಗಿ ಮುಷ್ಟಿಯನ್ನು ಅವು ಸಹವರ್ತನ ಗೊಳಿಸುತ್ತವೆ. ಭಾರತದಲ್ಲಾದರೋ ಧಾರ್ಮಿಕ ಮತ್ತು ಸಾಮಾಜಿಕ ಸ್ಥಾನಮಾನಗಳು ಹಾಗೂ ಸಾಂಪ್ರದಾಯಿಕ ಉದ್ಯೋಗಗಳು ಉಳಿದೆಲ್ಲಾ ಅಂಶಗಳನ್ನು ಬದಿಗೊತ್ತುತ್ತಿವೆ.

ಹೀಗಾಗಿ ಪಾಶ್ಚಿಮಾತ್ಯ ದೇಶಗಳಲ್ಲಿ ಜನರ ಆರ್ಥಿಕ ಅಥವಾ ಉದ್ಯೋಗ ಆಧಾರಿತ ವಿಭಜನೆಯು ಜನಗಣತಿಗಳಲ್ಲಿ ಸೂಚಿತವಾಗುವ ಅಂಕಿ ಅಂಶಗಳ ಕಲೆ ಹಾಕುವಿಕೆಗೆ ನೆರವಾಗುತ್ತವೆ. ಅದೇ ಭಾರತದ ಜನಸಂಖ್ಯೆಯ ವಿಭಜನೆಗೆ ಧರ್ಮ ಮತ್ತು ಜಾತಿಗಳ ವ್ಯತ್ಯಾಸವೇ ಆಧಾರವಾಗುತ್ತದೆ. ರಾಷ್ಟ್ರೀಯವಾಗಿ ಮತ್ತು ಸಾಮಾಜಿಕವಾಗಿ ಜಾತಿ ಎಂಬ ಸಂಸ್ಥೆಯನ್ನು ನಾವು ಯಾವರೀತಿಯಲ್ಲಿ ವ್ಯಾಖ್ಯಾನಿಸಿದರು ಸರಿಯೇ, ಅದನ್ನು ತಳ್ಳಿಹಾಕಿ ಪ್ರಯೋಜನವಿಲ್ಲ; ಎಲ್ಲಿಯವರೆಗೆ ಒಬ್ಬನ ಅಧಿಕೃತ ಮತ್ತು ಸಾಮಾಜಿಕ ವ್ಯಕ್ತಿತ್ವದ ಭೇದಾತ್ಮಕ ಲಕ್ಷಣಗಳನ್ನು ಗುರುತಿಸಲು ಜಾತಿಯನ್ನು ಬಳಸುವುದು ಮುಂದುವರಿಯುತ್ತದೆಯೋ ಅಲ್ಲಿಯವರೆಗೆ ಜನಗಣತಿಯಲ್ಲಿ ಜಾತಿಯನ್ನು ನಮೂದಿಸುವುದು ಅಪೇಕ್ಷಣಿಯ ಮತ್ತು ಹಾಗೆ ನಮೂದಿಸುವುದರಿಂದ ಜಾತಿಯತೆಯನ್ನು ಮುಂದುವರಿಸಿದ ಹಾಗೆ ಆಗುತ್ತದೆ ಎಂಬ ವಾದದಲ್ಲಿ ಯಾವುದೇ ಹುರುಳಿಲ್ಲ ಎನ್ನುತ್ತಾರೆ.

ಮುಂದುವರಿದು ಅಂಬೇಡ್ಕರರವರು ಜನಗಣತಿಯು ಅಸ್ಪಶರನ್ನು ಗುರುತಿಸಿದ ಬಗೆಯನ್ನು ವಿವರಿಸುತ್ತಾ ಹೀಗೆ ಬರೆಯುತ್ತಾರೆ. 1911 ರ ಜನಗಣತಿಯು ಒಂದು ಹೆಜ್ಜೆ ಮುಂದೆ ಹೋಗಿ ಸ್ಪಶ್ಯರಿಂದ ಅಸ್ಪಶರನ್ನು ಹೊರತು ಪಡಿಸಿ ಗುರುತಿಸಲು ಬೇಕಾದ ಹತ್ತು ಸೂತ್ರಗಳನ್ನು ರೂಪಿಸಿತು.

ಈ ಸೂತ್ರಗಳ ಪ್ರಕಾರ ಜನಗಣತಿಯ ಮೇಲ್ವಿಚಾರಕರು ಶೋಷಿತ ಜಾತಿಗಳ ಮತ್ತು ಬುಡಕಟ್ಟುಗಳ ನಮೂದನೆಯನ್ನು ಕೆಳಕಂಡಂತೆ ಮಾಡಿದರು..

1) ಬ್ರಾಹ್ಮಣರ ಶ್ರೇಷ್ಠತೆಯನ್ನು ನಿರಾಕರಿಸುವವರು.

2) ಬ್ರಾಹ್ಮಣ ಅಥವಾ ಇತರ ಹಿಂದೂ ಗುರುಗಳಿಂದ ಮಂತ್ರವನ್ನು ಸ್ವೀಕರಿಸದವರು.

3) ವೇದಗಳ ಶ್ರೇಷ್ಟತೆಯನ್ನು ನಿರಾಕರಿಸುವವರು.

4) ಪ್ರಮುಖ ಹಿಂದೂ ದೇವತೆಗಳನ್ನು ಪೂಜೆ ಮಾಡದವರು.

5) ಕಟ್ಟಾ ಬ್ರಾಹ್ಮಣರಿಂದ ಸೇವೆ ಪಡೆಯದವರು.

6) ಬ್ರಾಹ್ಮಣ ಪೂಜಾರಿಗಳನ್ನೇ ಹೊಂದದವರು.

7) ಸಾಮಾನ್ಯ ದೇವಾಲಯಕ್ಕೆ ಪ್ರವೇಶ ಇಲ್ಲದವರು.

8) ಕೇವಲ ಸ್ಪರ್ಶದಿಂದ ಮಾತ್ರ ಮಾಲಿನ್ಯ ಉಂಟುಮಾಡುವವರು.

9) ಸತ್ತವರನ್ನು ಹೂಳುವವರು ಮತ್ತು.

10) ಗೋವನ್ನು ಪೂಜಿಸದವರು ಮತ್ತು ಗೋಮಾಂಸವನ್ನು ತಿನ್ನುವವರು.

ಹೀಗೇ ಅಂಬೇಡ್ಕರರವರು ಆ ಸೂತ್ರಗಳನ್ನು ಮಂಡಿಸುತ್ತಾರೆ. ಜನಗಣತಿಯ ಈ ಸೂತ್ರದಿಂದ ಅಸ್ಪಶರಿಗಾದ ಪ್ರಯೋಜನವೆಂದರೆ ಅಸ್ಪಶರನ್ನು ಸ್ಪಶ್ಯ ಹಿಂದೂಗಳಿಂದ ಬೇರ್ಪಡಿಸಿತು. ತನ್ಮೂಲಕ ಅಸ್ಪಶ್ಯರಿಗೆ ತಮ್ಮ ಜನಸಂಖ್ಯೆಯ ಆಧಾರದ ಮೇಲೆ ಪ್ರಾತಿನಿಧ್ಯ ಕೇಳಲು ಒಂದು ವೇದಿಕೆಯನ್ನು ಸೃಷ್ಟಿಸಿತು. ಇದರ ಪ್ರಕಾರ 1930 ರಲ್ಲಿ ಭೇಟಿ ನೀಡಿದ ಸೈಮನ್ ಆಯೋಗವು ಅಸ್ಪಶರ ಜನಸಂಖ್ಯೆ 4 ಕೋಟಿ 45 ಲಕ್ಷ ಎಂದಿದೆ.

ಮುಂದೆ ಇದರ ಆಧಾರದ ಮೇಲೆ ಅಂಬೇಡ್ಕರ್ ಶಾಸನ ಸಭೆಗಳಲ್ಲಿ ಅಸ್ಪಶರಿಗೆ ಸೂಕ್ತ ಪ್ರಾತಿನಿಧ್ಯ ನೀಡಬೇಕೆಂದು ಸೈಮನ್ ಆಯೋಗಕ್ಕೆ ಮನವಿ ಸಲ್ಲಿಸಿದ್ದು, ದುಂಡುಮೇಜಿನ ಸಭೆಗಳಲ್ಲಿ ಪ್ರತ್ಯೇಕ ಮತದಾನ ಪದ್ಧತಿ ಬೇಕೆಂದು ಒತ್ತಾಯಿಸಿದ್ದು, ಪರಿಣಾಮವಾಗಿ 1932 ರ ಪೂನಾ ಒಪ್ಪಂದದಲ್ಲಿ ಅಸ್ಪಶ್ಯರಿಗೆ ಜಂಟಿ ಚುನಾಯಿತ ವ್ಯವಸ್ಥೆ ಜಾರಿಯಾದದ್ದು, ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಜಾರಿಯಾದದ್ದು, ಈ ಎಲ್ಲಾ ಅಂಶಗಳು 1935ರ ಭಾರತ ಸರಕಾರ ಕಾಯಿದೆಯಲ್ಲಿ ಶಾಸನವಾಗಿ ರೂಪಿತಗೊಂಡು ಜಾರಿಗೆ ಬಂದಿದ್ದು ಈಗ ಇತಿಹಾಸ.

ಅಸ್ಪಶರ ಕರಾಳ ಇತಿಹಾಸದ ಪುಟಗಳಲ್ಲಿ ಇಂತಹ ಭವ್ಯ ಇತಿಹಾಸದ ಪುಟ ಸೃಷ್ಟಿಯಾದದ್ದು, ಅವರ ಹಣೆಬರಹ ಬದಲಾದದ್ದು ಖಂಡಿತ ಜಾತಿ ಆಧಾರಿತ ಜನಗಣತಿಯಿಂದ. ಅವರ ಸಮಗ್ರ ಸಾಮಾಜಿಕ ಆರ್ಥಿಕ ಸ್ಥಿತಿಗತಿಯನ್ನು ಅದು ವ್ಯವಸ್ಥೆಗೆ ಸ್ಪಷ್ಟವಾಗಿ ಬಿಂಬಿಸಿತು. ತನ್ಮೂಲಕ ಅಸ್ಪಶರ ಪುರೋಭಿವೃದ್ಧಿಗೆ ನಾಂದಿ ಹಾಡಿತು. ದುರಂತವೆಂದರೆ 1931 ರವರೆಗೂ ನಡೆದ ಈ ಜಾತಿ ಆಧಾರಿತ ಜನಗಣತಿ ನಂತರ ಇಲ್ಲಿಯವರೆಗೆ ಯಾಕೆ ನಡೆದಿಲ್ಲ? ಅದರಲ್ಲೂ ಸ್ವಾತಂತ್ರ್ಯ ಭಾರತದಲ್ಲಿ ಒಮ್ಮೆಯೂ ಜಾತಿ ಆಧಾರಿತ ಜನಗಣತಿ ನಡೆದಿಲ್ಲಾ ಯಾಕೆ? ಏನೆ ಆಗಲಿ ಈ ಎಲ್ಲಾ ಪ್ರಶ್ನೆಗಳಿಗೆ ಹೆಚ್ಚು ಕಡಿಮೆ ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಈ ದೇಶವನ್ನು ಆಳಿರುವ ಕಾಂಗ್ರೆಸ್ ಮತ್ತು ಇತರ ಸ್ಥಾಪಿತ ಹಿತಾಸಕ್ತಿಗಳ ಪರವುಳ್ಳ ಪಕ್ಷಗಳು ಮತ್ತು ವ್ಯಕ್ತಿಗಳೇ ಉತ್ತರಿಸ ಬೇಕು.

1931 ರವರೆಗಿನ ಜನಗಣತಿಯಿಂದ ಅಸ್ಪಶರು ಪ್ರಯೋಜನ ಪಡೆದ ಹಾಗೆ ಎಲ್ಲಿ ಇತರೆ ಹಿಂದುಳಿದ ವರ್ಗಗಳು ಅರ್ಥಾತ್ ಓ.ಬಿ.ಸಿಗಳು ಅದೇ ದಾರಿಯಲ್ಲಿ ಸಾಗುತ್ತಾರೋ ಎಂದು ಸ್ಥಾಪಿತ ಹಿತಾಸಕ್ತಿಗಳು ಎಚ್ಚೆತ್ತುಕೊಂಡವೆ? ಆ ನಿಟ್ಟಿನಲ್ಲಿ ಜನಗಣತಿಯ ಹೃದಯದಂತಿದ್ದ ಜಾತಿ ಆಧಾರ ಎಂಬ ಅಂಶವನ್ನು ಇಂತಹ ಹಿತಾಸಕ್ತಿಗಳು ಕಿತ್ತು ಬಚ್ಚಿಟ್ಟವೆ? ಅಥವಾ ಅಸಂಘಟಿತ ಓ.ಬಿ.ಸಿಗಳಿಗೆ ಇದರ ತಿರುಳು ಅರ್ಥವಾಗಲಿಲ್ಲವೇ? ಖಂಡಿತ ಇವೆಲ್ಲಾ ಕ್ರೂರ ಅನುಮಾನ ಹುಟ್ಟಿಸುವ ಪ್ರಶ್ನೆ ಗಳು ಮತ್ತು ಆ ಪ್ರಶ್ನೆಗಳಿಗೆ ಉತ್ತರಿಸ ಬೇಕಾದವರು ಮತ್ತದೆ ಪಕ್ಷಗಳು ಮತ್ತು ವ್ಯಕ್ತಿಗಳು.

ಮಂಡಲ್ ವರದಿ ಜಾರಿಯಾಗಿರುವ ಈ ದಿನಗಳಲ್ಲಿ ಖಂಡಿತ ಓ.ಬಿ.ಸಿಗಳಿಗೆ ಲಭ್ಯವಾಗಬೇಕಾದ ಪ್ರಯೋಜನಗಳು ಇನ್ನಷ್ಟು ವ್ಯವಸ್ಥಿತವಾಗಿ, ಪರಿಣಾಮಕಾರಿಯಾಗಿ ತಲುಪಬೇಕು. ಅದಕ್ಕಾಗಿ ಜಾತಿ ಆಧಾರಿತ ಜನಗಣತಿ ಬೇಕೇ ಬೇಕು. ಈ ನಿಟ್ಟಿನಲ್ಲಿ ತಡವಾಗಿಯಾದರೂ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರ ಹೆಜ್ಜೆ ಇಡಲಿ. ಅರವತ್ತು ವರ್ಷಗಳಿಂದ ಆಗಿರುವ ವಂಚನೆಗೆ ಈಗಲಾದರು ಪ್ರಾಯಶ್ಚಿತ ಸಿಗಲಿ. ತನ್ಮೂಲಕ ಈ ಬಾರಿ ಜಾತಿ ಆಧಾರಿತ ಜನಗಣತಿ ನಡೆಯಲೇಬೇಕು ಎಂಬುದಷ್ಟೆ ಸದ್ಯದ ಕಳಕಳಿ. ಹಾಗೇ ಆಗುತ್ತದೆಯೇ? ಕಾದು ನೋಡೋಣ

* ರಘೋತ್ತಮ ಹೊ. ಬ. ಚಾಮರಾಜನಗರ

Raghothama, Chamarajanagar

ಶುಕ್ರವಾರ – ಮೇ -28-2010

refer:varthabharathi

Who did Gandhi fight for? Ho.Ba.Raghothama Chamarajanagar


Continue reading