Posts Tagged ‘ನಾಗಸಿದ್ಧಾರ್ಥ ಹೊಲೆಯಾರ’

“ನಾಗಸಿಧ್ಧಾರ್ಥ ಹೊಲೆಯಾರ್”, ವೈಚಾರಿಕ ಸಾಹಿತ್ಯದ ಹೊಸನೀರು


ಖ್ಯಾತ ತತ್ವಶಾಸ್ತ್ರಜ್ಙ ಹೆಚ್.ಡ್ರಮಂಡ್ ವೈಚಾರಿಕತೆಗೆ ಸಂಬಂಧಿಸಿದಂತೆ ಒಂದೆಡೆ ಹೀಗೆ ಹೇಳುತ್ತರೆ. ಬಾಬಾಸಾಹೇಬ್ ಅಂಬೇಡ್ಕರ್ರವರು ತಮ್ಮ “ಜಾತಿ ನಿಮರ್ೂಲನೆ” ಎಂಬ ಕೃತಿಯ ಮುನ್ನುಡಿಯಲ್ಲಿ ಡ್ರಮಂಡ್ರ ಈ  ಸಾಲುಗಳನ್ನು ಬಳಸಿಕೊಳ್ಳುತ್ತ್ತಾರೆ ಆ ಅದ್ಭುತ ಸಾಲುಗಳು ಇಂತಿವೆ.”ವಿಚಾರ ಮಾಡಲೊಲ್ಲದವನು ಮತಾಂಧ, ವಿಚಾರ ಮಾಡಲರಿಯದವನು ಮೂರ್ಖ, ವಿಚಾರ ಮಾಡಲಂಜುವವನು ಗುಲಾಮ”. ಬಹುಶಃ ವೈಚಾರಿಕತ ೆಅಧಾರಿತ ಸಮಾಜದ ದೃಷ್ಡಿಕೋನ ಹೇಗಿರಬೇಕೆಂಬುದಕ್ಕೆ  ಡ್ರಮಂಡ್ರ ಈ ಸಾಲುಗಳು ಕನ್ನಡಿ ಹಿಡಿಯುತ್ತವೆ. ಇಂದು  ಚಾಮಾರಾಜನಗರದಲ್ಲಿ ಬಿಡುಗಡರೆಯಾಗುತ್ತಿರುವ  ನಾಗಸಿದ್ಧಾರ್ಥ ಹೊಲೆಯಾರರ ‘ಬಾಬಾ ಸಾಹೇಬ್ ಡಾ.ಅಂಬೇಡ್ಕರ್ ದೃಷ್ಟಿಯಲ್ಲಿ ಕಲಿಯುಗ” ಎಂಬ ಕೃತಿ ಅಂತಹ ವೈಚಾರಿಕತೆಯ ಸಣ್ಣ ಬಿಂಬ ಎನ್ನಲಡ್ಡಿಯಿಲ್ಲ. ಈ ಹಿನ್ನೆಲೆಯಲ್ಲಿ ನಾಗಸಿದ್ಧಾರ್ಥ ಹೊಲೆಯಾರರ ಬದುಕು ಬರಹದ ಸಣ್ಣ ಚಿತ್ರಣ ಇಲ್ಲಿದೆ.
“ನಾಗಸಿದ್ಧಾರ್ಥ ಹೊಲೆಯಾರ್” ಎಂಬ ಕಾವ್ಯನಾಮದಿಂದ ಸಾಹಿತ್ಯ ಲೊಕಕ್ಕೆ ಪರಿಚಯವಾಗುತ್ತಿರುವ ಇವರ ಮೂಲ ಹೆಸರು ರಾಜಶೇಖರಮೂತರ್ಿ. ವೃತ್ತಿಯಲ್ಲಿ ಉಪತಹಸೀಲ್ದಾರರು, ಪ್ರವೃತ್ತಿಯಲಿ ಲೇಖಕ. ಲೇಖಕ ಅನ್ನುವದಕ್ಕಿಂತ ಸಂಶೋದಕ. ಆ ಸಂಶೋಧನೆಗೆ ಅಂಬೇಡ್ಕರ್ವಾದದ ನೆಲೆಗಟ್ಟಿದೆ. ಶೊಷಿತರ ಪರ ಕಾಳಜಿ ಇದೆ. ಸಾಮಾಜಿಕ ಹೊಣೆಗಾರಿಕೆಯ ನಿರತಂರ ತುಡಿತವಿದೆ.
ಸಿದ್ಧಾರ್ಥ ಹೊಲೆಯಾರರ ಜನ್ಮ ಸ್ಥಳ ಚಾಮಾರಾಜನಗರ ತಾಲ್ಲೂಕಿನ ಮಂಗಲ ಹೊಸುರು ಗ್ರಾಮ. ತಂದೆ ಎಸ್ ಬಸವಯ್ಯ, ತಾಯಿ ದೇವಾಜಮ್ಮ . ಇವರದು ಸುಶಿಕ್ಷಿತ ದಲಿತ ಕುಟುಂಬ. ಅಂತಹ ಶಿಕ್ಷಣದ ಸಂಸ್ಕಾರ ಇವರಿಗೆ ಅದುದರಿಂದಲೇ ಬಾಲ್ಯದಿಂದಲೆ ಇವರದು ಪ್ರಶ್ನಿಸುವ ಮನೋಭಾವ. ಕವನಗಳನ್ನು ಕಥೆಗಳನ್ನು ಬರೆಯುವ ಹುಚ್ಚು. ಸಮಾಜದ ಬದಲಾವಣೆಗೆ ತಹತಹಿಸುವ ಗುಣ. ಇಂತಹ ಗುಣವೇ ಇವರನ್ನು ನವದೆಹಲಿಯ ಖ್ಯಾತ ಸಂಶೋಧಕ ಶ್ರೀ ಎನ್. ಕೆ. ಶಮರ್ಾಜಿಯವರ ಸಂಪರ್ಕ ಪಡೆಯುವಂತೆ ಮಾಡಿದ್ದು. “ದಲಿತ್ ವಾಯ್ಸ್ ‘ ಆಂಗ್ಲ ಮಾಸಿಕದಲ್ಲಿ ಇವರ ಒಂದು ಪತ್ರ ಪ್ರಕಟವಾದದ್ದು, ಆ ಪತ್ರದ ಜಾಡು ಹಿಡಿದು ಶ್ರೀ ಎನ್. ಕೆ. ಶಮರ್ಾರವರು ಸಿದ್ಧಾರ್ಥ ಹೊಲೆಯಾರರನ್ನು ತಮ್ಮ ತೆಕ್ಕೆಗೆ ಸೆಳೆದು ಕೊಂಡದ್ದು, ಸಿದ್ದಾರ್ಥ ಹೊ;ಲೆಯಾರರ ವೈಚಾರಿಕತೆಗೆ ನೀರೆರೆದದ್ದು, ಬಹುಶಃ ವ್ಯಕ್ತಿಯೊಬ್ಬರ ಜೀವನಕ್ಕೆ ಸಿಗಬಹುದಾದ ನೈಜ ತಿರುವು ಎನ್ನಬಹುದು. ಸ್ವತಃ ಸಿದ್ಧಾರ್ಥ ಹೊಲೆಯಾರರೆ ” ನಾನೊಬ್ಬ ಲೇಖಕನಾಗಲು ನನಗೆ ಅಂಬೇಡ್ಕರ್ ವಾದದ ದೀಕ್ಷೆ ನೀಡಿದ ನನ್ನ ಪರಮ ಪೂಜ್ಯ ಗುರುಗಳಾದ ನವದೆಹಲಿಯ ಶ್ರೀ ಎನ್ ಕೆ ಶಮರ್ಾರವರೆ ಕಾರಣ ಎನ್ನುತ್ತಾರೆ.  ಪ್ರಸ್ತುತ ಇಂದು ಬಿಡುಗಡೆಯಾಗುತ್ತಿರುವ ಕೃತಿ ಅಂತಹ ಅಂಬೇಡ್ಕರ್ವಾದದ ದೀಕ್ಷೆಯಿಂದ ಒಡಮೂಡಿದ ಕೃತಿ ಎಂದರೆ ಅತಿಶಯೋಕ್ತಿಯೇನಲ್ಲ.
ಹಾಗಿದ್ದರೆ ಈ ಕೃತಿಯಲ್ಲಿ ಅಂತಹದ್ದೇನಿದೆ? ಲೇಖಕರು ಪ್ರಾರಂಭದಲ್ಲೇ ಹೇಳುವ ಹಾಗೆ” ವಿಜ್ಞಾನ ಮತ್ತು ತಂತ್ರ ಜ್ಞಾನವನ್ನು ಅಜ್ಞಾನದ ಪ್ರಚಾರಕ್ಕೆ ದುರ್ಬಳಕೆ ಮಾಡುತ್ತಿರುವುದರಿಂದ ವೀಕ್ಷಕರ ಮೇಲಾಗುತ್ತಿರುವ ದುಷ್ಪರಿಣಾಮದ ಹಿನ್ನೆಲೆಯಲ್ಲಿ ಕಲಿಯುಗದ ಬಗ್ಗೆ ಜನರಲ್ಲಿರುವ ಮೌಢ್ಯ ದ ಬಗ್ಗೆ ಕೆಲವರಲ್ಲಾದರೂ ಜಾಗೃತಿಮೂಡಿಸುವ ಉದ್ದೇಶದಿಂದ ….” ಹೌದು , ಇಲ್ಲಿ ಮೌಢ್ಯದ ವಿರುದ್ಧ ಚಾಟಿಯನ್ನೆ ಬೀಸಲಾಗಿದೆ. ಅದಕ್ಕಿಂತಲೂ ಮುಖ್ಯವಾಗಿ ಲೇಖಕರು ಭಾರತದ ಇತಿಹಾಸವನ್ನು ಪುನರ್ರಚಿಸುವ ಅಗತ್ಯವನ್ನು ಒತ್ತಿ ಹೇಳುತ್ತಾರೆ. “ಬೇಟೆಗಾರರಿಂದ ರಚಿತವಾದ  ಇತಿಹಾಸ” ಆ ಬೇಟೆಗಾರರಿಂದ ತಪ್ಪಿಸಿಕೊಂಡ ಹುಲಿಯ ಇತಿಹಾಸ ಆಗಿರಲು ಹೇಗೆ ಸಾಧ್ಯ? ಎಂದು ಈ ದೇಶದ ಮೂಲನಿವಾಸಿಗಳ ಹಿನ್ನೆಲಿಯಲ್ಲಿ ಭಾರತದ “ಮನು ಪ್ರಣೀತ ” ಇತಿಹಾಸವನ್ನು ಪ್ರಶ್ನಿಸುತ್ತಾರೆ.  ಹಾಗೆ ಪ್ರಶ್ನಿಸುವ ಅವರು  ಸುಮ್ಮನೇ ಕೂರುವುದಿಲ್ಲ. ಇತಿಹಾಸಕ್ಕೆ  ಹೊಸ ಬೆಳಕು ಚೆಲ್ಲು ವ ಪ್ರಯತ್ನವನ್ನೂ ಕೂಡ ಮಾಡುತ್ತಾರೆ. ಉದಾಹರಣೆಗೆ “ನಾಗ ಬೌದ್ಧ ಹೊಲೆಯರ ಇತಿಹಾಸ” ಎಂಬ ಲೇಖನದಲ್ಲಿ,  ” ಹೊಲ” ಎಂದರೆ “ಭೂಮಿ,” “ಹೊಲೆಯ” ಎಂದರೆ “ಹೊಲದ ಒಡೆಯ” ಎಂದು ಹೊಲೆಯ  ಎಂಬ ಪದಕ್ಕೆ ಹೊಸ ಅರ್ಥವನ್ನೇ ನೀಡುತ್ತಾರೆ. ಮತ್ತು ಇದಕ್ಕೆ ಸೂಕ್ತ ಆಧಾರವನ್ನು ಸಹ ನೀಡುತ್ತಾರೆ, ಮತ್ತೊಂದೆಡೆ ಅಂಬೇಡ್ಕರ್ರವರು “ಅಸ್ಪೃಶ್ಯರು ಮೂಲತಃ ನಾಗ ಜನಾಂಗದವರು” ಎಂದಿರುವುದಕ್ಕೆ ಸಮರ್ಥನೆಯಾಗಿ ಲೇಖಕರು, “ನಾಗರೀಕ”, “ನಾಗರೀಕತೆ”, “ನಗರ” ಈ ಪದಗಳು “ನಾಗ ಜನಾಂಗ ದ  ವ್ಯಕಿ”್ತಯನ್ನು, “ನಾಗ ಜನಾಂಗದ ಸಂಸ್ಕೃತಿ”ಯನ್ನು, ಮತ್ತು “ಅವರು ವಾಸಿಸುತ್ತಿದ್ದ ಸ್ಥಳ”ಗಳನ್ನು ಸೂಚಿಸುತ್ತಿದ್ದವು ಎನ್ನುತ್ತಾರೆ.
ಒಟ್ಟಾರೆ ಹೊಲೆಯಾರರು ತಮ್ಮ ಈ ಕೃತಿಯಲ್ಲಿ ಇತಿಹಾಸವೆಂಬ ಗೀಜಗನ ಗೂಡಿಗೆ ಕೈ ಹಾಕುವ ಪ್ರಯತ್ನ ಮಾಡಿದ್ದಾರೆ. ಉದಹರಣೆಗೆ “ಬೌದ್ಧ ಬಿಕ್ಕು ಯೇಸು ಕ್ರಿಸ್ತ” ಎಂಬ ಲೇಖನ ಅಂತಹ ಪ್ರಯತ್ನಗಳಲ್ಲೊಂದು. ಅದಲ್ಲದೇ “ಪೇಜಾವರ ಶ್ರೀಗಳಿಗೊಂದು ಬಹಿರಂಗ ಪತ್ರ” ಎಂಬ ಲೇಖನದಲ್ಲಿ, “ಬುದ್ಧ, ಬೌದ್ಧ ಬಿಕ್ಕು ಮತ್ತು ಬಿಕ್ಕುಣಿಯರನ್ನು ಧರ್ಮಸ್ಥಳ ಮಂಜುನಾಥ, ತಿರುಪತಿಯ ಬಾಲಾಜಿ, ಕೇದಾರನಾಥ, ಶ್ರೀ ರಂಗನಾಥ,ಪುರಿಯ ಜಗನ್ನಥ, ಕಾಶಿ ವಿಶ್ವನಾಥ, ಕಂಚಿ ಕಾಮಕ್ಷಿ, ಮಧುರೈ ಮೀನಾಕ್ಷಿ, ಎಲ್ಲಮ್ಮ, ಪೊಲ್ಲಮ್ಮ, ಮಾರಮ್ಮ  ಇತ್ಯಾದಿ ರೂಪಗಳಲ್ಲಿ ಪೂಜಿಸಲಾಗುತ್ತಿದೆ” ಎಂದು ಇತಿಹಾಸದ  ಬುಡವನ್ನೆ ಅಲುಗಾಡಿಸುವ ಪ್ರಯತ್ನ ಮಾಡಿದ್ದಾರೆ.
ಇದಿಷ್ಟೆ ಅಲ್ಲದೆ ಅಸ್ಪೃಶ್ಯರ ಮಧ್ಯೆ ಇರುವ “ಎಡಗೈ-ಬಲಗೈ” ಸಮಸ್ಯೆಯ ಬಗ್ಗೆ ಮಾನವೀಯ ಕಳಕಳಿಯ       ಹಿನ್ನೆಲೆಯಲ್ಲಿ ಬರೆಯುವ ಲೇಖಕರು , ಸಮಾಜದ ಅತ್ಯಂತ ತಳಸಮುದಾಯವಾದ ಜಲಗಾರರ ಸಮಸ್ಯೆಗಳನ್ನು ಎತ್ತಿಕೊಳ್ಳುತ್ತಾ ” ಚಂದ್ರ ಲೋಕವೆಂಬ ನಿಜರ್ೀವ ಲೋಕದ ಬಗ್ಗೆ ತರಲೆಕೆಡಿಸಿಕೊಳ್ಳುವ ವಿಜ್ಞಾನಿಗಳು ಮ್ಯಾನ್ ಹೋಲ್ಗಳನ್ನು ಶುಚಿಗೊಳಿಸಲು ಇನ್ನೂ ಏಕೆ ಒಂದೂ ಯಂತ್ರವನ್ನು ಕಂಡುಹಿಡಿದಿಲ್ಲ? ಎಂದು ಆತಂಕದಿಂದ ಪ್ರಶ್ನಿಸುತ್ತಾರೆ.  ಆ ನಿಟ್ಟಿನಲಿ ಮಾಹಿತಿತಂತ್ರಜ್ಞಾನ (ಐ. ಟಿ), ಜೈವಿಕ ತಂತ್ರಜ್ಞಾನ(ಬಿ,ಟಿ) ಯ ಹಾಗೆ ಶೌಚ ತಂತ್ರಜ್ಞಾನ (ಣಛಿಚಿತಜಟಿರರ ಖಿಜಛಿಟಿಠಟಠರಥಿ)  ಕೂಡ ಅಭಿವೃದ್ಧಿಯಾಗಬೇಕು ಎಂಬ ಗಂಭೀರ ಸಲಹೆಯನ್ನು ನೀಡುತ್ತಾರೆ.
ಒಟ್ಟಾರೆ ನಾಗಸಿದ್ಧಾರ್ಥ ಹೊಲೆಯಾರರ ಈ ಕೃತಿ ಮಾನವ ಪರ ಕಾಳಜಿಯ ಕೃತಿಯಾಗಿದೆ. ಅದಕ್ಕೆ ಹೊಸ ದಿಕ್ಕು ಸೂಚಿಸುವ ಛಾತಿ ಇದೆ.  ಎಲ್ಲವನ್ನು ನೇರವಾಗಿ ಹೇಳುವ ದಿಟ್ಟ ಗುಣ ಇದೆ. ಈ ಸಂಧರ್ಭದಲ್ಲಿ  ಖ್ಯಾತ ಚಿಂತಕ ಜೆ. ಆರ್. ಲಾವೆಲ್ರ ಹೇಳಿಕೆ ಇಲ್ಲಿ ಉಲ್ಲೇಖನೀಯ, “ನಾವು ಮಾತನಾಡುತ್ತೇವೆ ನಮ್ಮನ್ನು ಎಲ್ಲರೂ ಕೇಲಿಸಿಕೊಳ್ಳಲಿ. ಇದರಿಂದ  ಪ್ರಪಂಚದ ವ್ಯವಸ್ಥೆ ಬಿರುಕು ಬಿಟ್ಟರೂ ಬಿಡಲಿ, ನಾವು ಒಂದು ಶಬ್ಧವನ್ನೂ ಬಚ್ಚಿಡುವುದಿಲ್ಲ. ಆಡಿದ ಒಂದು ಅಕ್ಷರವನ್ನೂ ಹಿಂದಕ್ಕೆ ತೆಗೆದು ಕೊಳ್ಳುವುದಿಲ್ಲ. ಅಂಜುಬುರುಕರು ಅಂಜುತ್ತಿರಲಿ , ಹೇಡಿಗಳು ಹಿಂಜರಿಯಲಿ, ಸಂಪ್ರದಾಯವಾದಿಗಳು ಎದುರಾಗಿ ನಿಲ್ಲಲಿ, ನಾವು ಯಾವುದನ್ನು ಧೈರ್ಯದಿಂದ ವಿಚಾರಿಸಿದ್ದೇವೆಯೋ ಅದನ್ನು ಹೇಳುವ ಧೈರ್ಯವು ನಮಗಿದೆ.”                                                                                                        ನಾಗಸಿದ್ಧಾರ್ಥ ಹೊಲೆಯಾರರು ಎಲ್ಲವನ್ನು ಧೈರ್ಯದಿಂದ ಹೇಳಿದ್ದಾರೆ. ಅವರು ಯಾವುದನ್ನೂ ಬಚ್ಚಿಟ್ಟಿಲ್ಲ. ಹಿಂಜರಿಯಲು ಹೋಗಿಲ್ಲ      , ಅಂಜಿಕೆಯಂತೂ ಇಲ್ಲವೇ ಇಲ್ಲ. ಆದರೆ ಎಲ್ಲರೂ ಕೇಳಿಸಿ ಕೊಳ್ಳಲಿ ಎಂಬ ಕಳಕಳಿ ಇದೆ. ತನ್ನ ವಿಚಾರಗಳನ್ನು  ಎಲ್ಲರಿಗೂ ಮುಟ್ಟಿಸಬೇಕೆಂಬ ಅಧಮ್ಯ ಉತ್ಸಾಹವಿದೆ. ಮತ್ತು ಹಾಗಯೇ ಸಮಯ ಕೂಡ ಇದೆ ಯಾಕೆಂದರೆ ಸಿದ್ಧಾರ್ಥ ಹೊಲೆಯಾರರಿಗೆ ಈಗಿನ್ನೂ ನಲವತ್ತು.
ಒಟ್ಟಿನಲಿ ನಾಗಸಿದ್ಧಾರ್ಥ ಹೊಲೆಯಾರರ ” ಬಾಬಾಸಾಹೇಬ್ ಡಾ.ಅಂಬೇಡ್ಕರ್ ದೃಷ್ಟಿಯಲ್ಲಿ ಕಲಿಯುಗ” ಎಂಬ ಈ ಕೃತಿ ವೈಚಾರಿಕ ಸಾಹಿತ್ಯಕ್ಕ್ಕೆ ಹರಿದು ಬರುತ್ತಿರುವ ಸಣ್ಣ ತೊರೆ. ಓದುಗರು ಅದರ ಒಂದೊಂದು ಗುಟುಕನ್ನೂ ಮಾನವೀಯ ಕಳಕಳಿಯ ಹಿನ್ನೆಲೆಯಲ್ಲಿ ಸ್ವೀಕರಿಸಬೇಕಾಗಿದೆ. ಕಡೆಯದಾಗಿ ಕನ್ನಡ ಮರಾಠಿಯ ಮೊದಲ ದಲಿತ ಲೇಖಕ ಎಂದು ಗುರುತಿಸಲ್ಪಡುವ ದೇವರಾಯ ಹಿಂಗಳೆಯವರು ಅಂಬೇಡ್ಕರರನ್ನು ಕುರಿತು ಒಂದು ಕವನ ಬರೆದಿದ್ದಾರೆ. ಅದರ ಒಂದೆರಡು ಸಾಲುಗಳು  ಇಂತಿವೆ.
ಅವನು ಸೂರ್ಯ
ನಾವು ಅವನ ತುಣುಕುಗಳು
ಲೇಖಕ ನಾಗಸಿದ್ಧಾರ್ಥ ಹೊಲೆಯಾತರರು ಅಂತಹ ತುಣುಕಿನ ಒಂದಂಶವಾಗಿ ಬೆಳಗಲಿ, ಕನ್ನಡ ಸಾಹಿತ್ಯದ ಆಸ್ತಿಯಾಗಲಿ ಎಂಬುದಷ್ಟೆ ಈ ಲೇಖನದ ಕಳಕಳಿ.
-ರಘೋತ್ತಮ ಹೊ.ಬ

ಚಾಮರಾಜನಗರ-571313
ಮೊಬೈಲ್-9481189116