Posts Tagged ‘ಮಾದಿಗ’

ಕಾಂಗ್ರೆಸ್ ಸೋಲಿನ ನಂತರ ಭುಗಿಲೆದ್ದ ಭಿನ್ನಮತ


ಗುರುವಾರ – ಜನವರಿ -06-2011

ತುಮಕೂರು, ಜ.5: ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಪ್ರತಿನಿಧಿಸಿರುವ ಕ್ಷೇತ್ರವೂ ಸೇರಿದಂತೆ ಕಾಂಗ್ರೆಸ್ ಜಿಲ್ಲೆಯಲ್ಲಿ ಹೀನಾಯ ಸೋಲು ಕಂಡಿರುವ ಬೆನ್ನಲ್ಲೆ ಕೆಪಿಸಿಸಿ ಅಧ್ಯಕ್ಷರು ಹಾಗೂ ಡಿಸಿಸಿ ಅಧ್ಯಕ್ಷರ ಪದಚ್ಯುತಿಗೆ ಒತ್ತಾಯಗಳು ಕೇಳಿಬರುತ್ತಿದ್ದು, ಜಿಲ್ಲಾ ಕಾಂಗ್ರೆಸ್‌ನಲ್ಲಿ ಭಿನ್ನಮತ ಭುಗಿಲೇಳುವ ಲಕ್ಷಣಗಳು ಕಂಡು ಬರುತ್ತಿವೆ.

 

ಜಿಲ್ಲೆಯ 57 ಜಿ.ಪಂ. ಕ್ಷೇತ್ರಗಳಲ್ಲಿ 2005ರ ಚುನಾವಣೆಯಲ್ಲಿ 26 ಕ್ಷೇತ್ರಗಳಲ್ಲಿ ಜಯಗಳಿಸಿ ಎರಡು ಬಾರಿ ಅಧ್ಯಕ್ಷ ಸ್ಥಾನವನ್ನು ತನ್ನದಾಗಿಸಿ ಕೊಂಡಿದ್ದ ಕಾಂಗ್ರೆಸ್ ಈ ಬಾರಿ ಕೇವಲ 10 ಸ್ಥಾನಗ ಳನ್ನು ಮಾತ್ರ ಗೆಲ್ಲಲು ಸಾಧ್ಯವಾಗಿದ್ದು, ಮಧುಗಿರಿ ತಾಲೂಕು ಒಂದರಲ್ಲಿಯೇ ನಾಲ್ಕು ಸ್ಥಾನಗಳನ್ನು ಗೆದ್ದರೆ, ಪಾವಗಡ, ತಿಪಟೂರು, ತುರುವೇಕೆರೆ, ಕೊರಟಗೆರೆ, ತುಮಕೂರು ಗ್ರಾಮಾಂತರ ಮತ್ತು ಶಿರಾ ತಾಲೂಕುಗಳಲ್ಲಿ ತಲಾ ಒಂದೊಂದು ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ.

 

ಜಿಲ್ಲೆಯಲ್ಲಿ ಜೆಡಿಎಸ್ ಅಲೆಯ ನಡುವೆಯೂ ಮಧುಗಿರಿಯಲ್ಲಿ ಸಾಧ್ಯವಾಗಿದ್ದು, ಇತರೆಡೆಗಳಲ್ಲಿ ಏಕೆ ಸಾಧ್ಯವಾಗಿ ಲ್ಲವೆಂಬ ಅನುಮಾನ ಪಕ್ಷದ ಮುಖಂಡರಲ್ಲಿ ಮೂಡಿದ್ದು, ಕೆಪಿಸಿಸಿ ಅಧ್ಯಕ್ಷರ ಕೊರಟಗೆರೆ ಕ್ಷೇತ್ರದಲ್ಲಿ ಕೇವಲ ಒಂದು ಸ್ಥಾನ ಪಡೆದಿರುವುದು ಪರಮೇಶ್ವರ್ ವಿರೋಧಿಗಳ ಬಾಯಿಗೆ ಆಹಾರ ಒದಗಿಸಿದಂತಾಗಿದೆ.

 

ಜಿ.ಪಂ. ಚುನಾವಣೆಗೂ ಮುನ್ನ ನಡೆದ ಸನ್ಮಾನ ಸಮಾರಂಭದಲ್ಲಿ ನೀಡಿದ ಮಾತಿನಂತೆ ಜಿಲ್ಲೆಯ ಮೀಸಲು ಕ್ಷೇತ್ರಗಳಲ್ಲಿ ಮಾದಿಗರಿಗೆ ಹೆಚ್ಚಿನ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಅವಕಾಶ ನೀಡಿದ್ದರು. ಅಂದು ಪರಮೇಶ್ವರ್ ಕೈ ಬಲಪಡಿಸುವ ಬಗ್ಗೆ ಮಾತ ನಾಡಿದ್ದ ನಾಯಕರು ಇಂದು ಎಲ್ಲಿಗೆ ಹೋದರು ಎಂಬುದೇ ತಿಳಿಯದಾಗಿದ್ದು, ಪಾವಗಡದ ಬ್ಯಾಡ ನೂರು ಮತ್ತು ಮಧುಗಿರಿಯ ಮಿಡಿಗೇಶಿ ಕ್ಷೇತ್ರಗ ಳನ್ನು ಹೊರತು ಪಡಿಸಿ ಇನ್ಯಾವುದೇ ಮೀಸಲು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿಲ್ಲ. ಉಳಿದೆಡೆ ಜೆಡಿಎಸ್ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.

 

ಈ ಎಲ್ಲಾ ಬೆಳವಣಿಗೆಯ ಹಿನ್ನೆಲೆಯಲ್ಲಿ ಮಾಜಿ ವಿಧಾನಪರಿಷತ್ ಸದಸ್ಯ ನಾರಾಯಣಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಾ.ಪರಮೇಶ್ವರ್ ಮತ್ತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಷಫಿ ಅಹ್ಮದ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯ ಮಾಡಿದ್ದಾರೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಹೀನಾಯ ಸೋಲಿಗೆ ಮುಖಂಡರಲ್ಲಿನ ಹೊಂದಾಣಿಕೆಯ ಕೊರತೆಯೇ ಕಾರಣವೆನ್ನುವುದು ಬಲ್ಲವರ ಅಭಿಪ್ರಾ ಯವಾಗಿದೆ.

 

ಜಿಲ್ಲೆಯಲ್ಲಿ ಮೂರು ಜನ ಬಿಜೆಪಿ ಶಾಸಕರು, ಸಂಸದ ಹಾಗೂ ಉಸ್ತುವಾರಿ ಸಚಿವರಿ ದ್ದರೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಎರಡು ಸುತ್ತು ಜಿಲ್ಲೆಯಲ್ಲಿ ಪ್ರಚಾರ ಮಾಡಿ ನಾಯಕರಿಗೆ, ಅಭ್ಯರ್ಥಿಗಳಿಗೆ ಹುರಿದುಂಬಿ ಸುವ ಮೂಲಕ ಬಿಜೆಪಿ ಚೇತರಿಸಿಕೊಳ್ಳಲು ಕಾರಣರಾದರೆ, ನಾಲ್ಕು ಶಾಸಕರನ್ನು ಹೊಂದಿರುವ ಜೆಡಿಎಸ್ ಮುಖಂಡರಾದ ಎಚ್.ಡಿ.ಕುಮಾರಸ್ವಾಮಿ ಜಿಲ್ಲೆಯ ಪಾವಗಡ, ತಿಪಟೂರು, ಹೆಬ್ಬೂರು, ಬೆಳಗುಂಬ, ಉರ್ಡಿಗೆರೆ ಕ್ಷೇತ್ರಗಳಲ್ಲಿ ಹೆಚ್ಚಿನ ಪ್ರಚಾರ ನಡೆಸುವ ಮೂಲಕ ಮತದಾರರನ್ನು ತಮ್ಮತ್ತ ಸೆಳೆದು ಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

 

ಆದರೆ ಕಾಂಗ್ರೆಸ್ ಮಾಡಿದ್ದು ಏನು ಎಂಬ ಪ್ರಶ್ನೆ ಅವರ ಮುಖಂಡರನ್ನೇ ಕಾಡುತ್ತಿದೆ. ಜಿಲ್ಲೆಯಲ್ಲಿ ಮೂವರು ಕಾಂಗ್ರೆಸ್ ಶಾಸಕರಿದ್ದರೂ ಒಂದು ದಿನವೂ ಒಟ್ಟಾಗಿ ಪ್ರಚಾರ ನಡೆಸದೆ, ತಮ್ಮಷ್ಟಕ್ಕೆ ತಾವೇ ಎಂಬಂತೆ ಕ್ಷೇತ್ರ ಕಷ್ಟೇ ಸಿಮೀತವಾದರೆ, ಬಹಿರಂಗ ಪ್ರಚಾರ ಮುಕ್ತಾಯದ ಕೊನೆಯ ದಿನ ಒಂದು ಸುದ್ದಿಗೋಷ್ಠಿ ನಡೆಸಿದ್ದನ್ನು ಬಿಟ್ಟರೆ ಕಾಂಗ್ರೆಸ್‌ನಿಂದ ಯಾವುದೇ ಹೆಚ್ಚಿನ ಪ್ರಚಾರ ಕೈಗೊಳ್ಳಲು ಸಾಧ್ಯವಾಗಲ್ಲಿಲ್ಲ.

 

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಆಯಾಯ ಮುಖಂಡರು ಕರೆದರೆ ಸಭೆಯಲ್ಲಿ ಭಾಗವಹಿಸಿದ್ದು ಬಿಟ್ಟರೆ ಎಲ್ಲಿಯೂ ಮತದಾರರ ಓಲೈಕೆಗೆ ತೊಡಗ ಲಿಲ್ಲ. ಹಾಗಾಗಿ ಸರಿಯಾಗಿ ಪ್ರಚಾರ ಕೈಗೊಳ್ಳುವ ಲ್ಲಿಯೂ ವಿಫಲವಾಗಿರುವುದೇ ಹೀನಾಯ ಸೋಲಿಗೆ ಕಾರಣವೆಂದು ಹೇಳಬಹುದಾಗಿದೆ. ಒಟ್ಟಾರೆ ಈ ಚುನಾವಣೆಯಿಂದಲಾದರೂ ಕಾಂಗ್ರೆಸ್ ತನ್ನಲ್ಲಿರುವ ಭಿನ್ನಾಭಿಪ್ರಾಯ ಮರೆತು ಒಟ್ಟಾಗಿ ಚುನಾವಣೆ ಎದುರಿಸುವುದನ್ನು ಕಲಿಯಬೇಕಾಗಿದೆ