Posts Tagged ‘ಮಾಯಾವತಿ’

ಮೂರ್ತಿಗಳ ರಕ್ಷಣೆಗೆ ಮಾಯಾವತಿ ಸರ್ಕಾರದಿಂದ 6,000 ಕೋಟಿ ರೂ!


ಮೂರ್ತಿಗಳ ರಕ್ಷಣೆಗೆ ಮಾಯಾವತಿ ಸರ್ಕಾರದಿಂದ 6,000 ಕೋಟಿ ರೂ!  
ಲಕ್ನೋ, ಮಂಗಳವಾರ, 25 ಮೇ 2010( 17:52 IST )

<!–

–>

PTI

ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ ಅಂದು ಕಾಲ್ತುಳಿತಕ್ಕೆ ಸಿಕ್ಕು ಬಲಿಯಾದವರಿಗೆ ಪರಿಹಾರ ನೀಡಲು ತನ್ನ ಸರ್ಕಾರದ ಬಳಿ ಹಣವಿಲ್ಲ ಎಂದು ಗೋಳಾಡಿದ್ದರೂ, ರಾಜ್ಯದ ಉದ್ದಗಲಕ್ಕೂ ಸ್ಫಾಪಿಸಿದ ಮೂರ್ತಿಗಳನ್ನು ಸಂರಕ್ಷಿಸಲು ಮಾತ್ರ ಹಣವಿದೆ ಎಂಬುದನ್ನು ಸಾಬೀತು ಪಡಿಸಿದ್ದಾರೆ! ಮೂರ್ತಿಗಳು ಹಾಗೂ ಸ್ಮಾರಕಗಳ ಸಂರಕ್ಷಣೆಗಾಗಿ ವಿಶೇಷ ರಕ್ಷಣಾ ಪಡೆಯನ್ನು ನಿಯೋಜಿಸಲು ಚಿಂತಿಸಿದ್ದ ಮಾಯಾವತಿ ಇದೀಗ ಅದಕ್ಕೆ ಮುಂದಡಿಯಿಟ್ಟಿದ್ದಾರೆ.

ಮುಂದಿನ ತಿಂಗಳಲ್ಲಿ ಹೊಸ ರಕ್ಷಣಾ ಪಡೆಯೊಂದರ ಆಯ್ಕೆ ನಡೆಯಲಿದ್ದು, ಆಯ್ಕೆ ಪ್ರಕ್ರಿಯೆ ಈಗ್ಗೆ ಕೆಲವು ತಿಂಗಳ ಹಿಂದೆ ಆರಂಭವಾಗಿದ್ದು, ಮಾಜಿ ಸೈನಿಕರು ಹಾಗೂ ಸ್ಥಳೀಯ ಮಾಜಿ ರಕ್ಷಣಾ ಸಿಬ್ಬಂದಿಗಳನ್ನು ಈ ಕಾರ್ಯಕ್ಕಾಗಿ ನಿಯೋಜಿಸಲಿದ್ದೇವೆ ಎಂದು ರಾಜ್ಯ ಪೊಲೀಸ್ ಮುಖ್ಯಸ್ಥ ಕರಮ್‌ವೀರ್ ಸಿಂಗ್ ಹೇಳಿದ್ದಾರೆ.

ಈ ವಿಶೇಷ ದಳ ನಿಯೋಜನೆಗಾಗಿ ಸರ್ಕಾರಕ್ಕೆ ತಗಲುವ ವೆಚ್ಚ ಸುಮಾರು 6,000 ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚು! ಈ ಯೋಜನೆಯ ಪ್ರಕಾರ 1000 ಮಂದಿಯಿರುವ ವಿಶೇಷ ರಕ್ಷಣಾ ಪಡೆ ಇದಾಗಿದ್ದು, ಇದಕ್ಕೆ ಪ್ರತ್ಯೇಕವಾದ ಇನ್ಸ್‌ಪೆಕ್ಟರ್ ಜನರಲ್, ವಿಶೇಷ ಅಧಿಕಾರಿ ಹಾಗೂ ಡೆಪ್ಯೂಟಿ ಸೂಪರಿಂಟೆಂಡೆಂಟ್‌ಗಳೂ ಇರಲಿದ್ದಾರೆ.

ಲಕ್ನೋ ಹಾಗೂ ನೊಯ್ಡಾದಲ್ಲಿರುವ ಅಂಬೇಡ್ಕರ್ ಸ್ಮಾರಕ, ಕಾನ್ಶಿರಾಮ್ ಸ್ಮಾರಕ, ಕಾನ್ಶಿರಾಮ್ ಸಾಂಸ್ಕೃತಿಕ ಸ್ಥಳ, ರಾಮ ಬಾಯಿ ಅಂಬೇಡ್ಕರ್ ಮೈದಾನ, ಬುದ್ಧ ವಿಹಾರ ಹಾಗೂ ಕಾನ್ಶಿರಾಮ್ ಇಕೋ ಗಾರ್ಡನ್ ಕೂಡಾ ಈ ರಕ್ಷಮಾ ವ್ಯವಸ್ಥೆಯನ್ನು ಪಡೆಯಲಿರುವ ಪ್ರಮುಖ ಸ್ಥಳಗಳು.

ಆದರೆ ಮೂಲಗಳ ಪ್ರಕಾರ, ಈಗಾಗಲೇ ಕೇಂದ್ರ ಸರ್ಕಾರ ಈ ಯೋಜನೆ ಸಂಬಂಧ ಕ್ಯಾತೆ ತೆಗೆದಿದ್ದು, ಇದೂ ಕಾನೂನು ಸಮ್ಮತವಲ್ಲ ಎಂದು ಪತ್ರ ಬರೆಯಲಿದೆ ಎನ್ನಲಾಗಿದೆ. ರಾಜಭವನ ಈ ಬಗ್ಗೆ ಮಾತೆತ್ತದೆ ಕುಳಿತಿದ್ದರೂ, ಈ ಯೋಜನೆ ಸಂಬಂಧ ತನ್ನ ಸಹಮತ ಹೊಂದಿಲ್ಲ ಎನ್ನಲಾಗುತ್ತಿದೆ.

ಕಾಂಗ್ರೆಸ್, ಬಿಜೆಪಿ ಅಂಬೇಡ್ಕರ್ ವಿರೋಧಿಗಳು: ಮಾಯಾವತಿ


ಕಾಂಗ್ರೆಸ್, ಬಿಜೆಪಿ ಅಂಬೇಡ್ಕರ್ ವಿರೋಧಿಗಳು: ಮಾಯಾವತಿ  
ಲಕ್ನೋ, ಶನಿವಾರ, 27 ಮಾರ್ಚ್ 2010( 20:32 IST )

<!–

–>ಕಾಂಗ್ರೆಸ್, ಭಾರತೀಯ ಜನತಾ ಪಕ್ಷ ಹಾಗೂ ಸಮಾಜವಾದಿ ಪಕ್ಷಗಳು ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ ವಿರೋಧಿಗಳಾಗಿದ್ದಾರೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ ಶನಿವಾರ ಗಂಭೀರವಾಗಿ ಆರೋಪಿಸಿದ್ದಾರೆ.

ಮಹಿಳಾ ಮೀಸಲಾತಿ ಮಸೂದೆ ಜಾರಿ ನಿರ್ಧಾರ ಕುರಿತಂತೆ ಮತ್ತೆ ವಾಗ್ದಾಳಿ ನಡೆಸಿರುವ ಅವರು, ಮಹಿಳಾ ಮೀಸಲಾತಿ ಮಸೂದೆಯಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು ಹಾಗೂ ಮೇಲ್ವರ್ಗದ ಬಡ ಮಹಿಳೆಯರಿಗೆ ಯಾವುದೇ ರೀತಿಯ ಪ್ರಯೋಜನವಿಲ್ಲ ಎಂದು ಆರೋಪಿಸಿದ್ದಾರೆ.

ಬಿಎಸ್ಪಿ ಪಕ್ಷದ ಸಭೆಯಲ್ಲಿ ಮಾತನಾಡಿದ ಮಾಯಾವತಿ, ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ನೀತಿ ಮತ್ತು ನಡವಳಿಕೆಗಳನ್ನು ಗಮನಿಸಿದರೆ ಇವರೆಲ್ಲಾ ಯಾವಾಗಲೂ ಅಂಬೇಡ್ಕರ್ ವಿರೋಧಿಗಳಂತೆ ವರ್ತಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತಿದೆ ಎಂದರು.

ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಗೌರವಾರ್ಥವಾಗಿ ಬೃಹತ್ ಸೌಧ, ಪಾರ್ಕ್, ಯೂನಿರ್ವಸಿಟಿಗಳನ್ನು ನಿರ್ಮಿಸಲು ಮುಂದಾದ ಸಂದರ್ಭದಲ್ಲಿಯೇ ಕಾಂಗ್ರೆಸ್, ಬಿಜೆಪಿ ಸೇರಿದಂತೆ ಇನ್ನುಳಿದ ವಿರೋಧ ಪಕ್ಷಗಳು ಅನಾವಶ್ಯಕ ವಿವಾದ ಹುಟ್ಟುಹಾಕಲು ಪ್ರಾರಂಭಿಸಿರುವುದಾಗಿ ಹೇಳಿದರು.